ETV Bharat / sports

Greg Chappell on Kohli: ವಿಶ್ವಕಪ್​ನಲ್ಲಿ ಅತೀ ಹೆಚ್ಚು ರನ್​ ಗಳಿಸುವ ಪ್ರಭಾವಿ ಆಟಗಾರ ವಿರಾಟ್​ ಕೊಹ್ಲಿ... ಗ್ರೆಗ್ ಚಾಪೆಲ್ - ETV Bharath Kannada news

Greg Chappell on Virat Kohli: ವಿಶ್ವಕಪ್​ ಕುರಿತಾದ ಚರ್ಚೆಯಲ್ಲಿ ಗ್ರೆಗ್ ಚಾಪೆಲ್ 2023ರ ಏಕದಿನ ವಿಶ್ವಕಪ್​ನಲ್ಲಿ ವಿರಾಟ್​ ಹೆಚ್ಚು ಪ್ರಭಾವ ಬೀರಲಿದ್ದಾರೆ ಎಂದಿದ್ದಾರೆ.

Greg Chappell on Virat Kohli in World Cup

author img

By

Published : Aug 19, 2023, 7:34 PM IST

Updated : Aug 19, 2023, 8:05 PM IST

ನವದೆಹಲಿ: ಈ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿಯ ಮೇಲೆ ದೇಶದ ಕ್ರಿಕೆಟ್​ ಪ್ರೇಮಿಗಳಿಗಷ್ಟೇ ಅಲ್ಲ, ವಿದೇಶಿಗರ ಕಣ್ಣೂ ಇದೆ. ವಿರಾಟ್​ ಮುಕ್ತ ಮನಸ್ಸಿನಿಂದ ಆಡಿದರೆ ಅಕ್ಟೋಬರ್ 5 ರಿಂದ ಪಾರಂಭವಾಗುವ ವಿಶ್ವಕಪ್​ನಲ್ಲಿ​ ಹೆಚ್ಚು ರನ್​ ಗಳಿಸುತ್ತಾರೆ ಮತ್ತು 2023ರಲ್ಲಿ ಹೆಚ್ಚು ಪ್ರಭಾವಿ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಪ್ರತಿಪಾದಿಸಿದ್ದಾರೆ.

2023 ವಿಶ್ವಕಪ್​ ಬಗ್ಗೆ ಇತ್ತೀಚೆಗೆ ಮಾತನಾಡಿದ ಗ್ರೆಗ್ ಚಾಪೆಲ್, ಈ ಹಿಂದೆ ಸಚಿನ್​ ತಮ್ಮ ಬಳಿ ಕೇಳಿದ್ದ ಪ್ರಶ್ನೆಯನ್ನು ನೆನಪಿಸಿಕೊಂಡಿದ್ದಾರೆ. "ಭಾರತದ ಕೋಚ್​ ಆಗಿದ್ದಾಗ ಸಚಿನ್​ ವೈಯುಕ್ತಿಕವಾಗಿ ಭೇಟಿಯಾಗಿ "ಬರುಬರುತ್ತಾ ಬ್ಯಾಟಿಂಗ್​ ಕಠಿಣ ಆಗುತ್ತಿದೆ, ಕಾರಣ ಏನು" ಎಂದು ಕೇಳಿದ್ದರು. "ಆರಂಭದಲ್ಲಿ ನಾವು ಕಲಿಯುತ್ತಿರುತ್ತೇವೆ, ನಾವು ಯಶಸ್ಸಿಗಾಗಿ ಹೋರಾಡುತ್ತಿರುತ್ತೇವೆ. ನಂತರ ಅನುಭವಿಗಳಾಗುತ್ತೇವೆ ಆಗ ನಾವು ಖ್ಯಾತಿಯ ಬಗ್ಗೆ, ಒತ್ತಡದ ಬಗ್ಗೆ ಅಥವಾ ನಿರೀಕ್ಷೆಗಳ ಬಗ್ಗೆ ಚಿಂತಿಸುವುದಿಲ್ಲ. ಆದರೆ ನಿಮ್ಮ ಅನುಭವದಿಂದ ನಿಮ್ಮ ಯಶಸ್ಸನ್ನು ದೇಶ ಬಯಸುತ್ತಿರುತ್ತದೆ ಇದು ಒತ್ತಡವಾಗುತ್ತದೆ. ಇದನ್ನು ಬಿಟ್ಟು ಆಡಿದರೂ ನಿಮ್ಮ ಬಗ್ಗೆ ಎದುರಾಳಿ ಬೌಲರ್​ ತಿಳಿದುಕೊಂಡು ಬಂದು ಚೆಂಡು ಹಾಕುತ್ತಿರುತ್ತಾನೆ. ಅವನ ಅಧ್ಯಯನ ನಿಮಗೆ ಕಠಿಣತೆಯನ್ನು ನೀಡುತ್ತದೆ ಎಂದು ಹೇಳಿದ್ದನ್ನು ಸ್ಮರಿಸಿದ್ದಾರೆ.

  • Former Australia captain Greg Chappell heaped praise on Virat Kohli's sensational T20 World Cup innings against Pakistan. pic.twitter.com/pDDEm8KV6J

    — CricTracker (@Cricketracker) August 19, 2023 " class="align-text-top noRightClick twitterSection" data=" ">

ಮಾನಸಿಕವಾಗಿ ಸಿದ್ಧರಾಗಿರಬೇಕು ಮತ್ತು ಮುಕ್ತ ಮನಸ್ಸಿನಿಂದ ಆಡಬೇಕು ಅದು ಮುಖ್ಯ. ನೀವು ಮಾನಸಿಕವಾಗಿ ನಿಮ್ಮನ್ನು ಮುಕ್ತಗೊಳಿಸಲು ಸಾಧ್ಯವಾದರೆ, ನಿಮ್ಮ ವೃತ್ತಿಜೀವನದ ಆರಂಭದಲ್ಲಿ ನೀವು ಮಾಡಿದ ರೀತಿಯಲ್ಲಿ ಬ್ಯಾಟ್ ಮಾಡಬಹುದು ಮತ್ತು ಆಟವನ್ನು ನಿಯಂತ್ರಿಸಬಹುದು. ಇದನ್ನು ವಿರಾಟ್​ 2022ರ ವಿಶ್ವಕಪ್​ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮಾಡಿದ್ದನ್ನು ಕಾಣಬಹುದು. ಮುಕ್ತವಾಗಿ ಆಡಿದ್ದು ಅವರ ಬ್ಯಾಟಿಂಗ್​ ಶೈಲಿಯಿಂದಲೇ ತಿಳಿಯುತ್ತದೆ. ನನ್ನ ಪ್ರಕಾರ ಅಂದು ಅವರ ಪ್ರದರ್ಶನವನ್ನು ಮಾಸ್ಟರ್​ ಕ್ಲಾಸ್​ ಎಂದು ಹೇಳಿದ್ದಾರೆ.

ಮುಕ್ತ ಮನಸ್ಸಿನಿಂದ ವಿರಾಟ್​ ಆಡಬೇಕು: "ಈ ವಿಶ್ವಕಪ್‌ನಲ್ಲಿ ವಿರಾಟ್ ಇದೇ ರೀತಿಯ ಮಾನಸಿಕ ಸಿದ್ಧತೆಯಲ್ಲಿ ಇರುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರು ಪಂದ್ಯಾವಳಿಯನ್ನು ಮುಕ್ತ ಮನಸ್ಸಿನಲ್ಲಿ ಉತ್ತಮವಾಗಿ ತಯಾರಿ ನಡೆಸಿದರೆ ಭಾರತಕ್ಕಾಗಿ ಸಾಕಷ್ಟು ರನ್ ಗಳಿಸುತ್ತಾರೆ ಮತ್ತು ಸ್ಪರ್ಧೆಯಲ್ಲಿ ಪ್ರಮುಖ ಪ್ರಭಾವಿ ಆಟಗಾರ ಆಗುತ್ತಾರೆ ಎಂದಿದ್ದಾರೆ ಚಾಪೆಲ್​​.

  • Greg Chappell said - "Virat Kohli is a Champion player. He wins the big matches for India. He always wants to perform in every tournaments for India. The way he played against Pakistan in T20 WC 2022, It was the perfect batting masterclass by the master himself". (RevSportz) pic.twitter.com/GuoimSY1sE

    — CricketMAN2 (@ImTanujSingh) August 19, 2023 " class="align-text-top noRightClick twitterSection" data=" ">

ಗಾಯದಿಂದ ಚೇತರಿಸಿಕೊಂಡು ಐರ್ಲೆಂಡ್​ನಲ್ಲಿ ಮೊದಲ ಟಿ20ಯಲ್ಲಿ "ಪಂದ್ಯ ಶ್ರೇಷ್ಠ" ಪ್ರದರ್ಶನ ನೀಡಿದ ಬುಮ್ರಾ ಬಗ್ಗೆ ಮಾತನಾಡಿದ ಗ್ರೆಗ್​,"ಬುಮ್ರಾ ಬೌಲಿಂಗ್​ನಲ್ಲಿ ಉತ್ತಮ ಮನಸ್ಥಿತಿಯನ್ನು ಕಾಣುತ್ತಿದ್ದೇನೆ. ಒಂದು ಬಾಲ್​ನಲ್ಲಿ ಬೌಂಡರಿ ಹೋದರೆ ಅದರ ಫಲಿತಾಂಶದ ಬಗ್ಗೆ ಯೋಚಿಸದೆ, ಮುಂದಿನ ಬಾಲ್​ನಲ್ಲಿ ಬ್ಯಾಟರ್​ನ್ನು ಕಟ್ಟಿಹಾಕುವ ತಂತ್ರವನ್ನು ಹೆಣಯುವುದು ಮುಖ್ಯವಾಗುತ್ತದೆ. ಗಾಯಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ನಮ್ಮ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಇದಕ್ಕಾಗಿ ಮುಕ್ತ ಮನಸ್ಸಿನಿಂದ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಅಗತ್ಯ" ಎಂದಿದ್ದಾರೆ.

ಏಷ್ಯನ್​ ರಾಷ್ಟ್ರಗಳಿಗೆ ತವರಿನ ಲಾಭ: 2011 ವಿಶ್ವಕಪ್​ನಲ್ಲಿ ಭಾರತದ ಮೈದಾನಗಳಲ್ಲಿ ಏಷ್ಯನ್ ತಂಡಗಳು ಪ್ರಾಬಲ್ಯ ಸಾಧಿಸಿದಂತೆ ಈ ಬಾರಿಯೂ ಆಗುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, "ಮನೆಯ ಪ್ರಯೋಜನವು ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ. ಭಾರತದ ಕೋಚ್ ಆಗಿದ್ದಾಗ ನಾನು ಗಮನಿಸಿದ ಒಂದು ವಿಷಯವೆಂದರೆ, ತವರಿನಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಭಾರತೀಯರು ತುಂಬಾ ಆರಾಮದಾಯಕರಾಗಿದ್ದಾರೆ. ಭಾರತೀಯ ಚೇಂಜ್ ರೂಮಿನೊಳಗೆ ಕುಳಿತು ಹೊರಗೆ ನೋಡುತ್ತಿರುವುದು ನನಗೆ ಸ್ಪಷ್ಟವಾಗಿತ್ತು. ಇದು ಬದಲಾಗಿಲ್ಲ ಮತ್ತು ರೋಹಿತ್ ಮತ್ತು ರಾಹುಲ್ ನೇತೃತ್ವದಲ್ಲಿ ಈ ಭಾರತ ತಂಡವು ತುಂಬಾ ಉತ್ತಮವಾಗಿದೆ. ತವರಲ್ಲಿ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಐಪಿಎಲ್​ನ ಪರಿಣಾಮ ಪಿಚ್​​ ಮತ್ತು ಕಂಡೀಷನ್​ ವಿದೇಶಿ ಆಟಗಾರರು ಅದರಲ್ಲೂ ಇಂಗ್ಲೆಂಡ್​, ಆಸ್ಟ್ರೇಲಿಯಾದವರಿಗೆ ಅರಿವಿದೆ. ಇದು ಸ್ಪರ್ಧೆಯಲ್ಲಿ ಇನ್ನಷ್ಟೂ ಕುತೂಹಲವಾಗಿಸುತ್ತದೆ ಎಂದು ಚಾಪೆಲ್ ಹೇಳಿದ್ದಾರೆ.

ರೋಹಿತ್, ರಾಹುಲ್ ಒತ್ತಡ ಇದೆ: ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್‌ಗೆ ತವರಿನ ಪರಿಸ್ಥಿತಿ ಎಷ್ಟು ಕಠಿಣ ಆಗಬಹುದು ಎಂದಾಗ,"ಅವರ ಮೇಲೆ ಭಾರಿ ಒತ್ತಡವಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ವಿಶ್ವಕಪ್ ಸಮಯದಲ್ಲಿ ನಿಮ್ಮ ಫೋನ್‌ಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸಿದರೆ ಇದರ ಒತ್ತಡ ಅರಿವಾಗುತ್ತದೆ. ಪ್ರಮುಖ ಪಂದ್ಯಗಳಲ್ಲಿ ಇಬ್ಬರ ಮೇಲೆ ಒತ್ತಡ ಹೆಚ್ಚಲಿದೆ. ಇಬ್ಬರು ಅನುಭವಿಗಳೇ ಹೀಗಾಗಿ ತಂಡವು ಏನನ್ನು ಯೋಚಿಸುತ್ತದೆ ಎಂಬುದು ಆಟದಲ್ಲಿ ಪ್ರತಿಬಿಂಬವಾಗುತ್ತದೆ.

ಗಿಲ್​ ಮೇಲೆ ನಿರೀಕ್ಷೆ: ವಿಶ್ವಕಪ್‌ನಲ್ಲಿ ಶುಭಮನ್ ಗಿಲ್ ಸಾಕಷ್ಟು ರನ್ ಗಳಿಸುವ ನಿರೀಕ್ಷೆಯಿದೆ ಎಂದು ಚಾಪೆಲ್ ಹೇಳಿದ್ದಾರೆ. "ಗಿಲ್​ ರೆಡ್​ಬಾಲ್​ ಕ್ರಿಕೆಟ್​ ಅಂದರೆ ಟೆಸ್ಟ್​ನಲ್ಲಿ ಅಷ್ಟು ಪರಿಣಾಮಕಾರಿಯಾಗಿ ಕಂಡಿಲ್ಲ. ಆದರೆ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಅವರು ಅದ್ಭುತ್​ ಬ್ಯಾಟರ್​​. ವಿಶ್ವಕಪ್​ನಲ್ಲಿ ಅವರಿಂದ ಹೆಚ್ಚು ಸ್ಥಿರ ಪ್ರದರ್ಶನ ಕಾಣುವ ಸಾಧ್ಯತೆ ಇದೆ ಎಂದು ಗ್ರೆಗ್ ​ಯುವ ಬ್ಯಾಟರ್​ ಮೇಲೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: Ravi Bishnoi: ಬುಮ್ರಾ ಬೌಲಿಂಗ್​ ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು... ಬಿಷ್ಣೋಯ್

Last Updated : Aug 19, 2023, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.