ಕೇಪ್ಟೌನ್: ಶುಕ್ರವಾರದಿಂದ ಆರಂಭವಾಗಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು ಶ್ರೀಲಂಕಾ ವನಿತೆಯರು 3 ರನ್ಗಳಿಂದ ಸೋಲಿಸಿ ಶುಭಾರಂಭ ಮಾಡಿದರು. ಮೊದಲು ಬ್ಯಾಟ್ ಮಾಡಿದ ಲಂಕಾ ವನಿತೆಯರು ನಾಯಕಿ ಚಾಮರಿ ಅಟುಪಟ್ಟು ಅವರ ಅರ್ಧಶತಕದ ನೆರವಿನಿಂದ 4 ವಿಕೆಟ್ಗೆ 129 ರನ್ ಗಳಿಸಿದ್ದರು. ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಮಹಿಳೆಯರು ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಗೆಲುವಿನ ಹಂತದಲ್ಲಿ ಸೋಲು ಕಂಡರು.
ಆತಿಥೇಯ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಲಂಕಾ ಆರಂಭಿಕ ಆಟಗಾರ್ತಿ ಮದಾವಿ 8 ರನ್ಗೆ ಔಟ್ ಆದರು. ಟಿ20ಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಲಂಕಾ ನಾಯಕಿ ಚಾಮರಿ ಅಟುಪಟ್ಟು ಇನಿಂಗ್ಸ್ ಮುನ್ನಡೆಸಿದರು. 50 ಎಸೆತಗಳಲ್ಲಿ 12 ಬೌಂಡರಿ ಸಮೇತ 68 ರನ್ ಗಳಿಸಿದರು. ನಾಯಕಿಗೆ ವಿಸ್ಮಿ ಗುಣರತ್ನೆ ಉತ್ತಮ ಸಾಥ್ ನೀಡಿದರು. ಇಬ್ಬರೂ ಸೇರಿ 86 ರನ್ ಸೇರಿಸಿದರು.
ಶ್ರೀಲಂಕಾದ ನಾಯಕಿ ಕೆಲವು ಗಟ್ಟಿ ಹೊಡೆತಗಳ ಮೂಲಕ ಗಮನ ಸೆಳೆದರು. ಮೊದಲ ವಿಕೆಟ್ ಬಿದ್ದ ಬಳಿಕ ಒತ್ತಡ ಹೇರಿದ ಆಫ್ರಿಕನ್ನರ ಮೇಲೆ ನಿಧಾನವಾಗಿ ಸವಾರಿ ಮಾಡಿದರು. ಒಂದರ ಹಿಂದೆ ಒಂದು ಬೌಂಡರಿ ಬಾರಿಸಿ ರನ್ ಗಳಿಸಿದರು. ಇನ್ನೊಂದೆಡೆ ವಿಸ್ಮಿ ಗುಣರತ್ನೆ ಉತ್ತಮ ಬ್ಯಾಟ್ ಬೀಸಿ 34 ಎಸೆತಗಳಲ್ಲಿ 35 ರನ್ ಮಾಡಿದರು. ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದರಿಂದ ತಂಡ 20 ಓವರ್‌ಗಳಲ್ಲಿ 4 ವಿಕೆಟ್ಗೆ 129 ರನ್ ಗಳಿಸಿತು. ಹರಿಣಗಳ ಪರವಾಗಿ ಎಸ್.ಇಸ್ಮಾಯಿಲ್, ಮಾರಿಝನ್ನೆ ಕಪ್, ನದಿನೆ ಡಿ ಕ್ಲರ್ಕ್ ತಲಾ 1 ವಿಕೆಟ್ ಪಡೆದರು.
ಬ್ಯಾಟಿಂಗ್ ವೈಫಲ್ಯ: 130 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ವನಿತೆಯರು ನಿಧಾನಗತಿ ಬ್ಯಾಟಿಂಗ್ ಜೊತೆಗೆ ದೊಡ್ಡ ಮೊತ್ತ ಪೇರಿಸಲಿಲ್ಲ. ಲೌರಾ ವೋಲ್ವಾರ್ಟ್ 18, ತಜ್ಮಿನ್ ಬ್ರಿಟ್ಸ್ 12, ಮಾರಿಝನ್ನೆ ಕಪ್ 11, ನಾಯಕಿ ಸುನೆ ಲೂಸ್ 28, ಚೋಲೆ ಟ್ರಯಾನ್ 10, ಅನ್ನೆಕ್ಕೆ ಬೋಚ್ 0, ವಿಕೆಟ್ ಕೀಪರ್ ಸಿನಾಲೋ ಜಾಫ್ತಾ 15 ಗಳಿಸಿ ಔಟಾದರು. ನಿಧಾನವಾಗಿ ಬ್ಯಾಟ್ ಬೀಸಿದ ಕಾರಣ ಡೆತ್ ಓವರ್‌ಗಳಲ್ಲಿ ರನ್ರೇಟ್ ಹೆಚ್ಚಾಯಿತು. ಇದರಿಂದ ತಂಡ ಒತ್ತಡಕ್ಕೆ ಸಿಲುಕಿ ಸೋಲೊಪ್ಪಿಕೊಂಡಿತು.
-
What a night! What a game!
— ICC (@ICC) February 10, 2023 " class="align-text-top noRightClick twitterSection" data="
Sri Lanka have upset the odds to beat the hosts 🙌
📝: https://t.co/B3deUDFN5W#SAvSL | #T20WorldCup | #TurnItUp pic.twitter.com/ZfH0vvpD41
">What a night! What a game!
— ICC (@ICC) February 10, 2023
Sri Lanka have upset the odds to beat the hosts 🙌
📝: https://t.co/B3deUDFN5W#SAvSL | #T20WorldCup | #TurnItUp pic.twitter.com/ZfH0vvpD41What a night! What a game!
— ICC (@ICC) February 10, 2023
Sri Lanka have upset the odds to beat the hosts 🙌
📝: https://t.co/B3deUDFN5W#SAvSL | #T20WorldCup | #TurnItUp pic.twitter.com/ZfH0vvpD41
ಲಂಕನ್ನರ ಮೊನಚಿನ ಸ್ಪಿನ್ ದಾಳಿ: ಹರಿಣಗಳ ನಾಯಕಿ ಸುನೆ ಲೂಸ್ರ (28) ಪ್ರತಿರೋಧ ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್ಗಳನ್ನು ಸ್ಪಿನ್ ತ್ರಯರಾದ ಸುಗಂದಿಕಾ ಕುಮಾರಿ, ಒಷದಿ ರಣಸಿಂಘೆ, ಇನೋಕಾ ರಣವೀರ ಕಾಡಿದರು. ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಮೂವರು 7 ವಿಕೆಟ್ ಕಿತ್ತರು. ಇದರಲ್ಲಿ ಇನೋಕಾ ರಣವೀರ 3 ವಿಕೆಟ್ ಪಡೆದರೆ, ಸುಗಂದಿಕಾ ಕುಮಾರಿ, ಒಷದಿ ರಣಸಿಂಘೆ ತಲಾ 2 ವಿಕೆಟ್ ಪಡೆದರು. ಅದ್ಭುತವಾಗಿ ಬ್ಯಾಟ್ ಮಾಡಿದ ಲಂಕಾ ನಾಯಕಿ ಅಟುಪಟ್ಟು ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಮೊದಲ ಸೋಲಿನಿಂದ ಆಫ್ರಿಕಾ ಒತ್ತಡಕ್ಕೆ ಒಳಗಾಗಿದ್ದು, ಸೆಮಿಫೈನಲ್ ತಲುಪಲು ಮುಂದಿನ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಬೇಕಿದೆ. ಸೋಮವಾರ(ಫೆ.13)ದಂದು ನ್ಯೂಜಿಲ್ಯಾಂಡ್ ವನಿತೆಯರ ವಿರುದ್ಧ ಪಂದ್ಯ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್‌ಗಳು: ದಕ್ಷಿಣ ಆಫ್ರಿಕಾ: 126/9 (ಸುನೆ ಲೂಸ್ 28, ಲಾರಾ ವೊಲ್ವಾರ್ಡ್ಟ್ 18, ಇನೋಕಾ ರಣವೀರ 3/18) ಶ್ರೀಲಂಕಾ: 129/4 (ಚಾಮರಿ ಅಟುಪಟ್ಟು 68, ವಿಶ್ಮಿ ಗುಣರತ್ನೆ 35, ಮರಿಜಾನ್ನೆ ಕಪ್ 1/15).
ಓದಿ: Ind vs Aus 1st Test: 400 ರನ್ಗೆ ಭಾರತ ಆಲೌಟ್, ಆಸೀಸ್ನ ಟಾಡ್ ಮೊರ್ಪಿಗೆ 7 ವಿಕೆಟ್