ನವದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಿಚ್ ಸ್ಥಿತಿ ನೋಡಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಡೊಮಿನಿಕಾ ಪಿಚ್‌ನಲ್ಲಿ ಕೊಹ್ಲಿ ಎಲ್ಲಾ ರೀತಿಯ ಕವರ್ ಡ್ರೈವ್‌ಗಳನ್ನು ಆಡಿರಲಿಲ್ಲ. ಕೊಹ್ಲಿ ಏಕೆ ಈ ರೀತಿ ಆಟವಾಡಲಿಲ್ಲ ಎಂದು ನೀವು ಯೋಚಿಸಬಹುದು.
ಕೊಹ್ಲಿಯ ಫ್ರಂಟ್-ಫೂಟ್ ಕವರ್ ಡ್ರೈವ್, ಬ್ಯಾಕ್-ಫುಟ್ ಕವರ್ ಡ್ರೈವ್, ಸ್ಟೆಪ್-ಔಟ್ ಮತ್ತು ಸ್ಟೆಪ್-ಅವೇ ಇನ್‌ಸೈಡ್-ಔಟ್ ಕವರ್ ಡ್ರೈವ್, ಹಾಗೆಯೇ ಕವರ್ ಫೀಲ್ಡರ್‌ನ ಎಡಕ್ಕೆ ಕವರ್ ಡ್ರೈವ್‌ಗಳು ಮತ್ತು ನಂತರ ಅವರ ಬಲಕ್ಕೆ ಕವರ್ ಡ್ರೈವ್‌ಗಳು, ಸ್ಟ್ರೈಟ್-ಬ್ಯಾಟ್, ಪಂಚ್ ಕವರ್ ಡ್ರೈವ್, ಬಾಟಮ್-ಹ್ಯಾಂಡ್ ಟಾಪ್ ಸ್ಪಿನ್ ಕವರ್ ಡ್ರೈವ್ಗಳ ಸೇರಿದಂತೆ ಈ ಎಲ್ಲಾ ಸ್ಟ್ರೋಕ್‌ಗಳು ಮೊದಲ ಟೆಸ್ಟ್‌ನಲ್ಲಿ ಯಾವುದೇ ಬೌಂಡರಿಗಳನ್ನು ಕೊಹ್ಲಿಗೆ ತಂದು ಕೊಡಲಿಲ್ಲ. ಆದರೆ ಕೊಹ್ಲಿ ಆಟ ಪಿಚ್‌ಗೆ ತಕ್ಕಂತೆ ಹೊಂದಿಕೊಳ್ಳುವ ಶೈಲಿಯನ್ನು ತೋರಿಸುವ ಬ್ಯಾಟಿಂಗ್‌ನ ಕಲೆ ಕಂಡುಬಂದಿತು.
ಕೊಹ್ಲಿ ತನ್ನ 110ನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವ ಮೊದಲೇ ಔಟಾದರು. ನಿಧಾನ ಮತ್ತು ರೋಲಿಂಗ್ ಪಿಚ್‌ನಲ್ಲಿ ತಮ್ಮ 262 ನಿಮಿಷಗಳ ಬ್ಯಾಟಿಂಗ್‌ನಲ್ಲಿ ಸಣ್ಣದೊಂದು ಸಂದೇಶವನ್ನು ಬಿಟ್ಟರು.
-
#TeamIndia Batting Coach Vikram Rathour heaps praise on @imVkohli 👍#WIvIND pic.twitter.com/5H1K4J1J6F
— BCCI (@BCCI) July 16, 2023 " class="align-text-top noRightClick twitterSection" data="
">#TeamIndia Batting Coach Vikram Rathour heaps praise on @imVkohli 👍#WIvIND pic.twitter.com/5H1K4J1J6F
— BCCI (@BCCI) July 16, 2023#TeamIndia Batting Coach Vikram Rathour heaps praise on @imVkohli 👍#WIvIND pic.twitter.com/5H1K4J1J6F
— BCCI (@BCCI) July 16, 2023
ಕೊಹ್ಲಿ ಅವರು 182 ಎಸೆತಗಳಲ್ಲಿ ಕೇವಲ 5 ಬೌಂಡರಿಗಳನ್ನು ಹೊಡೆದಿದ್ದಾರೆ. ಅದರಲ್ಲಿ ಅವರ ಮೊದಲ ಬೌಂಡರಿ ಅವರ ಇನ್ನಿಂಗ್ಸ್‌ನ 81 ನೇ ಎಸೆತದಲ್ಲಿ ಬಂದಿದ್ದು ಅಚ್ಚರಿ ಮೂಡಿಸಿತ್ತು. ಮೊದಲ ದಿನ ಅವರ ಖಾತೆಯಲ್ಲಿ ಕೇವಲ ಒಂದು ಬೌಂಡರಿ ಇತ್ತು. ಎರಡನೇ ದಿನ ಅವರು 4 ಬೌಂಡರಿಗಳನ್ನು ಬಾರಿಸಿದರು. ಹೆಚ್ಚಿನ ಬೌಂಡರಿಗಳನ್ನು ಲೆಗ್ ಸೈಡ್‌ನಲ್ಲಿ ಬಾರಿಸಿದ್ದರು. ವಿರಾಟ್ ತಮ್ಮ ಮೊದಲ ಬೌಂಡರಿ ಬಾರಿಸಲು 81 ಎಸೆತಗಳನ್ನು ತೆಗೆದುಕೊಂಡರು. ಎರಡನೇ ಬಾರಿಗೆ 43 ಎಸೆತಗಳು, ಮೂರನೇ ಬಾರಿಗೆ 36 ಎಸೆತಗಳನ್ನು ತೆಗೆದುಕೊಂಡಿದ್ದರು. ಬಳಿಕ ಅವರು 50 ರನ್ ದಾಟಿದರು. ಆಗಲೂ ಅವರು ತಮ್ಮ ಆಟದಲ್ಲಿ ವೇಗ ತೋರಿಸದೇ ನಿಧಾನಗತಿಯಲ್ಲಿ ಮುಂದುವರಿದರು.
ಸಚಿನ್ ಕೂಡ ಇಂತಹ ಉಪಕ್ರಮವನ್ನು ತೆಗೆದುಕೊಳ್ಳುತ್ತಿದ್ದರು. ಇತ್ತೀಚಿನ ತಿಂಗಳುಗಳು ಮತ್ತು ವರ್ಷಗಳ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ದೀರ್ಘ ಇನ್ನಿಂಗ್ಸ್‌ಗಳನ್ನು ಆಡಿಲ್ಲ. ಕೇಪ್ ಟೌನ್‌ನಲ್ಲಿ 79 ಮತ್ತು ಅಹಮದಾಬಾದ್‌ನಲ್ಲಿ 186 ರನ್ ಹೊರತುಪಡಿಸಿದ್ರೆ ಅವರು ಕೆಲವು ಸುದೀರ್ಘ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ಈ ಇನ್ನಿಂಗ್ಸ್ ಮೂಲಕ ಅವರು ತಮ್ಮ ಬ್ಯಾಟಿಂಗ್ ಅನ್ನು ಕಾಯ್ದುಕೊಳ್ಳಲು ನೆಚ್ಚಿನ ಹೊಡೆತವನ್ನು ಹೊಡೆಯುವುದನ್ನು ಸಹ ತ್ಯಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಅವರನ್ನು ಸಚಿನ್ ತೆಂಡೂಲ್ಕರ್ ಎಂದು ಕರೆಯಲಾಗುತ್ತಿದೆ. ಸಚಿನ್ ಕೂಡ ಅನೇಕ ಸಂದರ್ಭಗಳಲ್ಲಿ ಪಿಚ್ ಮತ್ತು ಬೌಲಿಂಗ್‌ಗೆ ಅನುಗುಣವಾಗಿ ತಮ್ಮ ಬ್ಯಾಟಿಂಗ್ ಅನ್ನು ಅಳವಡಿಸಿಕೊಳ್ಳುತ್ತಿದ್ದರು. ಅವರು ತಮ್ಮ ಶಾಟ್ ಆಯ್ಕೆಯನ್ನು ಸಹ ಬಹಳ ಚಿಂತನಶೀಲವಾಗಿ ಮಾಡುತ್ತಿದ್ದರು.
ಈಗ ಕೊಹ್ಲಿ ಅಗತ್ಯಕ್ಕೆ ತಕ್ಕಂತೆ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಿಧಾನವಾಗಿ ಸ್ಕೋರ್ ಮಾಡುವುದು ಮತ್ತು ಪಿಚ್‌ನಲ್ಲಿ ಉಳಿಯುವುದು ಸಮಯದ ಅಗತ್ಯವಾಗಿತ್ತು. ಈ ವರ್ಷ ಕೊಹ್ಲಿಯ ಬ್ಯಾಟಿಂಗ್ ಸರಾಸರಿ 48.44 ಆಗಿದ್ದರೆ, 2020-22ರ ಅವಧಿಯಲ್ಲಿ ಇದು ಕೇವಲ 26.20 ಆಗಿತ್ತು.
ಓದಿ: ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿ ವಿಜೇತ ಕಾರ್ಲೋಸ್ ಅಲ್ಕರಾಜ್‌ಗೆ ಸಚಿನ್ ತೆಂಡೂಲ್ಕರ್ ಸೇರಿ ಕ್ರೀಡಾಲೋಕದ ಅಭಿನಂದನೆ