ETV Bharat / sports

49ನೇ ಏಕದಿನ ಶತಕ ಗಳಿಸಿದ ವಿರಾಟ್.. ಸಚಿನ್​ ಸಾಧನೆ ಸರಿಗಟ್ಟಿದ ಕಿಂಗ್​ ಕೊಹ್ಲಿ​ - ETV Bharath Karnataka

Virat Kohli scored 49th ODI century; ವಿರಾಟ್​ ಕೊಹ್ಲಿ ತಮ್ಮ ಜನ್ಮದಿನದಂದೇ 49ನೇ ಶತಕವನ್ನು ಗಳಿಸುವ ಮೂಲಕ ಸಂಭ್ರಮಿಸಿದ್ದಾರೆ.

Virat Kohli scored 49th ODI century
Virat Kohli scored 49th ODI century
author img

By ETV Bharat Karnataka Team

Published : Nov 5, 2023, 5:50 PM IST

Updated : Nov 5, 2023, 7:20 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜನ್ಮದಿನದಂದೇ ವಿರಾಟ್​ ಕೊಹ್ಲಿ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಈಡನ್​ಗಾರ್ಡನ್ಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್​ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ವಿರಾಟ್ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವಿರಾಟ್​ ಗಳಿಸಿದ 49ನೇ ಶತಕ ಇದಾಗಿದೆ. ಅವರು ಇನ್ನಿಂಗ್ಸ್​ನಲ್ಲಿ 121 ಬಾಲ್​ ಆಡಿ 10 ಬೌಂಡರಿಯಿಂದ 101 ರನ್​ ಗಳಿಸಿದರು.

ದಿಗ್ಗಜ ಸಚಿನ್ ತೆಂಡೂಲ್ಕರ್‌ ಏಕದಿನ ಕ್ರಿಕೆಟ್​ನಲ್ಲಿ 49 ಶತಕ ಮಾಡಿದ್ದು ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಎಂಬ ದಾಖಲೆ ಆಗಿತ್ತು. ಈ ಅಗ್ರಸ್ಥಾನದಲ್ಲಿ ವಿರಾಟ್​ ಕೊಹ್ಲಿ ಸಚಿನ್​ ಜೊತೆಗೆ ಸೇರಿಕೊಂಡಿದ್ದಾರೆ. ಸಚಿನ್​ ತೆಂಡೂಲ್ಕರ್​ 452 ಇನ್ನಿಂಗ್ಸ್​ನಿಂದ ಇಷ್ಟು ಶತಕದ ದಾಖಲೆ ಮಾಡಿದ್ದರೆ, ವಿರಾಟ್​ ಕೇವಲ 277 ಇನ್ನಿಂಗ್ಸ್​ ಆಡಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.

ಜನ್ಮದಿನದಂದು ವಿಶೇಷ ಶತಕ: ವಿರಾಟ್​ ಅವರ 49ನೇ ಶತಕಕ್ಕೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕುಳಿತಿದ್ದರು. ಜನ್ಮದಿನವಾದ ಇಂದು ಅವರ ಬ್ಯಾಟ್​ನಿಂದ ಈ ಶತಕ ಬರುವ ಬಗ್ಗೆ ಹೆಚ್ಚಿನವರ ನಿರೀಕ್ಷೆ ಇತ್ತು ಅದರಂತೆ ವಿರಾಟ್​ ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ಟಿದ್ದಲ್ಲದೇ, ಇದೇ ವಿಶ್ವಕಪ್​ನಲ್ಲಿ ಮೂರು ಬಾರಿ ಶತಕದಂಚಿನಲ್ಲಿ ಎಡವಿದ್ದ ತಪ್ಪನ್ನು ಮರುಕಳಿಸದಂತೆ ನೋಡಿಕೊಂಡಿದ್ದಾರೆ. ರಾಸ್​​​ ಟೇಲರ್​, ಮಿಚೆಲ್ ಮಾರ್ಷ್​ ನಂತರ ವಿಶ್ವಕಪ್​ ಸಂದರ್ಭದಲ್ಲಿ ಜನ್ಮದಿನದಂದೇ ವಿರಾಟ್​ ಕೊಹ್ಲಿ ಶತಕ ಗಳಿಸಿದ ಆಟಗಾರ ಆದರು. ಭರ್ಜರಿ ಶತಕದಿಂದ ವಿರಾಟ್​ ಅಭಿಮಾನಿಗಳಿಗೆ ಸಂತಸವನ್ನು ತಂದಿದ್ದಾರೆ.

ಶತಕದ ಶತಕಕ್ಕೂ ವಿರಾಟ್​ ಸನಿಹ: ಸಚಿನ್​ ಒಟ್ಟಾರೆ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 100 ಶತಕಗಳನ್ನು ಗಳಿಸಿದ ದಾಖಲೆ ಮಾಡಿದ್ದಾರೆ. ವಿರಾಟ್ ಮುಂದಿನ ಗುರಿ ಇದೇ ಎಂದು ಹೇಳಬಹುದು. ಈಗಾಗಲೇ ವಿರಾಟ್​ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 79 ಶತಕಗಳನ್ನು ಮಾಡಿದ್ದು, ಇನ್ನು 21 ಶತಕ ಅವರ ಬ್ಯಾಟ್​ನಿಂದ ಬರಬೇಕಿದೆ. ಏಕದಿನದಲ್ಲಿ 49, ಟೆಸ್ಟ್​ನಲ್ಲಿ 29 ಮತ್ತು ಟಿ20ಯಲ್ಲಿ ವಿರಾಟ್​ 1ಶತಕ ಗಳಿಸಿದ್ದಾರೆ.

ವಿಶ್ವಕಪ್​ನ ಭಾರತದ ಪಂದ್ಯಕ್ಕೆ ಸಾಮಾನ್ಯವಾಗಿ ಕಿಕ್ಕಿರಿದು ಜನ ಸೇರುತ್ತಾರೆ. ಅದರಲ್ಲೂ ವೀಕೆಂಡ್​ ಪಂದ್ಯಗಳಿಗೆ ಸ್ಟೇಡಿಯಂ ತುಂಬಿ ತುಳುಕುತ್ತದೆ. ವಿರಾಟ್​ ಅವರ 35ನೇ ಜನ್ಮದಿನದಂದು ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿರಾಟ್​ ಆಟವನ್ನು ನೋಡಲೆಂದೇ ಅಭಿಮಾನಿಗಳು ಸೇರಿದ್ದರು. ಅಲ್ಲಿ ನೆರೆದ ಅಭಿಮಾನಿಗಳಿಗೆ ಇಂದು ಕಣ್ಮನ ಸೆಳೆಯುವ ಪ್ರದರ್ಶನವಂತು ಕಾಣಸಿಕ್ಕಿದೆ.

ಇನಿಂಗ್ಸ್ ಬಳಿಕ ಮಾತನಾಡಿದ ಕೊಹ್ಲಿ, ಬ್ಯಾಟಿಂಗ್ ಮಾಡಲು ಇದೊಂದು ಟ್ರಿಕಿ ವಿಕೆಟ್ ಆಗಿತ್ತು ಎಂದಿದ್ದಾರೆ. "10 ನೇ ಓವರ್‌ನ ನಂತರ ಚೆಂಡು ತಿರುಗಲು ಪ್ರಾರಂಭಿಸಿತು, ಅದ್ದರಿಂದ ರನ್​ನ ಗತಿ ನಿಧಾನವಾಯಿತು, ನಾನು ಇತರರೊಂದಿಗೆ ಆಳವಾದ ಬ್ಯಾಟಿಂಗ್​ ಮಾಡಲು ಇಚ್ಛಿಸಿದೆ. ಅಲ್ಲದೇ ತಂಡದಿಂದಲೂ ರಕ್ಷಣಾತ್ಮಕ ಆಟಕ್ಕೆ ಸಲಹೆ ಬಂದಿತ್ತು" ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಶತಕದತ್ತ ವಿರಾಟ್​ ದಾಪುಗಾಲು.. ಅರ್ಧಶತಕ ಗಳಿಸಿದ ಅಯ್ಯರ್​ ಔಟ್​​​

Last Updated : Nov 5, 2023, 7:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.