ETV Bharat / sports

ಎಲಿಮಿನೇಟರ್​ ಕದನದಲ್ಲಿ ಯುಪಿ ಮುಂಬೈ ಹಣಾಹಣಿ: ಡೆಲ್ಲಿ ಮುಖಾಮುಖಿ ಯಾರು?

ನೇರ ಫೈನಲ್​ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್​​ - ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ-ಯುಪಿ ಮುಖಾಮುಖಿ - ಗೆದ್ದವರಿಗೆ ಡೆಲ್ಲಿ ಜೊತೆಗೆ ಫೈಟ್​​

mumbai-indians-
ಎಲಿಮಿನೇಟರ್​ ಕದನದಲ್ಲಿ ಯುಪಿ ಮುಂಬೈ ಹಣಾಹಣಿ: ಡೆಲ್ಲಿ ಮುಖಾಮುಖಿ ಯಾರು?
author img

By

Published : Mar 22, 2023, 3:23 PM IST

Updated : Mar 22, 2023, 4:40 PM IST

ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ 2023 ಅಂತಿಮ ಹಂತಕ್ಕೆ ಬಂದಿದೆ. ಚೊಚ್ಚಲ ಚಾಂಪಿಯನ್​ ಯಾರು ಎಂದು ತಿಳಿಯಲು ಎರಡು ಹೆಜ್ಜೆ ಮಾತ್ರ ಬಾಕಿ ಇದೆ. ನಿನ್ನೆ ಯುಪಿ ವಾರಿಯರ್ಸ್​ ಎದುರು ಪಂದ್ಯವನ್ನು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ನೇರ ಫೈನಲ್​ ಪ್ರವೇಶ ಪಡೆದುಕೊಂಡರೆ, ಮುಂಬೈ ಮತ್ತು ಯುಪಿ ಮಾರ್ಚ್​ 24ರಂದು ನಡೆಯುವ ಎಲಿಮಿನೇಟರ್​ ಆಡಬೇಕಿದೆ. ಇದರಲ್ಲಿ ಗೆದ್ದ ತಂಡ ಫೈನಲ್​​ನಲ್ಲಿ ಡಿಸಿಯೊಟ್ಟಿಗೆ ಮುಖಾಮುಖಿಯಾಗಲಿದೆ.

ಈ ಆವೃತ್ತಿಯ ಎಲಿಮಿನೇಟರ್ ಪಂದ್ಯವು ಮಾರ್ಚ್ 24 ರಂದು ಶುಕ್ರವಾರ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ. ಫೈನಲ್‌ಗೆ ತಲುಪಲು ಮುಂಬೈ ಮತ್ತು ಯುಪಿ ಮಹಿಳಾ ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯಲಿದೆ. ಲೀಗ್​ ಹಂತದಲ್ಲಿ 20 ಪಂದ್ಯಗಳು ನಡೆದಿದ್ದು, ಡಬಲ್​ ರೌಂಡ್​ ರಾಬಿನ್​ ಸುತ್ತಿನಂತೆ ಡೆಲ್ಲಿ, ಮುಂಬೈ ಮತ್ತು ಯುಪಿ ವಾರಿಯರ್ಸ್​ ಅಂಕ ಪಟ್ಟಿಯ ಅಗ್ರ ಮೂರು ಸ್ಥಾನ ಪಡೆದಿದ್ದು ಕ್ವಾಲಿಫೈ ಆಗಿವೆ. ಕೊನೆಯ ಎರಡರಲ್ಲಿ ಉಳಿದ ಆರ್​ಸಿಬಿ ಮತ್ತು ಗುಜರಾತ್​ ಲೀಗ್​ ಹಂತದಿಂದ ಹೊರಬಿದ್ದಿವೆ.

ವುಮೆನ್ಸ್​ ಪ್ರೀಮಿಯರ್​ ಲೀಗ್ ಮಾರ್ಚ್​ 4 ರಂದು ಆರಂಭವಾಯಿತು. ಮಂಗಳವಾರ ಡೆಲ್ಲಿ-ಯುಪಿ ಮ್ಯಾಚ್​ ಕೊನೆಯದ್ದಾಗಿತ್ತು. ಈ ಲೀಗ್​ ಸುತ್ತಿನಲ್ಲಿ 5 ತಂಡಗಳು ಡಬಲ್​ ರಾಬಿನ್​ ರೌಂಡ್ ಸುತ್ತಿನಂತೆ ತಲಾ 8 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ರನ್​ ರೇಟ್​ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನೇರ ಫೈನಲ್​ ಪ್ರವೇಶ ಪಡೆದುಕೊಂಡಿದೆ. ಯುಪಿ ವಾರಿಯರ್ಸ್​ 4 ಪಂದ್ಯದಲ್ಲಿ ಗೆದ್ದು, ಮೂರನೇ ಸ್ಥಾನದಲ್ಲಿದೆ.

ಎಲಿಮಿನೇಟರ್​ ಮುಖಾಮುಖಿ: ಲೀಗ್ ಆರಂಭದಿಂದ ಸತತ ಐದು ಪಂದ್ಯದಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್​ 6 ಮತ್ತು 7 ನೇ ಪಂದ್ಯದಲ್ಲಿ ಸೋಲು ಕಂಡಿತು. ಕೊನೆಯ ಪಂದಗ್ಯದಲ್ಲಿ ಆರ್​ಸಿಬಿ ಮೇಲೆ ಉತ್ತಮ ನಿಯಂತ್ರಣ ಸಾಧಿಸಿ ಗೆದ್ದುಕೊಂಡಿತಾದರೂ, ಕಳೆದ ಮೂರು ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದೆ. ಮೊದಲ ಐದು ಪಂದ್ಯದ ಬ್ಯಾಟಿಂಗ್​ ಲಯಕ್ಕೆ ಮತ್ತೆ ಮುಂಬೈ ಮರಳಿದರೆ ಫೈನಲ್​ ಪ್ರವೇಶ ದೊರೆಯಲಿದೆ.

ಯುಪಿ ವಾರಿಯರ್ಸ್​ ಕಮ್​ಬ್ಯಾಕ್​: ಲೀಗ್​ನ ಮೊದಲ ಪಂದ್ಯದಲ್ಲಿ ಗುಜರಾತ್​ ಮಣಿಸಿದ ನಂತರ ಯುಪಿ ವಾರಿಯರ್ಸ್​ ತಂಡ ಸೋಲು ಗೆಲುವುಗಳ ಏರಿಳಿತ ಕಂಡಿತು. ಆದರೆ ಕೊನೆಯ ಮೂರು ಪಂದ್ಯದಲ್ಲಿ ಉತ್ತಮ ಕಮ್​ಬ್ಯಾಕ್​ ಮಾಡಿ ಕ್ವಾಲಿಫೈ ಆಗಿದೆ. ಯುಪಿ ವಾರಿಯರ್ಸ್​ ಉತ್ತಮ ಪ್ರದರ್ಶನದಿಂದ ಗುಜರಾತ್​ ಮತ್ತು ಆರ್​ಸಿಬಿ ಹೊರ ಬಿದ್ದಿತು.

ಲೀಗ್​ನ ಮುಖಾಮುಖಿ: ಮುಂಬೈ ಮತ್ತು ಯುಪಿ ಲೀಗ್​ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಗೆದ್ದರೆ, ಎರಡನೇ ಪಂದ್ಯದಲ್ಲಿ ಯುಪಿ ಸೇಡು ತೀರಿಸಿಕೊಂಡಿದೆ. ಈಗ ಮತ್ತೆ ಎಲಿಮಿನೇಟರ್​​ನಲ್ಲಿ ಮುಖಾಮುಖಿಯಾಗುತ್ತಿದ್ದು ಯಾರು ಗೆಲುವು ಸಾಧಿಸುತ್ತಾರೆ ಎಂಬುದು ಫೈನಲ್​ ಪ್ರವೇಶ ನಿಗದಿಯಾಗಲಿದೆ.

ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್​: ಯುಪಿ ಸೋಲಿಸಿ ಫೈನಲ್‌ಗೆ ನೇರ​ ಪ್ರವೇಶ ಪಡೆದ ಡೆಲ್ಲಿ

Last Updated : Mar 22, 2023, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.