ಮುಂಬೈ: ಭಾರತದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭಕ್ಕೂ ಮುನ್ನ ಚೀನಾದ ಹ್ಯಾಂಗ್‌ಝೌನಲ್ಲಿ 19ನೇ ಏಷ್ಯನ್ ಗೇಮ್ಸ್ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ವರ್ಷದ ಸ್ಪರ್ಧೆಗೆ ಭಾರತದ ಪುರುಷರ ಮತ್ತು ವನಿತೆಯರ ಕ್ರಿಕೆಟ್ ತಂಡ ಕಳುಹಿಸಲು ನಿರ್ಧರಿಸಿದೆ. ಈಗಾಗಲೇ ಗಾಯಕ್ವಾಡ್ ಮತ್ತು ಕೌರ್ ನೇತೃತ್ವದಲ್ಲಿ ತಂಡಗಳನ್ನು ಪ್ರಕಟಿಸಲಾಗಿದೆ.
ವಿಶ್ವಕಪ್ ಹಿನ್ನೆಲೆಯಲ್ಲಿ ಪುರುಷರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರೋಹಿತ್ ಬಳಗವನ್ನು ಟ್ರೈನ್ ಮಾಡುತ್ತಿದ್ದು, ಚೀನಾ ಪ್ರವಾಸಕ್ಕೆ ಬ್ಯಾಟಿಂಗ್ ದಿಗ್ಗಜ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಅಧ್ಯಕ್ಷ ವಿ.ವಿ.ಎಸ್.ಲಕ್ಷ್ಮಣ್ ಕೋಚ್ ಆಗಿರಲಿದ್ದಾರೆ. ಹಾಗೆಯೇ ಭಾರತದ ಮಾಜಿ ಆಲ್‌ರೌಂಡರ್ ಹೃಷಿಕೇಶ್ ಕಾನಿಟ್ಕರ್ ಏಷ್ಯನ್ ಗೇಮ್ಸ್‌ಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8 ರವರೆಗೆ ಏಷ್ಯನ್ ಗೇಮ್ಸ್ ನಿಗದಿಯಾಗಿದೆ.
-
Asian Games for India:
— Mufaddal Vohra (@mufaddal_vohra) August 27, 2023 " class="align-text-top noRightClick twitterSection" data="
Captain - Ruturaj Gaikwad.
Head Coach - VVS Laxman. pic.twitter.com/V0lbvYBG6O
">Asian Games for India:
— Mufaddal Vohra (@mufaddal_vohra) August 27, 2023
Captain - Ruturaj Gaikwad.
Head Coach - VVS Laxman. pic.twitter.com/V0lbvYBG6OAsian Games for India:
— Mufaddal Vohra (@mufaddal_vohra) August 27, 2023
Captain - Ruturaj Gaikwad.
Head Coach - VVS Laxman. pic.twitter.com/V0lbvYBG6O
ಪ್ರಸ್ತುತ ಲಕ್ಷ್ಮಣ್ ಅವರು ಉದಯೋನ್ಮುಖ ಆಟಗಾರರ ಶಿಬಿರಕ್ಕೆ ಮಾರ್ಗದರ್ಶ ನೀಡುತ್ತಿದ್ದಾರೆ. ಲಕ್ಷ್ಮಣ್ ಹೊರತಾಗಿ, ಏಷ್ಯಾಡ್‌ನಲ್ಲಿ ಭಾರತೀಯ ಪುರುಷರ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಭಾರತದ ಮಾಜಿ ಲೆಗ್ ಸ್ಪಿನ್ನರ್ ಸಾಯಿರಾಜ್ ಬಹುತುಲೆ ಮತ್ತು ಫೀಲ್ಡಿಂಗ್ ಕೋಚ್ ಆಗಿ ಮುನಿಶ್ ಬಾಲಿ ಇರಲಿದ್ದಾರೆ. ವನಿತೆಯರ ತಂಡಕ್ಕೆ ಡಿಸೆಂಬರ್ ವೇಳೆಯ ಅಂತರರಾಷ್ಟ್ರೀಯ ಹೋಮ್ ಸೀಸನ್ಗೆ ಹೊಸ ಕೋಚ್ ನೇಮಕ ಮಾಡುವ ನಿರೀಕ್ಷೆ ಇದೆ. ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕರಾಗಿರುವ ಹೃಷಿಕೇಶ್ ಭಾರತ ತಂಡದಲ್ಲಿ 2 ಟೆಸ್ಟ್ ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವರ್ಷದ ಟಿ20 ವಿಶ್ವಕಪ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಕಾನಿಟ್ಕರ್ ಜೊತೆಯಲ್ಲಿ ಬೌಲಿಂಗ್ ಕೋಚ್ ಆಗಿ ರಜಿಬ್ ದತ್ತಾ ಮತ್ತು ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್ ಮಹಿಳಾ ತಂಡದಲ್ಲಿರಲಿದ್ದಾರೆ.
ಏಷ್ಯನ್ ಗೇಮ್ಸ್- ತಂಡಗಳು ಇಂತಿದೆ: ಟೀಂ ಇಂಡಿಯಾ (ಸೀನಿಯರ್ ಮೆನ್): ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).
ಟೀಂ ಇಂಡಿಯಾ (ಸೀನಿಯರ್ ವಿಮೆನ್ಸ್): ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟೈಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅನುಷಾ ಬಾರೆಡ್ಡಿ.
ಸ್ಟ್ಯಾಂಡ್‌ಬೈ ಪಟ್ಟಿಯಲ್ಲಿ ಹರ್ಲೀನ್ ಡಿಯೋಲ್, ಕಾಶ್ವೀ ಗೌತಮ್, ಸ್ನೇಹ್ ರಾಣಾ, ಸೈಕಾ ಇಶಾಕ್, ಪೂಜಾ ವಸ್ತ್ರಾಕರ್ ಇದ್ದು, ಮಹಿಳಾ ಕ್ರಿಕೆಟ್ ಸ್ಪರ್ಧೆಯು ಸೆಪ್ಟೆಂಬರ್ 19 ರಿಂದ 28ರ ವರೆಗೆ ಟಿ20 ಸ್ವರೂಪದಲ್ಲಿ ನಡೆಯಲಿದೆ.
ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್: ಏಷ್ಯನ್ ದಾಖಲೆ ಮುರಿದ ಭಾರತ ರಿಲೇ ತಂಡ, ಫೈನಲ್‌ಗೆ ಅರ್ಹತೆ