ಜಾರ್ಜ್‌ಟೌನ್ (ಗಯಾನಾ): ಟಿ20 ಟಾಪ್ ರ್‍ಯಾಂಕಿಂಗ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ 100 ಸಿಕ್ಸ್ ಪೂರೈಸಿದ ದಾಖಲೆಯನ್ನು ಮಾಡಿದ್ದಾರೆ. ಕಳೆದ ಕೆಲ ಪಂದ್ಯಗಳಲ್ಲಿ ಮಂಕಾಗಿದ್ದ ಅವರ ಬ್ಯಾಟ್ ನಿನ್ನೆಯ ಮ್ಯಾಚ್ನಲ್ಲಿ ಘರ್ಜಿಸಿತ್ತು. ವಿಂಡೀಸ್ ನೀಡಿದ್ದ 160 ರನ್ ಗುರಿಯನ್ನು ಚೇಸ್ ಮಾಡುವಾಗ ಸ್ಕೈ 44 ಎಸೆತದಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ನಿಂದ 83 ರನ್ ಗಳಿಸಿದರು.
ಕಡಿಮೆ ಇನ್ನಿಂಗ್ಸ್ನಲ್ಲಿ 100 ಸಿಕ್ಸ್ ದಾಖಲಿಸಿದ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ಸೂರ್ಯ ಮಾಡಿದ್ದಾರೆ. ಕೇವಲ 49 ಇನ್ನಿಂಗ್ಸ್ನಲ್ಲಿ ಅವರು 100 ಸಿಕ್ಸ್ಗಳನ್ನು ದಾಖಲಿಸಿದ್ದಾರೆ. ಎವಿನ್ ಲೂಯಿಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಪಂದ್ಯದಲ್ಲಿ ಹೆಚ್ಚು ಸಿಕ್ಸ್ಗಳನ್ನು ದಾಖಲಿಸಿದ ಆಟಗಾರ ಆಗಿದ್ದಾರೆ.
-
🚨 Milestone Alert 🚨
— BCCI (@BCCI) August 8, 2023 " class="align-text-top noRightClick twitterSection" data="
A SKY special! 👏 👏
Suryakumar Yadav completes a 𝗖𝗘𝗡𝗧𝗨𝗥𝗬 💯 of Sixes in T20Is 💪 💪
Follow the match ▶️ https://t.co/3rNZuAiOxH #TeamIndia | #WIvIND pic.twitter.com/4YnGBC5dvO
">🚨 Milestone Alert 🚨
— BCCI (@BCCI) August 8, 2023
A SKY special! 👏 👏
Suryakumar Yadav completes a 𝗖𝗘𝗡𝗧𝗨𝗥𝗬 💯 of Sixes in T20Is 💪 💪
Follow the match ▶️ https://t.co/3rNZuAiOxH #TeamIndia | #WIvIND pic.twitter.com/4YnGBC5dvO🚨 Milestone Alert 🚨
— BCCI (@BCCI) August 8, 2023
A SKY special! 👏 👏
Suryakumar Yadav completes a 𝗖𝗘𝗡𝗧𝗨𝗥𝗬 💯 of Sixes in T20Is 💪 💪
Follow the match ▶️ https://t.co/3rNZuAiOxH #TeamIndia | #WIvIND pic.twitter.com/4YnGBC5dvO
ಇದಲ್ಲದೇ ಸ್ಕೋರ್ ಗಳಿಕೆಯಲ್ಲೂ ಸೂರ್ಯ ರೆಕಾರ್ಡ್ ಮಾಡಿದ್ದಾರೆ. ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಪ್ರಸ್ತುತ ಸೂರ್ಯ 51 ಪಂದ್ಯದಲ್ಲಿ 49 ಇನ್ನಿಂಗ್ಸ್ಗಳನ್ನು ಆಡಿದ್ದು, ಅವರು ಮೂರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 45.64 ಸರಾಸರಿಯಲ್ಲಿ 174ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 1,780 ರನ್ ಗಳಿಸಿದ್ದಾರೆ. 117 ಅವರ ಉತ್ತಮ ಸ್ಕೋರ್ ಆಗಿದೆ. ಧವನ್ 68 ಪಂದ್ಯಗಳಿಂದ 27.92ರ ಸರಾಸರಿಯಲ್ಲಿ 126ರ ಸ್ಟ್ರೈಕ್ ರೇಟ್‌ನಲ್ಲಿ 1759 ರನ್ ಗಳಿಸಿದ್ದಾರೆ. ಶಿಖರ್ ಟಿ20ಯಲ್ಲಿ 11 ಅರ್ಧಶತಕ ಕಲೆ ಹಾಕಿದ್ದಾರೆ.
ಮೊದಲ ಮೂರು ಸ್ಥಾನದಲ್ಲಿ ವಿರಾಟ್, ರೋಹಿತ್ ಮತ್ತು ರಾಹುಲ್ ಇದ್ದಾರೆ. ವಿರಾಟ್ ಕೊಹ್ಲಿ 115 ಪಂದ್ಯಗಳಿಂದ 52.73 ಸರಾಸರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕ ಸಹಿತ 4,008 ರನ್ ಗಳಸಿದ್ದಾರೆ. ರೋಹಿತ್ ಶರ್ಮಾ 148 ಪಂದ್ಯಗಳಲ್ಲಿ 4ಶತಕ ಮತ್ತು 29 ಅರ್ಧಶತಕವನ್ನು ಗಳಿಸಿದ್ದು, 31.32 ಸರಾಸರಿ ಮತ್ತು 139.24 ಸ್ಟ್ರೈಕ್ ರೇಟ್ನಿಂದ ಒಟ್ಟು 3,853 ರನ್ ಕಲೆಹಾಕಿದ್ದಾರೆ. ಕೆಎಲ್ ರಾಹುಲ್ 72 ಪಂದ್ಯಗಳಲ್ಲಿ 37.75 ಸರಾಸರಿಯಲ್ಲಿ 2,265 ರನ್ ಗಳಿಸಿದ್ದು, ಅದರಲ್ಲಿ ಎರಡು ಶತಕ ಮತ್ತು 22 ಅರ್ಧಶತಕ ಒಳಗೊಂಡಿವೆ.
-
For his breathtaking match-winning knock in the third #WIvIND T20I, Suryakumar Yadav bags the Player of the Match award 🙌 🙌
— BCCI (@BCCI) August 8, 2023 " class="align-text-top noRightClick twitterSection" data="
Scorecard ▶️ https://t.co/3rNZuAiOxH #TeamIndia pic.twitter.com/vFQQYFUKOC
">For his breathtaking match-winning knock in the third #WIvIND T20I, Suryakumar Yadav bags the Player of the Match award 🙌 🙌
— BCCI (@BCCI) August 8, 2023
Scorecard ▶️ https://t.co/3rNZuAiOxH #TeamIndia pic.twitter.com/vFQQYFUKOCFor his breathtaking match-winning knock in the third #WIvIND T20I, Suryakumar Yadav bags the Player of the Match award 🙌 🙌
— BCCI (@BCCI) August 8, 2023
Scorecard ▶️ https://t.co/3rNZuAiOxH #TeamIndia pic.twitter.com/vFQQYFUKOC
ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲೂ ಸ್ಕೈ ಸಾಧನೆ: ಈ ಪಂದ್ಯದ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ವಿನ್ನಿಂಗ್ ಆಟ ಆಡಿದ ಸೂರ್ಯ ಕುಮಾರ್ ಯಾದವ್ಗೆ ಕೊಡಲಾಯಿತು. ಇದರಿಂದ ಸೂರ್ಯ 51 ಪಂದ್ಯದಲ್ಲಿ 12 ನೇ 'ಪಂದ್ಯದ ಆಟಗಾರ' ಪ್ರಶಸ್ತಿ ಪಡೆದರು. ಈ ಮೂಲಕ ಪಂದ್ಯ ಶ್ರೇಷ್ಠವನ್ನು ಅತಿ ಹೆಚ್ಚು ಬಾರಿ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಜಂಟಿಯಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದರು. 15 ಬಾರಿ ಪ್ರಶಸ್ತಿ ಗೆದ್ದಿರುವ ಕಿಂಗ್ ಕೊಹ್ಲಿ ಅಗ್ರ ಮಾನ್ಯರಾಗಿದ್ದಾರೆ.
ಪಂದ್ಯ ಹೀಗಿತ್ತು..: ಮೂರನೇ ಪಂದ್ಯವನ್ನು ಭಾರತ ಗೆಲ್ಲುವ ಮೂಲಕ ಸರಣಿಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಹಿನ್ನಡೆಯನ್ನು ಹೊಂದಿದೆ. ಬಾಕಿ ಇರುವ ಇನ್ನೆರಡು ಪಂದ್ಯಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಬಂದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 159/5 ಗಳಿಸಿತು. ಕೈಲ್ ಮೇಯರ್ಸ್ (25), ಬ್ರಾಂಡನ್ ಕಿಂಗ್ (42) ಮತ್ತು ನಾಯಕ ರೋವ್‌ಮನ್ ಪೊವೆಲ್ 19 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿ ಭಾರತಕ್ಕೆ ಸಾಧಾರಣ ಗುರಿಯನ್ನು ನೀಡಿದರು. ಭಾರತದ ಪರ ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರು.
ಆರಂಭಿಕರಾದ ಯಶಸ್ವಿ ಜೈಸ್ವಾಲ್ (1) ಮತ್ತು ಶುಭಮನ್ ಗಿಲ್ (6)ಕ್ಕೆ ಔಟಾದ ನಂತರ 160 ರನ್ ಬೆನ್ನಟ್ಟುವಲ್ಲಿ ತಂಡಕ್ಕೆ ಆಸರೆಯಾಗಿದ್ದು ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ. 83 ರನ್ ಗಳಿಸಿ ಸೂರ್ಯ ಕುಮಾರ್ ಯಾದವ್ ವಿಕೆಟ್ ಕೊಟ್ಟರು. ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಬೌಲರ್ಗಳ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದರು. ಭಾರತ 17.5 ಓವರ್ಗೆ 7 ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು. ತಿಲಕ್ ವರ್ಮಾ ಅಜೇಯ 49 ಮತ್ತು ಹಾರ್ದಿಕ್ ಅಜೇಯ 20 ರನ್ ಗಳಿಸಿದರು.
ಇದನ್ನೂ ಓದಿ: 3rd T20I:ಸೂರ್ಯನ ತಾಪಕ್ಕೆ ತತ್ತರಿಸಿದ ವೆಸ್ಟ್ ಇಂಡೀಸ್.. ಸತತ ಸೋಲಿನ ಬಳಿಕ ಟಿ20 ಸರಣಿಯಲ್ಲಿ ಭಾರತಕ್ಕೆ ಮೊದಲ ಗೆಲುವು