ETV Bharat / sports

ವಿಶ್ವಕಪ್​: ಪಂದ್ಯಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಪಡೆದ ಸೂರ್ಯ ಕುಮಾರ್ ಯಾದವ್ - ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನೆದರ್ಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಅಮೋಘ ಫೀಲ್ಡಿಂಗ್ ಮಾಡಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಫೀಲ್ಡರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

World Cup
ವಿಶ್ವಕಪ್​: ಪಂದ್ಯಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಪಡೆದ ಸೂರ್ಯ ಕುಮಾರ್ ಯಾದವ್
author img

By ETV Bharat Karnataka Team

Published : Nov 13, 2023, 1:53 PM IST

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್​​ ವಿರುದ್ಧ ಭಾರತ ಆರಾಮವಾಗಿ ಗೆಲುವು ಸಾಧಿಸಿದೆ. ವಿಶ್ವಕಪ್ ಪಂದ್ಯಾವಳಿಯ ನೆಚ್ಚಿನ ತಂಡವಾದ ಭಾರತವು ಸತತ ಒಂಬತ್ತು ಲೀಗ್ ಪಂದ್ಯಗಳನ್ನು ಗೆಲ್ಲಲು ಆಲ್ ರೌಂಡ್ ಪ್ರದರ್ಶನ ನೀಡಿತು. ನಿನ್ನೆ (ಭಾನುವಾರ) ನಡೆದ ನೆದರ್​ರ್ಲೆಂಡ್ಸ್​ ವಿರುದ್ಧದ ಪಂದ್ಯದುದ್ದಕ್ಕೂ ಉತ್ತಮ ಫೀಲ್ಡಿಂಗ್ ಮಾಡಿದ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್​ಗೆ ಪಂದ್ಯಶ್ರೇಷ್ಠ ಫೀಲ್ಡರ್ ಪ್ರಶಸ್ತಿ ಕೊಡಲಾಯಿತು.

ಸೂರ್ಯನನ್ನು ಅಪ್ಪಿಕೊಂಡು ಹುರಿದುಂಬಿಸಿದ ಆಟಗಾರರು: ಭಾರತದ ಪಂದ್ಯದ ನಂತರ ಪ್ರೇಕ್ಷಕರು, ಫೀಲ್ಡರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಯಾವಾಗ ನೀಡುತ್ತಾರೆ ಎಂದು ಕಾಯುತ್ತಾರೆ. ಈ ಪ್ರಶಸ್ತಿಯನ್ನು ಭಾರತೀಯ ಫೀಲ್ಡಿಂಗ್ ಕೋಚ್, ಅತ್ಯುತ್ತಮ ಫೀಲ್ಡಿಂಗ್ ಆಟಗಾರನಿಗೆ ಪ್ರದಾನ ಮಾಡಲಾಗುತ್ತದೆ. ನೆದರ್ಲ್ಯಾಂಡ್​​​ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್​ಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಘೋಷಣೆಯಾದ ತಕ್ಷಣವೇ ಎಲ್ಲಾ ಆಟಗಾರರು ಸೂರ್ಯ ಕುಮಾರ್​ ಅವರನ್ನು ಅಪ್ಪಿಕೊಂಡು ಹುರಿದುಂಬಿಸಿದರು.

ಫೀಲ್ಡಿಂಗ್ ಆಫ್ ದಿ ಮ್ಯಾಚ್ ಫೀಲ್ಡರ್ಸ್ ಪ್ರಶಸ್ತಿಯನ್ನು ಪ್ರತಿ ಬಾರಿಯೂ ವಿಭಿನ್ನವಾಗಿ ಘೋಷಿಸಲಾಗುತ್ತದೆ. ಕೆಲವೊಮ್ಮೆ ಇದನ್ನು ಫ್ಲೈಯಿಂಗ್ ಕ್ಯಾಮೆರಾ ಮೂಲಕ ಘೋಷಿಸಲಾಗುತ್ತದೆ. ಇನ್ನೂ ಕೆಲವೊಮ್ಮೆ ಅದನ್ನು ಪ್ಲೇಯರ್ ಮೂಲಕ ಘೋಷಿಸಲಾಗುತ್ತದೆ. ಈ ಬಾರಿ ಎಂ. ಚಿನ್ನಸ್ವಾಮಿ ಮೈದಾನದ ಸಿಬ್ಬಂದಿ ಘೋಷಣೆ ಮಾಡಿದ್ದಾರೆ. ನಂತರ, ಸೂರ್ಯಕುಮಾರ್ ಯಾದವ್ ಸಿಬ್ಬಂದಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

  • Suryakumar Yadav took a picture with the staff of Chinnaswamy as they announced the winner for best fielder of the day.

    - A lovely gesture by Sky......!!!! pic.twitter.com/cEOGecJmTj

    — Johns. (@CricCrazyJohns) November 13, 2023 " class="align-text-top noRightClick twitterSection" data=" ">

2023ರ ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಕೊನೆಯ ಲೀಗ್​ ಹಂತದ ಪಂದ್ಯದಲ್ಲಿ ನೆದರ್ಲ್ಯಾಂಡ್​​ ವಿರುದ್ಧ 160 ರನ್‌ಗಳಿಂದ ಅದ್ಭುತ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ತಮ್ಮ ಶತಕಗಳನ್ನು ದಾಖಲಿಸುವುದರೊಂದಿಗೆ ಎಲ್ಲಾ ಅಗ್ರ ಐದು ಬ್ಯಾಟರ್‌ಗಳ ಉತ್ತಮ ಪ್ರದರ್ಶನದಿಂದ ಭಾರತ ತಂಡವು ಬೃಹತ್​ ಮೊತ್ತವನ್ನು ದಾಖಲಿಸಿತು. ಭಾರತದ ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಕೂಡ ತಲಾ ಅರ್ಧ ಶತಕಗಳನ್ನು ಗಳಿಸುವ ಮೂಲಕ ಭಾರತದ ಬ್ಯಾಟಿಂಗ್ ಪರಾಕ್ರಮವನ್ನು ಮತ್ತಷ್ಟು ಗಟ್ಟಿಗೊಳಿಸಲು ಕೊಡುಗೆ ನೀಡಿದರು.

410 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್​ ತಂಡ ಕೇವಲ 250 ರನ್‌ಗಳಿಗೆ ಸೋಲು ಅನುಭವಿಸಿತು. ಪಂದ್ಯದಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಬೌಲಿಂಗ್​ ಮಾಡಿದರು. ಅಷ್ಟೇ ಅಲ್ಲ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಲಾ ಒಂದು ವಿಕೆಟ್ ಪಡೆದರು. ಈಗ ಭಾರತದ ಸೆಮಿಫೈನಲ್ ಪಂದ್ಯವು ನವೆಂಬರ್ 15 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ನಂತರ, ನವೆಂಬರ್ 16 ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ನ್ಯೂಜಿಲ್ಯಾಂಡ್​ ವಿರುದ್ಧ ನಮ್ಮ ಆಟ ಇದೇ ವೇಗದಲ್ಲಿರುತ್ತೆ: ಭಾರತದ ಫೀಲ್ಡಿಂಗ್​ ಕೋಚ್ ದಿಲೀಪ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.