ETV Bharat / sports

ನಮ್ಮನ್ನು ಬೆಳೆಸುವವರು ನಮ್ಮ ಸುತ್ತಲೂ ಇದ್ದರೆ ಯಶಸ್ಸು ನಮ್ಮದೇ: ಸುನಿಲ್ ಚೆಟ್ರಿ - ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ

ಸುನಿಲ್ ಚೆಟ್ರಿ ಭಾರತದ ಸಾರ್ವಕಾಲಿಕ ಫುಟ್‌ಬಾಲ್‌ ಆಟಗಾರ ಮತ್ತು ಅವರು ವಿಶ್ವ ಫುಟ್‌ಬಾಲ್‌ ಅಂತಾರಾಷ್ಟ್ರೀಯ ಸ್ಕೋರರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡುತ್ತಾ, ಜೀವನದಲ್ಲಿ ಸಾಧನೆಗೆ ನಮಗೆ ನಿಜವಾಗಿಯೂ ಯಾರ ಬೆಂಬಲ​ ಮುಖ್ಯ ಎನ್ನುವುದನ್ನು ವಿವರಿಸಿದ್ದಾರೆ.

Sunil Chhetri
ಸುನಿಲ್ ಚೆಟ್ರಿ
author img

By

Published : Jun 14, 2020, 12:55 PM IST

ನವದೆಹಲಿ: ಆಟಗಾರರು ಬೆಳೆಯಲು ಹಾಗು ಅವರು ಸರಿಯಾದ ದಿಕ್ಕಿನಲ್ಲಿ ಮುಂದುವರಿಯಬೇಕಾದರೆ ಅವರು ಎಂತಹ ಜನರಿಂದ ಸುತ್ತುವರಿದಿದ್ದಾರೆ ಅನ್ನೋದು ಮುಖ್ಯ ಎಂದು ಭಾರತೀಯ ಫುಟ್‌ಬಾಲ್‌ ತಂಡದ ನಾಯಕ ಸುನಿಲ್ ಚೆಟ್ರಿ ಅಭಿಪ್ರಾಯಪಟ್ಟಿದ್ದಾರೆ.

ನೀವು ಬೆಳೆಯಬೇಕಾದರೆ ನಿಮ್ಮೊಂದಿಗೆ ಬೆಳೆಯಲು ಬಯಸುವ ಜನರೊಂದಿಗೆ ಸುತ್ತುವರೆದಿರಿ. ನಿಮ್ಮ ಹಿತೈಷಿಗಳು ನಿಮ್ಮನ್ನು ಸರಿಯಾದ ರೀತಿಯಲ್ಲಿ ಪುಶ್​ ಮಾಡಬೇಕು. ಅಂತೆಯೇ ನೀವು ಪ್ರತಿದಿನವೂ ಬೆಳೆಯಬೇಕು ಎಂದು 35 ವರ್ಷದ ಚೆಟ್ರಿ ಭಾರತೀಯ ಫುಟ್‌ಬಾಲ್‌ ತಂಡದ ಅಧಿಕೃತ ಫೇಸ್‌ಬುಕ್ ಪೇಜ್​ನಲ್ಲಿ ನಡೆಸಿದ ಲೈವ್ ಚಾಟ್‌ನಲ್ಲಿ ಹೇಳಿದರು.

ನನ್ನನ್ನು ಬೆಂಬಲಿಸುವ ಟೀಂ ಎಂದರೆ ಅದು ನನ್ನ ಆಪ್ತ ಸ್ನೇಹಿತರು, ಹೆಂಡತಿ ಮತ್ತು ಕುಟುಂಬ ವರ್ಗ. ಜನರಿಗೆ ಅವರ ಬಗ್ಗೆ ತಿಳಿದಿಲ್ಲ, ನಾನು ಮಾತ್ರ ಹೊರಗೆ ಹೋಗಿ ನನ್ನ ಕರ್ತವ್ಯವನ್ನು ಮಾಡುತ್ತೇನೆ. ನನಗೆ ನಾನೇ ಸರಿಯಾದ ಸಲಹೆ ನೀಡಿಕೊಳ್ಳುತ್ತೇನೆ. ನನ್ನ ಮುಖದ ಮೇಲೆ ನೀನು ತಪ್ಪು ಮಾಡಿದ್ದೀಯಾ ಎಂದು ಮೂಡುವ ಭಾವನೆ ನನಗೆ ಪ್ರತಿದಿನ ಸುಧಾರಿಸಲು ಸಹಾಯ ಮಾಡಿದೆ ಅನ್ನೋದು ಚೆಟ್ರಿ ಮನದ ಮಾತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.