ಸಿಲ್ಹೆಟ್ (ಬಾಂಗ್ಲಾದೇಶ): ಭಾರತ ವನಿತೆಯರು ಮತ್ತು ಥಾಯ್ಲೆಂಡ್ ವನಿತೆಯರ ನಡುವಿನ ಏಷ್ಯಾಕಪ್ ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಜಯ ಗಳಿಸಿದೆ. ಥಾಯ್ಲೆಂಡ್ ನೀಡಿದ್ದ 38 ರನ್ಗಳ ಸುಲಭ ಗುರಿಯನ್ನು ಒಂಡು ವಿಕೆಟ್ ನಷ್ಟದಿಂದ ಭಾರತ ಜಯಿಸಿತು. ಈ ಮೂಲಕ ಆರು ಪಂದ್ಯಗಳಲ್ಲಿ 5 ಗೆದ್ದು 10 ಅಂಕಗಳಿಂದ ಸೆಮಿಫೈನಲ್ ಪಂದ್ಯಕ್ಕೆ ಕ್ವಾಲಿಫೈ ಆಗಿದೆ.
ಥಾಯ್ಲೆಂಡ್ ನೀಡಿದ್ದ 38 ರನ್ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ 6 ಓವರ್ಗೆ ಒಂದು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(8) ಬೂಚತಮ್ಗೆ ವಿಕೆಟ್ ಒಪ್ಪಿಸಿದರು. ಸಬ್ಬಿನೇನಿ ಮೇಘನಾ(20) ಮತ್ತು ಪೂಜಾ ವಸ್ತ್ರಕರ್(12) ರನ್ ಗಳಿಸಿ 6 ಓವರ್ಗಳಲ್ಲಿ 40 ರನ್ ಬಾರಿಸುವ ಮೂಲಕ ಸುಲಭ ಜಯ ಸಾಧಿಸಿದರು.
-
A sensational performance from India against Thailand in the #WomensAsiaCup2022 💥
— ICC (@ICC) October 10, 2022 " class="align-text-top noRightClick twitterSection" data="
📸: @BCCIWomen
Scorecard: https://t.co/aEycyqTOA0 pic.twitter.com/Z0WBpZEMx3
">A sensational performance from India against Thailand in the #WomensAsiaCup2022 💥
— ICC (@ICC) October 10, 2022
📸: @BCCIWomen
Scorecard: https://t.co/aEycyqTOA0 pic.twitter.com/Z0WBpZEMx3A sensational performance from India against Thailand in the #WomensAsiaCup2022 💥
— ICC (@ICC) October 10, 2022
📸: @BCCIWomen
Scorecard: https://t.co/aEycyqTOA0 pic.twitter.com/Z0WBpZEMx3
ಮೊದಲ ಇನ್ನಿಂಗ್ಸ್ : ಟಾಸ್ಗೆದ್ದ ಮಂದಾನ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗೆ ಇಳಿದ ಥಾಯ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್ಗಳು ಕಾಡಿದರು. ಥಾಯ್ಲೆಂಡ್ ಪರ ಎನ್ ಕೊಂಚರೊಯೆಂಕೈ 12 ರನ್ ಗಳಿಸಿದ್ದು ಬಿಟ್ಟರೆ, ಮತ್ತಾರು ಹತ್ತು ರನ್ನ ಗಡಿ ಮುಟ್ಟಲೇ ಇಲ್ಲ. ಮೂರು ಜನ ಸೊನ್ನೆ ಸುತ್ತಿದರು. ಯಾರೋಬ್ಬರೂ ಕ್ರೀಸ್ನಲ್ಲಿ ನಿಲ್ಲಲಿಲ್ಲ. 15.1 ಓವರ್ಗೆ 37 ರನ್ ಗಳಿಸಿ ತನ್ನೆಲ್ಲಾ ವಿಕೆಟ್ಗಳನ್ನು ಥಾಯ್ಲೆಂಡ್ ಕಳೆದು ಕೊಂಡಿತು.
ಭಾರತ ಪರ ಸ್ನೇಹ ರಾಣಾ (3), ರಾಜೇಶ್ವರಿ ಗಾಯಕ್ವಾಡ್(2), ದೀಪ್ತಿ ಶರ್ಮಾ(2) ಮತ್ತು ಮೇಘನಾ ಸಿಂಗ್ (1)ಮ ವಿಕೆಟ್ ಪಡೆದರು. ನಾಲ್ಕು ಓವರ್ ಹಾಕಿ 3 ವಿಕೆಟ್ ಪಡೆದು 9 ರನ್ ಬಿಟ್ಟುಕೊಟ್ಟು 2.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಸ್ನೇಹ ರಾಣಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ : ಮಹಿಳಾ ಏಷ್ಯಾ ಕಪ್ : ಭಾರತಕ್ಕೆ 59 ರನ್ಗಳ ಗೆಲುವು, ಶಫಾಲಿ ವರ್ಮಾ ಆಕರ್ಷಕ ಅರ್ಧ ಶತಕ