ETV Bharat / sports

ಐಪಿಎಲ್​ ಬೆಸ್ಟ್​ ಸ್ಪಿನ್ನರ್ಸ್​ ಅಶ್ವಿನ್-ಚಹಲ್ ನಮ್ಮ ತಂಡದ ಬಲ​: ಸಂಗಕ್ಕಾರ ಪ್ರಶಂಸೆ - ರಾಜಸ್ಥಾನ್ ರಾಯಲ್ಸ್​ ನ್ಯೂಸ್​

ನಾವು ಐಪಿಎಲ್​ನ ಇಬ್ಬರು ಶ್ರೇಷ್ಠ ಸ್ಪಿನ್ನರ್​ಗಳನ್ನು ಪಡೆದುಕೊಂಡಿದ್ದೇವೆ. ಆಫ್‌ ಸ್ಪಿನ್ ಮತ್ತು ಲೆಗ್‌ ಸ್ಪಿನ್ ವಿಚಾರದಲ್ಲಿ ಆರ್‌.ಅಶ್ವಿನ್‌ ಮತ್ತು ಯುಜ್ವೇಂದ್ರ ಚಹಲ್‌ ತಂಡದ ಬಲವನ್ನು ಬೇರೆ ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.

sangakkara on RR Squad
ಕುಮಾರ್ ಸಂಗಕ್ಕಾರ
author img

By

Published : Mar 17, 2022, 5:46 PM IST

ಮುಂಬೈ: ಕಳೆದ ಮೂರು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ರಾಜಸ್ಥಾನ್​ ರಾಯಲ್ಸ್​ ತಂಡ ಈ ಬಾರಿ ಹರಾಜಿನಲ್ಲಿ ಅಶ್ವಿನ್​, ಚಹಲ್ ಸೇರಿದಂತೆ ಕೆಲವು ಅತ್ಯುತ್ತಮ ಆಟಗಾರರನ್ನು ಖರೀದಿಸಿದ್ದು ಟೂರ್ನಿಯಲ್ಲಿ ಪ್ರಬಲ ತಂಡಗಳಲ್ಲಿ ಒಂದಾಗಿದೆ ಎಂದು ರಾಯಲ್ಸ್​ನ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮತ್ತು ಮುಖ್ಯ ಕೋಚ್​ ಕುಮಾರ್ ಸಂಗಕ್ಕಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ಕಳೆದ ಮೂರು ಆವೃತ್ತಿಗಳಲ್ಲಿ ಕ್ರಮವಾಗಿ 7, 8 ಮತ್ತು 7ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ಮಾರ್ಚ್​ 26ರಿಂದ ಆರಂಭವಾಗಲಿರುವ 15ನೇ ಅವೃತ್ತಿಯಲ್ಲಿ ತಂಡದ ಪ್ರದರ್ಶನ ಅತ್ಯುತ್ತಮವಾಗಿರಲಿದೆ ಎಂದಿದ್ದಾರೆ.

ನಮ್ಮ ತಂಡ ಸೀಸನ್‌ಗೂ ಮೊದಲು ಕೆಲವು ವಿಭಾಗದಲ್ಲಿ ಕೆಲಸ ಮಾಡಬೇಕಿದೆ ಎಂದು ನಮಗೆ ತಿಳಿದಿದೆ. ಹರಾಜಿಗೂ ಮುನ್ನ ತಂಡಕ್ಕೆ ಅಗತ್ಯವಾದ ಕ್ಷೇತ್ರದ ಕಡೆ ನಾವು ಗಮನ ಹರಿಸಿದ್ದೆವು. ಹಾಗಾಗಿ ಸೂಕ್ತ ಆಟಗಾರರ ಖರೀದಿಸುವ ವಿಚಾರದಲ್ಲಿ ಮೊದಲೇ ಸಾಕಷ್ಟು ತಯಾರಿ ನಡೆಸಿದ್ದೆವು ಮತ್ತು ನಾವು ಗುರುತಿಸಿದಂತೆ ಆಟಗಾರರನ್ನು ಪಡೆಯಲು ಯಶಸ್ವಿಯಾದೆವು ಎಂದು ಆರ್​ಆರ್​ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾವು ಐಪಿಎಲ್​ನ ಇಬ್ಬರು ಶ್ರೇಷ್ಠ ಸ್ಪಿನ್ನರ್​ಗಳನ್ನು ಪಡೆದುಕೊಂಡಿದ್ದೇವೆ. ಆಫ್‌ ಸ್ಪಿನ್ ಮತ್ತು ಲೆಗ್‌ ಸ್ಪಿನ್ ವಿಚಾರದಲ್ಲಿ ಆರ್‌.ಅಶ್ವಿನ್‌ ಮತ್ತು ಯುಜ್ವೇಂದ್ರ ಚಹಲ್‌ ತಂಡದ ಬಲವನ್ನು ಬೇರೆ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಜೊತೆಗೆ ಟ್ರೆಂಟ್‌ ಬೌಲ್ಟ್‌, ಪ್ರಸಿಧ್‌ ಕೃಷ್ಣ, ನವದೀಪ್‌ ಸೈನಿ, ನೇಥನ್‌ ಕೌಲ್ಟರ್‌ ನೈಲ್‌, ಮೆಕಾಯ್‌ ಅವರಂತಹ ವೇಗಿಗಳ ಬಳಗವಿದ್ದು, ಇವರಿಗೆ ನಾವು ರಿಟೈನ್ ಮಾಡಿಕೊಂಡಿರುವ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಮತ್ತು ಜೋಸ್‌ ಬಟ್ಲರ್‌ ಅಂತಹ ಸ್ಪೋಟಕ ಬ್ಯಾಟರ್​ಗಳು ತಂಡದ ಸೂಕ್ತ ಸಂಯೋಜನೆಗೆ ನೆರವಾಗಲಿದ್ದಾರೆ.

ನಾವು ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಆಟಗಾರರನ್ನು ಹೊಂದಿದ್ದೇವೆ. ಮಧ್ಯಮ ಕ್ರಮಾಂಕಕ್ಕೆ ಜಿಮ್ಮಿ ನೀಶಮ್‌, ಡ್ಯಾರಿಲ್‌ ಮಿಚೆಲ್‌ ಮತ್ತು ವ್ಯಾಂಡೆರ್‌ ಡುಸೆನ್‌ ಅಂತಹ ಅತ್ಯಾಕರ್ಷಕ ಕ್ರಿಕೆಟಿಗರು ತಂಡದಲ್ಲಿದ್ದಾರೆ. ಇವರ ಜೊತೆಗೆ ಭಾರತದ ಕೆಲವು ಯುವ ಪ್ರತಿಭೆಗಳನ್ನು ನಾವು ಪಡೆದುಕೊಂಡಿದ್ದೇವೆ. ಒಟ್ಟಾರೆ ನಾವು ಸ್ಪರ್ಧಾತ್ಮಕ ಬಳಗಳನ್ನು ಹೊಂದಿದ್ದೇವೆ, ನಾವು ಪಂದ್ಯದ ವೇಳೆ ಪಂದ್ಯ ಗೆಲ್ಲುವುದಕ್ಕೆ ನೆರವಾಗುವ ಸೂಕ್ತ ಹನ್ನೊಂದರ ಬಳಗವನ್ನು ಆಯ್ಕೆ ಮಾಡಬೇಕಿದೆ ಎಂದು ಸಂಗಾ ಹೇಳಿದ್ದಾರೆ.

ಕಳೆದ ಆವೃತ್ತಿಯ ವೈಫಲ್ಯದಿಂದ ಏನು ಕಲಿತಿದ್ದೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕುಮಾರ್, ಅದಕ್ಕೆ ಒಂದು ಅಥವಾ ಎರಡಲ್ಲ, ಸಾಕಷ್ಟು ವಿಭಿನ್ನ ಕಾರಣಗಳಿವೆ. ಅದರಲ್ಲಿ ಆಟಗಾರರ ಲಭ್ಯತೆ,ಟೂರ್ನಮೆಂಟ್​ ವಿಭಜನೆ, ದೀರ್ಘವಾದ ಬ್ರೇಕ್​, ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಪಂದ್ಯ ಗೆಲ್ಲುವಂತ ಪ್ರದರ್ಶನದ ಕೊರತೆ ಅನುಭವಿಸಿದೆವು. ಆದರೆ ಅದೆಲ್ಲವೂ ಗತಿಸಿವೆ. ಇದೀಗ ಸಂಪೂರ್ಣ ತಂಡ ಬದಲಾಗಿದೆ ಎಂದರು.

ಇದನ್ನೂ ಓದಿ:ಐಪಿಎಲ್​ಗೂ ಮುನ್ನ ಎನ್​ಸಿಎನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್, ಯೋ-ಯೋ ಟೆಸ್ಟ್​ ಪಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.