ಸೌತಾಂಪ್ಟನ್ : ಭಾರತದ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ತಾಳ್ಮೆಯ 49 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದರ ಜೊತೆಗೆ ವೈಯಕ್ತಿಕವಾಗಿ ನ್ಯೂಜಿಲ್ಯಾಂಡ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳಿಸಿದ 2ನೇ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಕೇನ್ ವಿಲಿಯಮ್ಸನ್ 177 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 49 ರನ್ಗಳಿಸಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 7,178 ರನ್ಗಳಿಸಿ ಕಿವೀಸ್ ಪರ 2ನೇ ಗರಿಷ್ಠ ಸ್ಕೋರರ್ ಎನಿಸಿದರು. ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ 7,172 ರನ್ಗಳಿಸಿದ್ದರು.
ಕೇನ್ ವಿಲಿಯಮ್ಸನ್ ನ್ಯೂಜಿಲ್ಯಾಂಡ್ ಪರ ಅಧಿಕ ಶತಕ ಸಿಡಿಸಿರುವ ಬ್ಯಾಟ್ಸ್ಮನ್ ಎಂಬ ದಾಖಲೆ ಹೊಂದಿದ್ದಾರೆ. ಅವರು 24 ಶತಕ ಸಿಡಿಸಿದರೆ, 2ನೇ ಸ್ಥಾನದಲ್ಲಿರುವ ರಾಸ್ ಟೇಲರ್ 19 ಶತಕ ಸಿಡಿಸಿದ್ದಾರೆ.
ಟೆಸ್ಟ್ನಲ್ಲಿ ನ್ಯೂಜಿಲ್ಯಾಂಡ್ ಪರ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್
ರಾಸ್ ಟೇಲರ್- 7,517
ಕೇನ್ ವಿಲಿಯಮ್ಸನ್-7,178
ಸ್ಟೀಫನ್ ಫ್ಲೆಮಿಂಗ್- 7,172
ಬ್ರೆಂಡನ್ ಮೆಕಲಮ್ -6,453
ಮಾರ್ಟಿನ್ ಕ್ರೋವ್- 5,444
ಇದನ್ನು ಓದಿ:WTC Final : ಶಮಿ ಈ ಸಾಧನೆ ಮಾಡಿದ ಭಾರತದ ಪರ ಮೊದಲ ಬೌಲರ್