ಮುಂಬೈ: ಬಹುನಿರೀಕ್ಷಿತ ವುಮೆನ್ ಪ್ರೀಮಿಯರ್ ಲೀಗ್ (ವನಿತೆಯರ ಐಪಿಎಲ್)ನ ಮೆಗಾ ಹರಾಜು ಪ್ರಕ್ರಿಯೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯುತ್ತಿದ್ದು, 246 ಭಾರತೀಯ ಮತ್ತು ಒಟ್ಟು 409 ಆಟಗಾರ್ತಿಯರ ಹರಾಜು ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಆರ್ಸಿಬಿ, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಐದು ತಂಡಗಳು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿದೆ. ಬಹುನಿರೀಕ್ಷಿತ ಸ್ಮೃತಿ ಮಂಧಾನ ಬೆಂಗಳೂರು ತಂಡದ ಪಾಲಾಗಿದ್ದು, ಕೌರ್ ಮುಂಬೈಗೆ ಬಿಕರಿಯಾಗಿದ್ದಾರೆ.
ಮೊದಲ ಸೆಟ್ನ ನಂತರ ಏಳು ಆಟಗಾರರು ಮಾರಾಟವಾಗಿದ್ಯುದು, ಆರ್ಸಿಬಿ ಸ್ಮೃತಿ ಮಂಧಾನ ಅವರಿಗೆ 3.40 ಕೋಟಿ, ನ್ಯೂಜಿಲ್ಯಾಂಡ್ ಸೋಫಿ ಡಿವೈನ್ 50 ಲಕ್ಷಕ್ಕೆ, ಆಸ್ಟ್ರೇಲಿಯಾದ ಎಲೆಸ್ ಪೆರ್ರಿ 1.70 ಕೋಟಿಗೆ, ವೇಗಿ ರೇಣುಕಾ ಸಿಂಗ್ ಆರ್ಸಿಬಿಗೆ 1.5 ಕೋಟಿಗೆ ಖರೀದಿಸಿದೆ. ಮಂಬೈ ಇಂಡಿಯನ್ಸ್ ಹರ್ಮನ್ಪ್ರೀತ್ ಕೌರ್ ಅವರನ್ನು 1.80 ಕೋಟಿ ರೂಗೆ, ಗುಜರಾತ್ ಜೈಂಟ್ಸ್ ಆಸ್ಟ್ರೇಲಿಯಾದ ಆಶ್ಲೀಗ್ ಗಾರ್ಡ್ನರ್ 3.20 ಕೋಟಿಗೆ, ಯುಪಿ ವಾರಿಯರ್ಸ್ ಇಂಗ್ಲೆಂಡ್ನ ಸೋಫಿ ಎಕ್ಲೆಸ್ಟೋನ್ 1.80 ಕೋಟಿಗೆ ಖರೀದಿಸಿದೆ. ವೆಸ್ಟ್ ಇಂಡೀಸ್ನ ಹೇಲಿ ಮ್ಯಾಥ್ಯೂಸ್ ಮಾರಾಟವಾಗದೇ ಉಳಿದಿದ್ದಾರೆ.
ಟೀ ಮ್ಯಾನೇಜ್ ಮೆಂಟ್ ಹೀಗಿದೆ: ಗುಜರಾತ್ ಜೈಂಟ್ಸ್: ರಾಚೆಲ್ ಹೇನ್ಸ್ (ಮುಖ್ಯ ಕೋಚ್), ನೂಶಿನ್ ಅಲ್ ಖದೀರ್ (ಬೌಲಿಂಗ್ ಕೋಚ್), ತುಷಾರ್ ಅರೋಥೆ (ಬ್ಯಾಟಿಂಗ್ ಕೋಚ್), ಮಿಥಾಲಿ ರಾಜ್ (ಮಾರ್ಗದರ್ಶಿ ಮತ್ತು ಸಲಹೆಗಾರ)
ಯುಪಿ ವಾರಿಯರ್ಜ್: ಜಾನ್ ಲೂಯಿಸ್ (ಮುಖ್ಯ ಕೋಚ್), ಅಂಜು ಜೈನ್ ಮತ್ತು ಆಶ್ಲೇ ನೋಫ್ಕೆ (ಸಹಾಯಕ ತರಬೇತುದಾರರು), ಲಿಸಾ ಸ್ಥಾಲೇಕರ್ (ಮಾರ್ಗದರ್ಶಿ)
ದೆಹಲಿ ಕ್ಯಾಪಿಟಲ್ಸ್ : ಜೊನಾಥನ್ ಬ್ಯಾಟಿ (ಮುಖ್ಯ ಕೋಚ್), ಹೇಮಲತಾ ಕಲಾ ಮತ್ತು ಲೀಸಾ ಕೀಟ್ಲಿ (ಸಹಾಯಕ ಕೋಚ್ಗಳು), ಬಿಜು ಜಾರ್ಜ್ (ಫೀಲ್ಡಿಂಗ್ ಕೋಚ್)
ಮುಂಬೈ ಇಂಡಿಯನ್ಸ್: ಶಾರ್ಲೆಟ್ ಎಡ್ವರ್ಡ್ಸ್ (ಮಾರ್ಗದರ್ಶಿ ಮತ್ತು ಸಲಹೆಗಾರ್ತಿ), ಜೂಲನ್ ಗೋಸ್ವಾಮಿ (ಬೌಲಿಂಗ್ ಕೋಚ್ ಮತ್ತು ಮೆಂಟರ್), ದೇವೀಕಾ ಪಾಲ್ಶಿಕಾರ್ (ಬ್ಯಾಟಿಂಗ್ ಕೋಚ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಇನ್ನೂ ಕೋಚ್ ಘೋಷಣೆಯಾಗಿಲ್ಲ.
10 ಭಾರತೀಯರು ಸೇರಿದಂತೆ ಒಟ್ಟು 24 ಆಟಗಾರರು ಅತಿ ಹೆಚ್ಚು ಮೂಲ ಬೆಲೆ 50 ಲಕ್ಷಕ್ಕೆ ನೋಂದಾಯಿಸಿಕೊಂಡಿದ್ದಾರೆ. ಭಾರತದ ಆಟಗಾರ್ತಿಯರಲ್ಲಿ ಸ್ಮೃತಿ ಮಂಧಾನ, ಹರ್ಮನ್ಪ್ರೀತ್ ಕೌರ್ ಇದ್ದಾರೆ. ಉಳಿದಂತೆ ಮೂಲ ಬೆಲೆ 40 ಲಕ್ಷಕ್ಕೆ 30 ಆಟಗಾರರು ನೋಂದಾಯಿಸಿಕೊಂಡಿದ್ದಾರೆ ಅದರಲ್ಲಿ 8 ಭಾರತೀಯ ಆಟಗಾರರಿದ್ದಾರೆ.
ಇದನ್ನೂ ಓದಿ: ಇಂದು ಮುಂಬೈನಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ