ETV Bharat / sports

ಡಿಸ್ನಿ ಪ್ಲಸ್‌ ಹಾಟ್​ಸ್ಟಾರ್‌ ಮೂಲಕ 3.5 ಕೋಟಿ ಜನರಿಂದ ಭಾರತ-ಪಾಕಿಸ್ತಾನ​ ವಿಶ್ವಕಪ್‌ ಪಂದ್ಯ ವೀಕ್ಷಣೆ!

ಐಪಿಎಲ್​ ಫೈನಲ್​ ಪಂದ್ಯದಲ್ಲಿ 3.2 ಕೋಟಿ ವೀಕ್ಷಣೆ ಪಡೆದು ಜಿಯೋ ಸಿನಿಮಾ ದಾಖಲೆ ಬರೆದಿತ್ತು. ಹಾಟ್​ಸ್ಟಾರ್ ಈ ರೆಕಾರ್ಡ್‌ ಬ್ರೇಕ್​ ಮಾಡಿದೆ.

world cup 2023
world cup 2023
author img

By ETV Bharat Karnataka Team

Published : Oct 15, 2023, 9:33 PM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಪ್ರಸಾರದ ಹಕ್ಕು ಕಳೆದುಕೊಂಡಿದ್ದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್​ಗೆ ವಿಶ್ವಕಪ್​ ಒಂದು ರೀತಿ ಆಸರೆಯಾಗಿದೆ. ಜಿಯೋ ಸಿನಿಮಾ ನೀಡಿದ ಉಚಿತ ಯೋಜನೆಯನ್ನು ವಿಶ್ವಕಪ್​ಗೆ ಅಳವಡಿಸಿಕೊಂಡ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮತ್ತೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅದರಲ್ಲೂ ವಿಶ್ವಕಪ್​ನ ಹೈವೋಲ್ಟೇಜ್​ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಹಾಟ್​ಸ್ಟಾರ್​ ಜಿಯೋ ಸಿನಿಮಾದ ಐಪಿಎಲ್​ ದಾಖಲೆ ಪುಡಿ ಮಾಡಿತು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಸಿಸಿ ವಿಶ್ವಕಪ್ 2023ರಲ್ಲಿ ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಮತ್ತು ನಾಯಕ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್ ಆಡಿದರೆ, ಬೌಲರ್‌ಗಳು ಚೆಂಡಿನೊಂದಿಗೆ ಆಕರ್ಷಕ ಪ್ರದರ್ಶನ ನೀಡಿದರು. ಈ ಪಂದ್ಯದ ಮೂಲಕ, ವಿಶ್ವಕಪ್ 2023 ಅನ್ನು ಲೈವ್ ಸ್ಟ್ರೀಮಿಂಗ್ ಮಾಡುತ್ತಿರುವ ‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ಗೆ ಬಂಪರ್ ಲಾಟರಿ ಹೊಡೆದಂತಾಗಿದೆ.

3.3 ಕೋಟಿ ವೀಕ್ಷಕರನ್ನು ಪಡೆದ ಹಾಟ್‌ಸ್ಟಾರ್: ಒಟಿಟಿ ಪ್ಲಾಟ್‌ಫಾರ್ಮ್ 'ಡಿಸ್ನಿ ಪ್ಲಸ್ ಹಾಟ್‌ಸ್ಟಾರ್'ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಹೆಚ್ಚು ಕಡಿಮೆ 3.5 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೀಡಿದೆ. ಈ ಆ್ಯಪ್ 3.5 ಕೋಟಿ ವೀಕ್ಷಕರನ್ನು ಪಡೆದಿರುವುದು ಇದೇ ಮೊದಲು. ಭಾರತ-ಪಾಕ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ವೀಕ್ಷಕರ ಸಂಖ್ಯೆ 3.3 ಕೋಟಿ ತಲುಪಿತ್ತು.

ಈ ವರ್ಷದ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ 3.2 ಕೋಟಿ ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದರು. ಈ ಅಂಕಿ-ಅಂಶವನ್ನು ಇಂಡೋ - ಪಾಕ್​ ಪಂದ್ಯ ಮೀರಿಸಿದೆ. ದೂರದರ್ಶನ ವೀಕ್ಷಕರ ಸಂಖ್ಯೆಯನ್ನು ಲೆಕ್ಕಾಚಾರ ಮಾಡುವ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಈ ಪಂದ್ಯವನ್ನು ವೀಕ್ಷಿಸುವವರ ಸಂಖ್ಯೆಯನ್ನು ಒಂದು ವಾರದ ನಂತರ ನೀಡಲಿದೆ.

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇಂಡಿಯಾ ಮುಖ್ಯಸ್ಥ ಎಸ್. ಶಿವಾನಂದನ್, 'ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಆಗಮಿಸಿದ ವೀಕ್ಷಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತಕ್ಕೆ ಹ್ಯಾಟ್ರಿಕ್​ ಗೆಲುವು: ಮುಂದಿನ ಸವಾಲೇನು? ಈ ತಂಡಗಳನ್ನು ಮಣಿಸುವುದೇ ರೋಹಿತ್‌ ಟೀಂ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.