ಮುಂಬೈ: ಪ್ರಥಮ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ತಟಸ್ಥ ಸ್ಥಳದಲ್ಲಿ ಆಯೋಜನೆಗೊಂಡಿರುವುದು ಎರಡೂ ತಂಡಕ್ಕೆ ಸಮಾನ ಅನುಕೂಲ ಕಲ್ಪಿಸಲಿದೆ. ಕಿವೀಸ್ ಬೌಲರ್ಗಳಿಂದ ಎಂತಹ ಸವಾಲನ್ನೂ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಹೇಳಿದ್ದಾರೆ.
ಜೂನ್ 18ರಿಂದ 22ರವರೆಗೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೌತಾಂಪ್ಟನ್ನ ಏಜಿಯಸ್ ಬೌಲ್ನಲ್ಲಿ ನಡೆಯಲಿದೆ. ವೇಗಿಗಳಿಗೆ ನೆರವು ನೀಡುವ ಪಿಚ್ನಲ್ಲಿ ಭಾರತ ತಂಡಕ್ಕಿಂತ ನ್ಯೂಜಿಲ್ಯಾಂಡ್ ತಂಡ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದೆ ಎಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಆದರೆ ಪೂಜಾರ ಮಾತ್ರ ತಟಸ್ಥ ಸ್ಥಳ ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಲಿದೆ ಎಂದಿದ್ದಾರೆ.
"ಅವರ(ನ್ಯೂಜಿಲ್ಯಾಂಡ್) ಬೌಲಿಂಗ್ ದಾಳಿ ತುಂಬಾ ಸಮತೋಲಿತವಾಗಿದೆ. ನಾವು ಅವರ ಬೌಲರ್‌ಗಳನ್ನು ಈ ಮೊದಲು ಎದುರಿಸಿದ್ದೇವೆ ಮತ್ತು ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ, ಅವರು ಬಳಸುವ ಆ್ಯಂಗಲ್ಗಳ ಬಗ್ಗೆ ಸರಿಯಾದ ಕಲ್ಪನೆಗಳನ್ನು ಹೊಂದಿದ್ದೇವೆ ಮತ್ತು ಅದಕ್ಕೆ ನಾವು ಸಿದ್ಧರಾಗುತ್ತೇವೆ" ಎಂದು ಪೂಜಾರ ಪ್ರಮುಖ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಭಾರತ ತಂಡದ ವಿರುದ್ಧ ಕಳೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 2-0 ಅಂತರದಲ್ಲಿ ಸುಲಭದ ಜಯ ಸಾಧಿಸಿತ್ತು. ಆದರೆ ಪೂಜಾರ ಪ್ರಕಾರ ತಟಸ್ಥ ಸ್ಥಳದಲ್ಲಿ ಈ ಪಂದ್ಯ ನಡೆಯುವುದರಿಂದ ಇಬ್ಬರಿಗೂ ಅನುಕೂಲವಾಗಲಿದೆ. ಅವರಿಗೆ ತವರಿನಲ್ಲಿ ಪಡೆದಷ್ಟು ಲಾಭವನ್ನು ಇಲ್ಲಿ ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ಗೆ ಹೆಚ್ಚು ಅನುಕೂಲವಾಗಲಿದೆ ಎಂದು ನಾನು ಭಾವಿಸುವುದಿಲ್ಲ. 2020ರಲ್ಲಿ ನಾವು ಕಿವೀಸ್ನಲ್ಲಿ ಆಡಿದ್ದೆವು. ಅದು ಅವರ ಸ್ವಂತ ನೆಲವಾಗಿತ್ತು. ಆದರೆ ಡಬ್ಲ್ಯೂಟಿಸಿಯಲ್ಲಿ ಹಾಗಾಗುವುದಿಲ್ಲ. ಏಕೆಂದರೆ ಇದು ಇಬ್ಬರಿಗೂ ತಟಸ್ಥ ಸ್ಥಳವಾಗಲಿದೆ. ಯಾವುದೇ ತಂಡಕ್ಕೂ ತವರಿನ ಲಾಭ ಸಿಗುವುದಿಲ್ಲ. ನಾವು ನಮ್ಮ ತಳಪಾಯವನ್ನು ಬಲಪಡಿಸಕೊಂಡಿದ್ದೇವೆ, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ವಿಶ್ವದ ಯಾವುದೇ ತಂಡವನ್ನಾದರೂ ಮಣಿಸುತ್ತೇವೆ ಎಂದು ಪೂಜಾರ ಹೇಳಿದ್ದಾರೆ.
ಇದನ್ನು ಓದಿ:ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವೀಕ್ಷಣೆಗೆ 4000 ಪ್ರೇಕ್ಷಕರಿಗೆ ಅವಕಾಶ