ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ 63 ರನ್ ಗಳಿಸಿದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೈದರಾಬಾದ್ನಲ್ಲಿ ನಿನ್ನೆ ನಡೆದ ಈ ಪಂದ್ಯದಲ್ಲಿ ವಿರಾಟ್ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.
ವಿರಾಟ್ ಕೊಹ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಭಾರತದ ತಂಡ ಮಾಜಿ ದಿಗ್ಗಜ ಬ್ಯಾಟರ್, ಸದ್ಯ ಟೀಂ ಇಂಡಿಯಾ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದರು.
ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಭಾರತದ ಪರ 24,078 ರನ್ ಪೇರಿಸಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ಗಿಂತ 14 ರನ್ ಮುಂದೆ ಸಾಗಿದ್ದಾರೆ. ಅಗ್ರಸ್ಥಾನದಲ್ಲಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ 34,375 ರನ್ ಶಿಖರ ನಿರ್ಮಿಸಿದ್ದಾರೆ.
-
How's that for a MAXIMUM from @imVkohli 💥
— BCCI (@BCCI) September 25, 2022 " class="align-text-top noRightClick twitterSection" data="
Don’t miss the LIVE coverage of the #INDvAUS match on @StarSportsIndia pic.twitter.com/fMHfv6LMLr
">How's that for a MAXIMUM from @imVkohli 💥
— BCCI (@BCCI) September 25, 2022
Don’t miss the LIVE coverage of the #INDvAUS match on @StarSportsIndia pic.twitter.com/fMHfv6LMLrHow's that for a MAXIMUM from @imVkohli 💥
— BCCI (@BCCI) September 25, 2022
Don’t miss the LIVE coverage of the #INDvAUS match on @StarSportsIndia pic.twitter.com/fMHfv6LMLr
ಇದನ್ನೂ ಓಧಿ: ನ್ಯೂಜಿಲೆಂಡ್ ಎ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಕುಲದೀಪ್.. ನಾಲ್ಕು ಬಾರಿ ಈ ಸಾಧನೆ ಮಾಡಿದ ಚೈನಾಮನ್!
ಆದರೆ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್ ಪರಿಗಣಿಸಿದರೆ ರಾಹುಲ್ ದ್ರಾವಿಡ್ ಅವರೇ ವಿರಾಟ್ಗಿಂತ ಮುಂದಿದ್ದಾರೆ. ಯಾಕೆಂದರೆ ಅವರು ಭಾರತ, ಏಷ್ಯಾ (ವಿವಿಧ ತಂಡಗಳು) ಮತ್ತು ಐಸಿಸಿ ತಂಡಗಳ ಪರವೂ ಕೂಡ ಬ್ಯಾಟ್ ಬೀಸುವ ಮೂಲಕ ಒಟ್ಟೂ 24,208 ರನ್ ಬಾರಿಸಿದ್ದಾರೆ. ದ್ರಾವಿಡ್ ಅವರಂತೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ ಯಾವುದೇ ಏಷ್ಯಾ ಇಲೆವೆನ್ ಅಥವಾ ಐಸಿಸಿ ಇಲೆವೆನ್ ತಂಡಗಳ ಪರ ಆಡಿಲ್ಲ.
ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ನಡೆದ ಏಷ್ಯಾಕಪ್ 2022ರಲ್ಲಿ ಅಫ್ಘಾನಿಸ್ತಾನ ವಿರುದ್ಧ 66 ಎಸೆತಗಳಲ್ಲಿ 122 ರನ್ ಬಾರಿಸಿ ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್ ಅವರ 71 ಅಂತಾರಾಷ್ಟ್ರೀಯ ಶತಕಗಳ ದಾಖಲೆ ಸರಿಗಟ್ಟಿದ್ದರು. ಈ ಮೂಲಕ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ದಾಖಲೆಯ 100 ಶತಕಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
ಭಾರತದ ಪರ ಅತಿಹೆಚ್ಚು ರನ್ (ಸಾರ್ವಕಾಲಿಕ):
- ಸಚಿನ್ ತೆಂಡೂಲ್ಕರ್ - 664 ಪಂದ್ಯಗಳಲ್ಲಿ 34,357 ರನ್
- ವಿರಾಟ್ ಕೊಹ್ಲಿ - 471 ಪಂದ್ಯಗಳಲ್ಲಿ 24,078 ರನ್
- ರಾಹುಲ್ ದ್ರಾವಿಡ್ - 404 ಪಂದ್ಯಗಳಲ್ಲಿ 24,064 ರನ್
- ಸೌರವ್ ಗಂಗೂಲಿ - 421 ಪಂದ್ಯಗಳಲ್ಲಿ 18,433 ರನ್
- ಎಂಎಸ್ ಧೋನಿ - 535 ಪಂದ್ಯಗಳಲ್ಲಿ 17,092
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಬಾರಿಸಿದ ಭಾರತದ ಬ್ಯಾಟರ್:
- ಸಚಿನ್ ತೆಂಡೂಲ್ಕರ್ - 34,357 (ಭಾರತ) - 664 ಪಂದ್ಯ
- ರಾಹುಲ್ ದ್ರಾವಿಡ್ - 24,208 (ಏಷ್ಯಾ/ಐಸಿಸಿ/ಭಾರತ) - 509 ಪಂದ್ಯ
- ವಿರಾಟ್ ಕೊಹ್ಲಿ - 471 ಪಂದ್ಯಗಳಲ್ಲಿ 24,078 ರನ್
ಇದನ್ನೂ ಓದಿ: ವಿರಾಟ್ ಕೈತಪ್ಪಿದ ಶ್ರೇಷ್ಠ ದಾಖಲೆ.. ಈವರೆಗೆ ಯಾವ ಭಾರತೀಯ ಬ್ಯಾಟರ್ಗಳ ಹೆಸರಿನಲ್ಲಿಲ್ಲ ಈ ರೆಕಾರ್ಡ್!