ETV Bharat / sports

ವೆಸ್ಟ್​ ಇಂಡೀಸ್ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡ: ಡರೇನ್ ಸಾಮಿ

ವೆಸ್ಟ್​ ಇಂಡೀಸ್​ 2012 ಮತ್ತು 2016ರಲ್ಲಿ ಚುಟುಕು ವಿಶ್ವಕಪ್​ ಜಯಿಸಿತ್ತು. ಭಾರತದಲ್ಲಿ ನಡೆದಿದ್ದ 2016ರ ಫೈನಲ್​ನಲ್ಲಿ ಬ್ರಾತ್​ವೇಟ್​ ಕೊನೆಯ ಓವರ್​ನಲ್ಲಿ ನಾಲ್ಕು ಸಿಕ್ಸರ್​ಗಳನ್ನು ಸಿಡಿಸಿ ಇಂಗ್ಲೆಂಡ್ ವಿರುದ್ಧ ನಾಟಕೀಯ ಗೆಲುವು ತಂದುಕೊಟ್ಟಿದ್ದರು.

author img

By

Published : Aug 22, 2021, 10:50 PM IST

ಡರೇನ್ ಸಾಮಿ
ಡರೇನ್ ಸಾಮಿ

ದುಬೈ ಹಾಲಿ ಟಿ20 ವಿಶ್ವ ಚಾಂಪಿಯನ್​ ಆಗಿರುವ ವೆಸ್ಟ್ ಇಂಡೀಸ್​ ಟಿ20 ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡ ಎಂದು ಎಂದು ಮಾಜಿ ವೆಸ್ಟ್​ ನಾಯಕ ಡರೇನ್ ಸಾಮಿ ಅಭಿಪ್ರಾಯಪಟ್ಟಿದ್ದಾರೆ.

ವೆಸ್ಟ್​ ಇಂಡೀಸ್​ 2012 ಮತ್ತು 2016ರಲ್ಲಿ ಚುಟುಕು ವಿಶ್ವಕಪ್​ ಜಯಿಸಿತ್ತು. ಭಾರತದಲ್ಲಿ ನಡೆದಿದ್ದ 2016ರ ಫೈನಲ್​ನಲ್ಲಿ ಬ್ರಾತ್​ವೇಟ್​ ಕೊನೆಯ ಓವರ್​ನಲ್ಲಿ ನಾಲ್ಕು ಸಿಕ್ಸರ್​ಗಳನ್ನು ಸಿಡಿಸಿ ಇಂಗ್ಲೆಂಡ್ ವಿರುದ್ಧ ನಾಟಕೀಯ ಗೆಲುವು ತಂದುಕೊಟ್ಟಿದ್ದರು.

ಇದನ್ನೇಳಲು ನಾನು ಹೆಚ್ಚೇನು ತಲೆ ಕೆಡಿಸಿಕೊಳ್ಳಬೇಕಿಲ್ಲ, ವೆಸ್ಟ್​ ಇಂಡೀಸ್​ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾಗಿ ಹೋಗಲಿದೆ ಎಂದು ಐಸಿಸಿ ಡಿಜಿಟಲ್ ಶೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

" ಕೆಲವು ಜನರಿಗೆ ನನ್ನ ಮಾತು ಪಕ್ಷಪಾತದಿಂದ ಕೂಡಿದೆ ಎನ್ನಿಸಬಹುದು. ಆದರೆ ನೀವು ಮೂರ್ನಾಲ್ಕು ಟೂರ್ನಮೆಂಟ್‌ಗಳಲ್ಲಿ ನಾವು ಅಗ್ರ ನಾಲ್ಕು ತಂಡಗಳಲ್ಲಿ ಒಂದಾಗುವಲ್ಲಿ ಯಶಸ್ವಿಯಾಗಿದ್ದೇವೆ. ಅದರಲ್ಲಿ ಎರಡು ಬಾರಿ ಚಾಂಪಿಯನ್​ ಆಗಿದ್ದೇವೆ" ಎಂದಿದ್ದಾರೆ.

" ನಮ್ಮ ಆಟಗಾರರು ಅಗಾಧ ಸಾಮರ್ಥ್ಯವುಳ್ಳವರಾಗಿದ್ದಾರೆ. ನಾಯಕ ಪೊಲಾರ್ಡ್ ತಂಡಕ್ಕೆ ಮರಳಿದ್ದಾರೆ. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ಎವಿನ್ ಲೂಯಿಸ್​ ಹೀಗೆ ಎದುರಾಳಿಗಳ ಮೇಲೆ ದಾಳಿ ಮಾಡಬಲ್ಲ ಆಟಗಾರರ ಪಟ್ಟಿಯೇ ಬೆಳೆಯುತ್ತಾ ಸಾಗುತ್ತದೆ ಎಂದು 37ರ ಹರೆಯದ ಡ್ಯಾರೆನ್ ಸಮಿ ತಿಳಿಸಿದ್ದಾರೆ.

ಯುಎಇ ಮತ್ತು ಒಮಾನ್​ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಕೂಡ ವಿಶ್ವ ಟಿ20 ಪ್ರಶಸ್ತಿಯನ್ನು ಗೆಲ್ಲಲು ಬಯಸುತ್ತವೆ. ಇಂಗ್ಲೆಂಡ್ ಕಳೆದ ಬಾರಿಯ ಫೈನಲಿಸ್ಟ್ ಕೂಡ ಆಗಿದೆ. ಇನ್ನು ಆಸ್ಟ್ರೇಲಿಯಾ ಕೂಡ ಅದ್ಭುತ ಆಟಗಾರರನ್ನು ಹೊಂದಿದ್ದು, ಐಪಿಎಲ್​ನಲ್ಲಿ ಆಡುವುದರಿಂದ ಇಲ್ಲಿನ ಪರಿಸ್ಥಿತಿಯನ್ನು ಹೊಂದಿಕೊಂಡು ಉತ್ತಮ ಪ್ರದರ್ಶನ ತೋರಬಹುದು ಎಂದಿದ್ದಾರೆ.

ನನ್ನ ಅಭಿಪ್ರಾಯದ ಪ್ರಕಾರ ಇಲ್ಲಿನ ಪಿಚ್​ಗಳು ಭಾರತ ಮತ್ತು ಕೆರಿಬಿಯನ್ ಹೋಲುವ ಸ್ಥಳಗಳಾಗಿವೆ. ಆ ತಂಡಗಳ ಆಟಗಾರರು ಕೂಡ ಇಲ್ಲಿನ ಪರಿಸ್ಥಿತಿಗೆ ಬೇಗ ಹೊಗ್ಗಿಕೊಳ್ಳಲಿದ್ದಾರೆ ಎಂದು ಸಾಮಿ ತಿಳಿಸಿದ್ದಾರೆ.

ಇದನ್ನು ಓದಿ:ಭಾರತದ ಜತೆಗೆ ಈ ತಂಡವೇ ಫೈನಲ್ ಪ್ರವೇಶಿಸುವ ನನ್ನ ನೆಚ್ಚಿನ ತಂಡ : ದಿನೇಶ್ ಕಾರ್ತಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.