ಹಾಗ್ಲೆ ಓವಲ್(ಕ್ರೈಸ್ಟ್ ಚರ್ಚ್): ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂದು ಆಸ್ಟ್ರೇಲಿಯಾ ಹಾಗು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಕ್ರೈಸ್ಟ್ ಚರ್ಚ್‌ನ ಹಾಗ್ಲೆ ಓವಲ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಗೆದ್ದ ಇಂಗ್ಲೆಂಡ್ ವನಿತೆಯರು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಬ್ಯಾಟಿಂಗ್‌ಗೆ ಇಳಿದಿರುವ ಇಂಗ್ಲೆಂಡ್ ಯಾವುದೇ ಬದಲಾವಣೆ ಮಾಡದೇ ಸೆಮಿಫೈನಲ್ ತಂಡವನ್ನೇ ಕಣಕ್ಕಿಳಿಸಿದೆ.
ಉಭಯ ತಂಡಗಳ ಆಡುವ 11ರ ಬಳಗ ಹೀಗಿದೆ:
ಇಂಗ್ಲೆಂಡ್: ಟಾಮಿ ಬ್ಯೂಮಾಂಟ್, ಡೇನಿಯಲ್ ವ್ಯಾಟ್, ಹೀದರ್ ನೈಟ್(ಕ್ಯಾ.), ನತಾಲಿ ಸೀವರ್, ಕ್ಯಾಥರೀನ್ ಬ್ರಂಟ್, ಡಂಕ್ಲಿ, ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಚಾರ್ಲೊಟ್ಟೆ ಡೀನ್ ಹಾಗು ಆನ್ಯ ಶ್ರಬ್‌ಸೋಲ್
ಆಸ್ಟ್ರೇಲಿಯಾ: ರಾಚೆಲ್ ಹೇನ್ಸ್, ಅಲಿಸ್ಸಾ ಹೀಲಿ, ಮೆಗ್ ಲ್ಯಾನಿಂಗ್(ಕ್ಯಾ.), ಎಲಿಸ್ ಪೆರ್ರಿ, ಬೆಥ್ ಮೂನಿ, ತಹಿಲಾ ಮೆಕ್‌ಗ್ರಾತ್, ಆಶ್ಲೆ ಗಾರ್ಡ್‌ನರ್, ಜೆಸ್ ಜೊನಾಸ್ಸೆನ್, ಅಲನಾ ಕಿಂಗ್, ಮೇಗನ್ ಶಟ್, ಡಾರ್ಸಿ ಬ್ರೌನ್