ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಚೊಚ್ಚಲ ಆವೃತ್ತಿಗೆ ನಿನ್ನೆ ಸಂಜೆ ಭರ್ಜರಿ ಚಾಲನೆ ಸಿಕ್ಕಿದೆ. ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 143 ರನ್‌ಗಳ ಅಂತರದ ಅಮೋಘ ಜಯ ಸಾಧಿಸಿತು.
ಮುಂಬೈ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು 30 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 65 ರನ್ ಸಿಡಿಸಿದರು. ತಂಡವು 5 ವಿಕೆಟ್ ನಷ್ಟಕ್ಕೆ 207 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಇದಾದ ನಂತರ ಸೈಕಾ ಇಶಾಕ್ (4/11) ನೇತೃತ್ವದ ಮುಂಬೈ ಬೌಲರ್‌ಗಳು ಗುಜರಾತ್ ಜೈಂಟ್ಸ್ ತಂಡವನ್ನು 15.1 ಓವರ್‌ಗಳಲ್ಲಿ ಕೇವಲ 64 ರನ್‌ಗಳಿಗೆ ಕಟ್ಟಿ ಹಾಕಿದರು. ಈ ಮೂಲಕ ಮುಂಬೈ ಸ್ಮರಣೀಯ ವಿಜಯ ದಾಖಲಿಸಿತು.
-
For her incredible captain's knock of 65(30), skipper @ImHarmanpreet bagged the Player of the Match award 👏👏 #GGvMI @mipaltan secured a 143-run victory over Gujarat Giants in the opening game of the #TATAWPL 👌👌 pic.twitter.com/HHbnLj8BZQ
— Women's Premier League (WPL) (@wplt20) March 4, 2023 " class="align-text-top noRightClick twitterSection" data="
">For her incredible captain's knock of 65(30), skipper @ImHarmanpreet bagged the Player of the Match award 👏👏 #GGvMI @mipaltan secured a 143-run victory over Gujarat Giants in the opening game of the #TATAWPL 👌👌 pic.twitter.com/HHbnLj8BZQ
— Women's Premier League (WPL) (@wplt20) March 4, 2023For her incredible captain's knock of 65(30), skipper @ImHarmanpreet bagged the Player of the Match award 👏👏 #GGvMI @mipaltan secured a 143-run victory over Gujarat Giants in the opening game of the #TATAWPL 👌👌 pic.twitter.com/HHbnLj8BZQ
— Women's Premier League (WPL) (@wplt20) March 4, 2023
ಗುಜರಾತ್ ನಾಯಕಿ ಬೆತ್ ಮೂನಿ ಮೊದಲ ಓವರ್‌ನಲ್ಲಿಯೇ ಗಾಯಗೊಂಡು, ನಂತರ ಬ್ಯಾಟಿಂಗ್‌ಗೆ ಮರಳಲು ಸಾಧ್ಯವಾಗಲಿಲ್ಲ. ಮುಂಬೈ ಆರಂಭದಿಂದಲೂ ಗುಜರಾತ್ ಮೇಲೆ ಪ್ರಾಬಲ್ಯ ಸಾಧಿಸಿತು. ಮಾತ್ರವಲ್ಲದೇ, ಮೊದಲ ಪಂದ್ಯದಲ್ಲಿಯೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಆಕ್ರಮಣಕಾರಿ ಪ್ರದರ್ಶನ ತೋರಿತು.
ಅಬ್ಬರಿಸಿದ ಹರ್ಮನ್: ಕೇವಲ 22 ಎಸೆತಗಳಲ್ಲಿಯೇ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ ಬಾರಿಸಿದರು. ಇವರು ಮೋನಿಕಾ ಪಟೇಲ್ ಅವರ ಒಂದೇ ಓವರ್ನಲ್ಲಿ 21 ರನ್ ಚಚ್ಚಿದರು. ತಂಡದಲ್ಲಿರುವ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ (24 ಎಸೆತಗಳಲ್ಲಿ ಔಟಾಗದೆ 45) ರನ್ ಗಳಿಸಿದರು. ಇನ್ನೋರ್ವ, ವೆಸ್ಟ್ ಇಂಡೀಸ್ ಬ್ಯಾಟರ್ ಮ್ಯಾಥ್ಯೂಸ್ ಮೊದಲ ಪಂದ್ಯಾವಳಿಯಲ್ಲಿಯೇ ಅರ್ಧಶತಕ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಕೇವಲ ಮೂರು ರನ್‌ಗಳಿಂದ ಅವಕಾಶ ತಪ್ಪಿಸಿಕೊಂಡರು. ಇವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳು ಸೇರಿದ್ದು, 31 ಎಸೆತಗಳಲ್ಲಿ 47 ರನ್ ಪೇರಿಸಿದರು.
-
The Safari Powerful Striker of the Match award for the match between @GujaratGiants and @mipaltan goes to Hayley Matthews.#TATAWPL | #TataSafari | #ReclaimYourLife | #SafariXTataWPL | @TataMotors_Cars pic.twitter.com/MUYF0vllSL
— Women's Premier League (WPL) (@wplt20) March 4, 2023 " class="align-text-top noRightClick twitterSection" data="
">The Safari Powerful Striker of the Match award for the match between @GujaratGiants and @mipaltan goes to Hayley Matthews.#TATAWPL | #TataSafari | #ReclaimYourLife | #SafariXTataWPL | @TataMotors_Cars pic.twitter.com/MUYF0vllSL
— Women's Premier League (WPL) (@wplt20) March 4, 2023The Safari Powerful Striker of the Match award for the match between @GujaratGiants and @mipaltan goes to Hayley Matthews.#TATAWPL | #TataSafari | #ReclaimYourLife | #SafariXTataWPL | @TataMotors_Cars pic.twitter.com/MUYF0vllSL
— Women's Premier League (WPL) (@wplt20) March 4, 2023
ಇದನ್ನೂ ಓದಿ: WPL 2023: ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಗುಜರಾತ್ ಜೈಂಟ್ಸ್, ಅದ್ಧೂರಿ ಮನರಂಜನೆಯ ಆರಂಭ
ಇನ್ನು ಮೊದಲ ಓವರ್‌ನಲ್ಲಿಯೇ ಗುಜರಾತ್ ಜೈಂಟ್ಸ್ ನಾಯಕಿ ಮತ್ತು ತಂಡದ ಅತ್ಯುತ್ತಮ ಬ್ಯಾಟರ್ ಬೆತ್ ಮೂನಿ ಎಡ ಮೊಣಕಾಲಿಗೆ ಗಾಯಮಾಡಿಕೊಂಡು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಗುಜರಾತ್ ಸೋಲಿಗೆ ಇದೂ ಒಂದು ಕಾರಣವಾಯಿತು. ಇದಾದ ನಂತರ ದಯಾಳನ್ ಹೇಮಲತಾ ಹೊರತುಪಡಿಸಿ (29 ರನ್) ಗುಜರಾತ್‌ನ ಯಾವ ಆಟಗಾರ್ತಿಯರೂ ಗಮನಾರ್ಹ ಪ್ರದರ್ಶನ ನೀಡಲಿಲ್ಲ. ಅವರೆಲ್ಲ ಒಬ್ಬರ ನಂತರ ಮತ್ತೊಬ್ಬರಂತೆ ವಿಕೆಟ್ ಒಪ್ಪಿಸುತ್ತಾ ಮೈದಾನದಿಂದ ಹೊರನಡೆದರು. ಅಂತಿಮವಾಗಿ ತಂಡ 64 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಮುಂಬೈಗೆ ಶರಣಾಯಿತು.
-
A special celebration to mark a historic occasion! 👏👏
— Women's Premier League (WPL) (@wplt20) March 4, 2023 " class="align-text-top noRightClick twitterSection" data="
The #TATAWPL has truly begun! 🎆 pic.twitter.com/4OFP4zun4G
">A special celebration to mark a historic occasion! 👏👏
— Women's Premier League (WPL) (@wplt20) March 4, 2023
The #TATAWPL has truly begun! 🎆 pic.twitter.com/4OFP4zun4GA special celebration to mark a historic occasion! 👏👏
— Women's Premier League (WPL) (@wplt20) March 4, 2023
The #TATAWPL has truly begun! 🎆 pic.twitter.com/4OFP4zun4G
ಗುಜರಾತ್ ಜೈಂಟ್ಸ್ ತಂಡ: ಬೆತ್ ಮೂನಿ (ನಾಯಕಿ), ಆಶ್ಲೀಗ್ ಗಾರ್ಡನರ್, ಸೋಫಿಯಾ ಡಂಕ್ಲಿ, ಹರ್ಲೀನ್ ಡಿಯೋಲ್, ಅನ್ನಾಬೆಲ್ ಸದರ್ಲ್ಯಾಂಡ್, ಡಿಯಾಂಡ್ರಾ ಡಾಟಿನ್, ಸ್ನೇಹ ರಾಣಾ, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ದಯಾಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಾಲಾ, ಅಶ್ವನಿ ಕುಮಾರಿ , ಶಬ್ಮಾನ್ ಶಕೀಲ್, ಪಾರುನಿಕ ಸಿಸೋಡಿಯಾ.
ಮುಂಬೈ ಇಂಡಿಯನ್ಸ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ) , ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಾಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯೋನ್, ಪ್ರಿಯಾಂಕಾ ಬಾಲಾ, ಹುಮೈರಾ ಕಾಜಿತ್, ನೀಲಂ ಬಿಶ್ತ್, ಸೋನಮ್ ಯಾದವ್, ಜಿಂತಾಮನಿ ಕಾಲಿತ.