ಮುಂಬೈ : ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲಾತಾಣದಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸೆಲೆಬ್ರೆಟಿಯಾಗಿದ್ದಾರೆ.
ಆದರೆ, ಮಗಳು ಜನಿಸಿ 5 ತಿಂಗಳಾದರೂ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡದಿರುವುದಕ್ಕೆ ಕಾರಣ ಬಹಿರಂಗ ಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇದೇ ವರ್ಷ ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಭಾರತದ ಪ್ರಸಿದ್ಧ ಸೆಲೆಬ್ರಿಟಿ ಜೋಡಿಯಾಗಿರುವ ವಿರುಷ್ಕಾ ದಂಪತಿ ಸಾಮಾಜಿಕ ಜಾಲಾತಾಣದಲ್ಲಿ ತಮ್ಮ ಮಗಳ ಫೋಟೋವನ್ನು ಒಮ್ಮೆಯೂ ಶೇರ್ ಮಾಡಿಕೊಂಡಿಲ್ಲ.
ಶನಿವಾರ ಕ್ವಾರಂಟೈನ್ನಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ನಲ್ಲಿ ಉತ್ತರಿಸುವುದಾಗಿ ಹೇಳಿದ್ದರು. ಈ ವೇಳೆ ಅಭಿಮಾನಿಯೊಬ್ಬ ನಿಮ್ಮ ಮಗಳಿಗಿಟ್ಟಿರುವ ವಮಿಕಾ ಹೆಸರಿನ ಅರ್ಥವೇನು, ಅವಳು ಹೇಗಿದ್ದಾಳೆ, ನಾವು ಅವಳ ಫೋಟೋವನ್ನು ನೋಡಬಹುದಾ ಎಂದು ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸುವ ಕೊಹ್ಲಿ, " ವಮಿಕಾ ದುರ್ಗಾ ಮಾತೆಯ ಮತ್ತೊಂದು ಹೆಸರು, ನಾವು ದಂಪತಿಯಾಗಿ ನಮ್ಮ ಮಗು ಸಾಮಾಜಿಕ ಜಾಲಾತಾಣದ ಎಂದರೇನು ಎಂದು ತಿಳಿದುಕೊಳ್ಳುವ ಮೊದಲು ಮತ್ತು ತನ್ನದೇ ಆದ ಆಯ್ಕೆ ಮಾಡುವ ಮೊದಲು ಅವಳ ಫೋಟೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಳ್ಳದಿರಲು ನಿರ್ಧರಿಸಿದ್ದೇವೆ" ಎಂದಿದ್ದಾರೆ.
ಇದನ್ನು ಓದಿ: ಶಾಹಿದ್ ಕಪೂರ್, ಬಾಬಿ ಡಿಯೋಲ್, ಪ್ರೊಫೆಸರ್.. ನಿಮಗೆ ಕೊಹ್ಲಿ ಯಾರ ಥರ ಕಾಣ್ತಿದ್ದಾರೆ?