ಹೈದರಾಬಾದ್: ದುಬೈನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ಮುಕ್ತಾಯದ ಬಳಿಕ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕಳೆಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದು, ಟ್ವೀಟರ್ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.
2017ರಿಂದಲೂ ಟೀಂ ಇಂಡಿಯಾದ ಮೂರು ಮಾದರಿ ಕ್ರಿಕೆಟ್ನಲ್ಲಿ ಕ್ಯಾಪ್ಟನ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದ ಕೊಹ್ಲಿ, ಇದೀಗ ಟಿ-20 ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ.
![Virat Kohli](https://etvbharatimages.akamaized.net/etvbharat/prod-images/13084538_twdfdfdfdfdf.jpg)
- 'ನಾಯಕತ್ವ ಪಡೆಯಲು ಅದೃಷ್ಟ ಮಾಡಿರಬೇಕು'
ಟೀಂ ಇಂಡಿಯಾ ತಂಡದಲ್ಲಿ ಅಡುವ ಅವಕಾಶದ ಜೊತೆಗೆ ತಂಡ ಮುನ್ನಡೆಸುವ ಜವಾಬ್ದಾರಿ ನನಗೆ ಸಿಕ್ಕಿತ್ತು. ಈ ರೀತಿಯ ಅವಕಾಶ ಪಡೆದುಕೊಳ್ಳಲು ಅದೃಷ್ಟ ಮಾಡಿರಬೇಕು. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಆಟಗಾರರ ಸಹಕಾರ ಇಲ್ಲದಿದ್ದರೆ ಏನೂ ಮಾಡಲಾಗುತ್ತಿರಲಿಲ್ಲ. ನಾಯಕನಾಗಿ ಈ ಪಯಣದಲ್ಲಿ ನನಗೆ ಬೆಂಬಲ ಸೂಚಿಸಿರುವ ಆಟಗಾರರು, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ಕೋಚ್ ಹಾಗೂ ತಂಡದ ಗೆಲುವಿನಲ್ಲಿ ಪ್ರಾರ್ಥನೆ ಮಾಡಿರುವ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ.
-
🇮🇳 ❤️ pic.twitter.com/Ds7okjhj9J
— Virat Kohli (@imVkohli) September 16, 2021 " class="align-text-top noRightClick twitterSection" data="
">🇮🇳 ❤️ pic.twitter.com/Ds7okjhj9J
— Virat Kohli (@imVkohli) September 16, 2021🇮🇳 ❤️ pic.twitter.com/Ds7okjhj9J
— Virat Kohli (@imVkohli) September 16, 2021
- 'ಟೆಸ್ಟ್, ಏಕದಿನ ತಂಡ ಮುನ್ನಡೆಸಲು ಸಂಪೂರ್ಣ ಸಿದ್ಧನಾಗಬೇಕು'
ಕಳೆದ 5-6 ವರ್ಷದಿಂದ ಮೂರು ಮಾದರಿ ಕ್ರಿಕೆಟ್ನಲ್ಲಿ ತಂಡ ಮುನ್ನಡೆಸಿಕೊಂಡು ಬರುತ್ತಿದ್ದು, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಮುನ್ನಡೆಸಲು ನಾನು ಸಂಪೂರ್ಣವಾಗಿ ಸಿದ್ಧನಾಗಲು ಸಮಯಾವಕಾಶ ಬೇಕು. ಹೀಗಾಗಿ ಟಿ-20 ಕ್ರಿಕೆಟ್ನಲ್ಲಿ ಓರ್ವ ಬ್ಯಾಟ್ಸ್ಮನ್ ಆಗಿ ಮುಂದುವರೆಯಲು ಬಯಸುತ್ತೇನೆ.
ಇದನ್ನೂ ಓದಿ: ವಿಶ್ವಕಪ್ ಬಳಿಕ ಟಿ-20 ನಾಯಕ ಸ್ಥಾನದಿಂದ ಕೆಳಗಿಳಿಯುವೆ: ವಿರಾಟ್ ಕೊಹ್ಲಿ ಘೋಷಣೆ
- 'ಅನೇಕರೊಂದಿಗೆ ಚರ್ಚೆ ನಂತರ ನಿರ್ಧಾರ'ಟಿ-20 ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಣೆ
ಈ ಮಹತ್ವದ ನಿರ್ಧಾರ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿದ್ದು, ಅನೇಕರೊಂದಿಗೆ ಚರ್ಚೆ ಮಾಡಿದ್ದೇನೆ. ಪ್ರಮುಖವಾಗಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಸಹ ಆಟಗಾರ ರೋಹಿತ್ ಶರ್ಮಾ ಜೊತೆ ಚರ್ಚೆ ನಡೆಸಿದ್ದಾಗಿ ವಿರಾಟ್ ಹೇಳಿಕೊಂಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಜೊತೆ ಸಮಾಲೋಚನೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
![Virat Kohli](https://etvbharatimages.akamaized.net/etvbharat/prod-images/13084538_wdfdfdf.jpg)
- 'ನನ್ನ T20 ತಂಡಕ್ಕಾಗಿ ಸರ್ವಸ್ವವನ್ನೂ ನೀಡಿದ್ದೇನೆ'
ನನ್ನ ತಂಡಕ್ಕಾಗಿ ಸರ್ವಸ್ವವನ್ನೂ ನೀಡಿದ್ದು, ಇದೀಗ ಟಿ-20 ಕ್ರಿಕೆಟ್ನಲ್ಲಿ ಓರ್ವ ಬ್ಯಾಟ್ಸ್ಮನ್ ಆಗಿ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ. ಈ ವೇಳೆ ನನ್ನ ಕೈಯಿಂದ ಆಗುವ ಎಲ್ಲವನ್ನೂ ತಂಡಕ್ಕಾಗಿ ನೀಡುತ್ತೇನೆ.