ಮ್ಯಾಂಚೆಸ್ಟರ್ : ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ಲಿವರ್ ಪೂಲ್ ತಂಡ 1990ರ ಬಳಿಕ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ಗೆದ್ದಿದೆ.
ಮ್ಯಾಂಚೆಸ್ಟರ್ ಸಿಟಿ ತಂಡದ ಸವಾಲನ್ನು 2-1 ಗೋಲುಗಳಿಂದ ಎದುರಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಇನ್ನೂ ಏಳು ಪಂದ್ಯಗಳು ಬಾಕಿ ಇರುವಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಜುಗಾರ್ನ್ ಕ್ಲೋಪ್ ನೇತೃತ್ವದ ಲಿವರ್ ಪೂಲ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
![Liverpool breaks 30-year title drought by winning Premier League](https://etvbharatimages.akamaized.net/etvbharat/prod-images/thumbs_b_c_7c94a01674f4cfb8ae05e0d3ed4c69ef_2606newsroom_1593134687_363.jpg)
ಎರಡನೇ ಸ್ಥಾನದಲ್ಲಿದ್ದ ಮ್ಯಾಂಚೆಸ್ಟರ್ ಸಿಟಿ ತಂಡ ಗುರುವಾರ ಸೋಲಿನೊಂದಿಗೆ 23 ಅಂಕಕ್ಕೆ ತೃಪ್ತಿಪಡುವಂತಾಯಿತು. ಬುಧವಾರ ಎನ್ಫೀಲ್ಡ್ನಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡವನ್ನು 4-0 ಅಂತರಲ್ಲಿ ಸೋಲಿಸುವ ಮೂಲಕ ಲೀವರ್ ಪೂಲ್ ಪ್ರಶಸ್ತಿಯಿಂದ ಕೇವಲ ಎರಡು ಅಂಕಗಳ ದೂರದಲ್ಲಿತ್ತು. ಈ ಸೀಸನ್ನಲ್ಲಿ ನಡೆದ 31 ಪಂದ್ಯಗಳ ಪೈಕಿ ಲಿವರ್ ಪೂಲ್ 28 ಪಂದ್ಯಗಳನ್ನು ಗೆದ್ದಿದೆ.
![Liverpool breaks 30-year title drought by winning Premier League](https://etvbharatimages.akamaized.net/etvbharat/prod-images/rtrmadp_soccer-england-lei-liv-report_1013144752_rc293e9zplc0_2019-12-26t214101zjpg-js550115862_2606newsroom_1593134687_835.jpg)
188ರಲ್ಲಿ ದೇಶದಲ್ಲಿ ಲೀಗ್ ಪಂದ್ಯಾವಳಿಗಳು ಪ್ರಾರಂಭವಾದ ಬಳಿಕ ಯಾವುದೇ ತಂಡ ಏಳು ಪಂದ್ಯಗಳು ಬಾಕಿ ಇರುವಾಗ ಗೆದ್ದ ಇತಿಹಾಸವಿಲ್ಲ ಮತ್ತು ಜೂನ್ನಲ್ಲಿ ಯಾವುದೇ ತಂಡ ಪ್ರೀಮಿಯರ್ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ.
![Liverpool breaks 30-year title drought by winning Premier League](https://etvbharatimages.akamaized.net/etvbharat/prod-images/liverpool_2606newsroom_1593134687_825.jpg)
ಸ್ಟ್ಯಾಮ್‌ಫೋರ್ಡ್ ಬ್ರಿಡ್ಜ್ ಕ್ರೀಡಾಂಗಣದಿಂದ ಕೊನೆಯ ಸೀಟಿ ಕೇಳಿದಾಗ ಲಿವರ್ ಪೂಲ್ ಅಭಿಮಾನಿಗಳು ಹರ್ಷೋದ್ಗಾರ ಮೊಳಗಿಸಿದರು. ಕೊರೊನಾ ಹಿನ್ನೆಲೆ ಕಡಿಮೆ ಸಂಖ್ಯೆಯಲ್ಲಿ ಜನರು ಸೇರಿ ಸಂಭ್ರಮಾಚರಣೆ ಮಾಡಿದರು.