ETV Bharat / sports

ಕೊನೆ ಘಳಿಗೆಯಲ್ಲಿ ತಂಡ ಸೇರಿ 'ವಿರಾಟ್' ಪ್ರದರ್ಶನ ನೀಡಿದ ಕೆ.ಎಲ್‌.ರಾಹುಲ್; ರೋಹಿತ್ ಶರ್ಮಾ ಮೆಚ್ಚುಗೆ - ವಿಶ್ವಕಪ್

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ: ಪಾಕಿಸ್ತಾನದ ವಿರುದ್ಧ ನಿನ್ನೆ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಆಕರ್ಷಕ ಶತಕದೊಂದಿಗೆ ತಂಡಕ್ಕೆ ಭರ್ಜರಿ ಕಮ್​ಬ್ಯಾಕ್​ ಮಾಡಿದರು. ತಂಡದ ಸಹ ಆಟಗಾರನ ಪ್ರದರ್ಶನವನ್ನು ನಾಯಕ ರೋಹಿತ್ ಶರ್ಮಾ ಕೊಂಡಾಡಿದ್ದಾರೆ.

ಕೆ ಎಲ್ ರಾಹುಲ್
ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲದಕ್ಕೂ ಉತ್ತರಕೊಟ್ಟ ಕೆ.ಎಲ್.ರಾಹುಲ್
author img

By PTI

Published : Sep 12, 2023, 8:03 AM IST

ಕೊಲಂಬೊ (ಶ್ರೀಲಂಕಾ): ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಕೆ.ಎಲ್.ರಾಹುಲ್ ಹೆಸರು ನೋಡಿದವರಲ್ಲಿ ಹಲವರು ಇದು ಸರಿಯಾದ ಆಯ್ಕೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಏಕೆಂದರೆ ಅವರು ಗಾಯಕ್ಕೆ ತುತ್ತಾಗಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಗಾಯದ ನಂತರ ಅವರ ಫಾರ್ಮ್ ಬಗ್ಗೆ ಸಂಶಯ ವ್ಯಕ್ತಪಡಿಸಲಾಗುತ್ತಿತ್ತು. ಆದ್ರೆ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ.

ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಪಂದ್ಯಾವಳಿಯ ಮೊದಲೆರಡು ಪಂದ್ಯಗಳಿಂದ ರಾಹುಲ್ ಹೊರಗುಳಿದಿದ್ದರು. ವಿಶ್ವಕಪ್‌ಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಆಟಗಾರನನ್ನು ಆಡಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಆದರೆ ಪಾಕ್ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಸೂಪರ್ ಇನ್ನಿಂಗ್ಸ್ ಕಟ್ಟಿದ ರಾಹುಲ್ ಎಲ್ಲ ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿದರು.

ತನ್ನ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನಪಡುವ ಅಗತ್ಯವಿಲ್ಲ ಎಂಬುದನ್ನು ಅದ್ಭುತ ಬ್ಯಾಟಿಂಗ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಬಲಿಷ್ಠ ಪಾಕ್ ಬೌಲರ್‌ಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ದಂಡಿಸಿದ ರಾಹುಲ್ ದೀರ್ಘಕಾಲ ಬ್ಯಾಟಿಂಗ್ ಮಾಡಿದ್ದು ಮಾತ್ರವಲ್ಲದೆ, ಅತ್ಯುತ್ತಮ ಸ್ಟ್ರೋಕ್‌ಗಳಿಂದ ಕ್ರಿಕೆಟ್‌ ಲೋಕದ ಗಮನ ಸೆಳೆದರು. ಇದೇ ವೇಳೆ, ತಂಡದಲ್ಲಿ ಆಟಗಾರರ ಸಂಯೋಜನೆ ಮತ್ತು ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನೂ ಪರಿಹರಿಸಿದರು.

ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 122 ರನ್ ಗಳಿಸಿದರು. ಕೆ.ಎಲ್.ರಾಹುಲ್​ ಅಜೇಯ 111 ರನ್ ಪೇರಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿತ್ತು. ಕುಲದೀಪ್ ಯಾದವ್ 5 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಬ್ಯಾಟರ್‌ಗಳನ್ನು ದಂಗುಬಡಿಸಿದರು.

ರೋಹಿತ್ ಶರ್ಮಾ ಮಾತು: "ಟಾಸ್‌ಗೆ 5 ನಿಮಿಷಗಳ ಮೊದಲು ಕೆ.ಎಲ್.ರಾಹುಲ್​ಗೆ ಸಿದ್ಧರಾಗುವಂತೆ ಹೇಳಿದೆವು. ವಿರಾಟ್ ಮತ್ತು ಕೆ.ಎಲ್.ರಾಹುಲ್​ ಧನಾತ್ಮಕ ಮನೋಭಾವದಿಂದ ಉತ್ತಮವಾಗಿ ಆಡಿದ್ದಾರೆ. ಇದು ಅವರ ಅದ್ಭುತ ಪ್ರದರ್ಶನ'' ಎಂದು ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.

''ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ನಂತರ ಜಸ್ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ 8ರಿಂದ 10 ತಿಂಗಳಿಂದ ಬುಮ್ರಾ ಈ ನಿಟ್ಟಿನಲ್ಲಿ ಕಠಿಣ ಶ್ರಮ ಹಾಕುತ್ತಿದ್ದಾರೆ'' ಎಂದು ರೋಹಿತ್ ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ 'ವಿರಾಟ' ಶತಕ "ಸೂಪರ್ ನಾಕ್, ಸೂಪರ್ ಗೈ" ಎಂದು ಅನುಷ್ಕಾ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.