ETV Bharat / sports

Team India: ಓವಲ್​ ಅಂಗಳದಲ್ಲಿ ಗೆದ್ದ ಬಳಿಕ ಡ್ರೆಸ್ಸಿಂಗ್​​ ರೂಂನಲ್ಲಿ ಟೀಂ ಇಂಡಿಯಾ ಸಂಭ್ರಮ: ವಿಡಿಯೋ

England vs India 4th test: ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ 4ನೇ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಪಂದ್ಯದ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ಕಂಡುಬಂದ ಸಂಭ್ರಮಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

Team india
Team india
author img

By

Published : Sep 7, 2021, 4:21 PM IST

ಓವಲ್​(ಇಂಗ್ಲೆಂಡ್​): ಬರೋಬ್ಬರಿ ಐದು ದಶಕಗಳ ಬಳಿಕ ಓವಲ್​ ಮೈದಾನದಲ್ಲಿ ಐತಿಹಾಸಿಕ ಗೆಲುವು ಪಡೆದ ಟೀಂ ಇಂಡಿಯಾ ಜಾಗತಿ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಆತಿಥೇಯರ ವಿರುದ್ಧ 157 ರನ್​ಗಳ ದಿಗ್ವಿಜಯ ಸಾಧಿಸುತ್ತಿದ್ದಂತೆ ಕೊಹ್ಲಿ ಪಡೆ ಡ್ರೆಸ್ಸಿಂಗ್​ ರೂಂನಲ್ಲಿ ಸಂಭ್ರಮಾಚರಣೆ ಮಾಡಿತು.

ಟೀಂ ಇಂಡಿಯಾ ಆಟಗಾರರು (Team India) ಹಾಗೂ ತಂಡದ ಸಹ ಸಿಬ್ಬಂದಿ ಪರಸ್ಪರ ಖುಷಿ ಹಂಚಿಕೊಂಡಿರುವ ವಿಡಿಯೋ ತುಣುಕೊಂದನ್ನು ಭಾರತೀಯ ಕ್ರಿಕೆಟ್ ಮಂಡಳಿ (BCCI) ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದೆ.

ಪಂದ್ಯದ ಬಳಿಕ ಮಾತನಾಡಿರುವ ಶತಕವೀರ ರೋಹಿತ್ ಶರ್ಮಾ, 'ವಿದೇಶಗಳಲ್ಲಿ 2-1 ಅಂತರದ ಮುನ್ನಡೆ ಸಾಧಿಸಿದಾಗ ನಿಜಕ್ಕೂ ವಿಶೇಷ ರೀತಿಯ ಸಂತೋಷವಾಗುತ್ತದೆ' ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿಯವರ ಜನಸ್ನೇಹಿ ನೀತಿಗಳೇ ಬೆಳಗಾವಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣ: ಜೆ.ಪಿ.ನಡ್ಡಾ

ವೇಗಿ ಉಮೇಶ್ ಯಾದವ್ ಕೂಡ ಸಂತಸ ವ್ಯಕ್ತಪಡಿಸಿದ್ದು, 'ಬಹಳಷ್ಟು ಪರಿಶ್ರಮ ಹಾಕಿದ್ದರಿಂದ ಕೊನೆಯ ದಿನ ಎಲ್ಲ ವಿಕೆಟ್ ಪಡೆದುಕೊಳ್ಳಲು ಸಾಧ್ಯವಾಯಿತು. ಮುಂದಿನ ಪಂದ್ಯದಲ್ಲೂ ಈ ರೀತಿಯ ಪ್ರದರ್ಶನ ಮುಂದುವರೆಯಲಿದೆ' ಎಂದು ಹೇಳಿದರು.

'4ನೇ ಟೆಸ್ಟ್​​ ಪಂದ್ಯದಲ್ಲಿ ನಾನು ಆಡಲಿದ್ದೇನೆ ಎಂಬುದು ಗೊತ್ತಾಗುತ್ತಿದ್ದಂತೆ ಉತ್ತಮ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡೆ. ಬ್ಯಾಟಿಂಗ್ ಹಾಗೂ ಬೌಲಿಂಗ್​​ನಲ್ಲೂ ಅತ್ಯುತ್ತಮ ಸಾಮರ್ಥ್ಯ ತೋರಲು ಅದು ಸಹಕಾರಿಯಾಯಿತು' ಎಂದು ಹೇಳಿದರು.

ಓವಲ್​ ಮೈದಾನದಲ್ಲಿ ಟೀಂ ಇಂಡಿಯಾ ಇಲ್ಲಿಯವರೆಗೆ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. 1971ರಲ್ಲಿ ಮೊದಲ ಟೆಸ್ಟ್‌ ಹಾಗು ಸರಣಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಇದೀಗ ಎರಡನೇ ಸಲ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿ ಐತಿಹಾಸಿಕ ಸಾಧನೆ ತೋರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.