ಬಾರ್ಸಿಲೋನಾ (ಸ್ಪೇನ್): ಫುಟ್ಬಾಲ್ ಲೋಕದ ಸ್ಟಾರ್ ಲಿಯೋನಲ್ ಮೆಸ್ಸಿ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ನ್ನು ತೊರೆಯಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಲಬ್, ಆರ್ಥಿಕ ಮತ್ತು ರಚನಾತ್ಮಕ ಅಡೆತಡೆಗಳು ಈ ಬೆಳವಣಿಗೆಗೆ ಕಾರಣ ಎಂದು ತಿಳಿಸಿದೆ.
ಬಾರ್ಸಿಲೋನಾ ಮತ್ತು ಲಿಯೋನಲ್ ಮೆಸ್ಸಿ ಗುರುವಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆದಿತ್ತು. ಆದರೆ ಕ್ಲಬ್ ಹೇಳಿಕೆ ಪ್ರಕಾರ, ಈ ನೋಂದಣಿಗೆ ಸ್ಪ್ಯಾನಿಷ್ ಲಾಲಿಗಾ ನಿಯಮಗಳು ಅಡ್ಡಿಯಾಗುತ್ತವೆ. ಹೀಗಾಗಿ ಮೆಸ್ಸಿ ಬಾರ್ಸಿಲೋನಾದೊಂದಿಗೆ ಮುಂದುವರೆಯುವುದಿಲ್ಲ. ಮೆಸ್ಸಿ ಹಾಗೂ ಕ್ಲಬ್‌ನ ಆಶಯಗಳು ಅಂತಿಮವಾಗಿ ಈಡೇರುತ್ತಿಲ್ಲ, ಈ ಬಗ್ಗೆ ಎರಡೂ ಕಡೆಯವರು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
-
LATEST NEWS | Leo #Messi will not continue with FC Barcelona
— FC Barcelona (@FCBarcelona) August 5, 2021 " class="align-text-top noRightClick twitterSection" data="
">LATEST NEWS | Leo #Messi will not continue with FC Barcelona
— FC Barcelona (@FCBarcelona) August 5, 2021LATEST NEWS | Leo #Messi will not continue with FC Barcelona
— FC Barcelona (@FCBarcelona) August 5, 2021
'ಬಾರ್ಸಿಲೋನಾ ಕ್ಲಬ್‌ನ ಶ್ರೇಷ್ಠತೆಗೆ ನೀಡಿದ ಕೊಡುಗೆಗಾಗಿ ಹೃದಯಪೂರ್ವಕ ಕೃತಜ್ಞತೆಗಳು, ಮೆಸ್ಸಿಯವರ ಭವಿಷ್ಯದ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಶುಭ ಹಾರೈಸುತ್ತೇವೆ ಎಂದು ಎಫ್ಸಿಬಾರ್ಸಿಲೋನಾ ಡಾಟ್ ಕಾಮ್ ಹೇಳಿದೆ. ಅಲ್ಲದೆ, ಬಾರ್ಸಿಲೋನಾ ಕ್ಲಬ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಮೆಸ್ಸಿಗೆ ಶುಭ ಕೋರಿ ಟ್ವೀಟ್ ಮಾಡಿದೆ.
-
Thank you, Leo. pic.twitter.com/cdS9xWe8Me
— FC Barcelona (@FCBarcelona) August 5, 2021 " class="align-text-top noRightClick twitterSection" data="
">Thank you, Leo. pic.twitter.com/cdS9xWe8Me
— FC Barcelona (@FCBarcelona) August 5, 2021Thank you, Leo. pic.twitter.com/cdS9xWe8Me
— FC Barcelona (@FCBarcelona) August 5, 2021
2004ರಲ್ಲಿ ಬಾರ್ಸಿಲೋನಾ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದ ನಂತರ ಮೆಸ್ಸಿ ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಈ ಕ್ಲಬ್ನೊಂದಿಗೆ ಕಳೆದಿದ್ದಾರೆ. ಜೂನ್ 30ಕ್ಕೆ ಲಿಯೋನಲ್ ಮೆಸ್ಸಿ ಒಪ್ಪಂದ ಮುಕ್ತಾಯವಾಗಿತ್ತು. ಬಳಿಕ ಮೆಸ್ಸಿ, ಸ್ಪ್ಯಾನಿಷ್ ಕ್ಲಬ್ ಬಾರ್ಸಿಲೋನಾದೊಂದಿಗೆ ಹೊಸ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ವರದಿಯಾಗಿತ್ತು. ಹಿಂದಿನ ಒಪ್ಪಂದದಲ್ಲಿ ಪಡೆಯುತ್ತಿದ್ದ ವೇತನದಲ್ಲಿ ಶೇ.50ರಷ್ಟು ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದ್ದವು.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚು ಲೈಕ್.. ದಾಖಲೆ ಬರೆದ ಲಿಯೋನಲ್ ಮೆಸ್ಸಿ ಪೋಸ್ಟ್