ETV Bharat / sports

ವಿರಾಟ್​ "ಲೆಗ್​​ ಡೇ" ಫ್ಯಾನ್ಸ್​​ ಫಿದಾ.. ಎಂಟು ವರ್ಷಗಳ ಪರಿಶ್ರಮದ ವ್ಯಾಯಾಮದ ಬಗ್ಗೆ ಹಂಚಿಕೊಂಡ ಕಿಂಗ್ ಕೊಹ್ಲಿ - ಲೆಗ್ ಪ್ರೆಸ್ ವ್ಯಾಯಾಮ

ಎಂಟು ವರ್ಷಗಳಿಂದ ಮಾಡುತ್ತ ಬರುತ್ತಿರುವ ಲೆಗ್ ಪ್ರೆಸ್ ವ್ಯಾಯಾಮದ ಫೋಟೋವನ್ನು ಹಂಚಿಕೊಂಡಿದ್ದಾರೆ ವಿರಾಟ್ ಕೊಹ್ಲಿ.

Virat Kohli 8 years of determined workout

author img

By

Published : Jul 9, 2023, 6:07 PM IST

ಕ್ರಿಡಾರಂಗದಲ್ಲಿ ಫಿಟ್​ ನೆಸ್​ ವಿಚಾರ ಬಂದಾಗ ಹೆಚ್ಚು ದೈಹಿಕವಾಗಿ ಸದೃಢವಾಗಿರುವ ಕ್ರೀಡಾಪಟುಗಳಲ್ಲಿ ಒಬ್ಬರೆಂದರೆ ಅದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ. ಅವರು ತಮ್ಮ ಅಸಾಧಾರಣ ಫಿಟ್​ನೆಸ್​ಗೆ ಹೆಸರಾಗಿದ್ದಾರೆ. ಅವರ ಬಾಯಿ ಚಪಲವನ್ನು ಬಿಟ್ಟು ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡಿದ್ದು, ಅವರು ಗಾಯದ ಕಾರಣಕ್ಕೆ ತಂಡದಿಂದ ಹೊರಗುಳಿದದ್ದು ಉದಾಹರಣೆಯೇ ಇಲ್ಲ. ಕೇವಲ ಬಿಸಿಸಿಐ ಅವರಿಗೆ ವಿಶ್ರಾಂತಿಗಾಗಿ ಕೆಲ ಸಿರೀಸ್​ಗಳನ್ನು ಆಡಿಸದಿರಬಹುದು ಅಷ್ಟೇ.

ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಮ್ಮ ಬಲಿಷ್ಠ ಕಾಲುಗಳ ಬಗ್ಗೆ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಲೆಗ್ ಪ್ರೆಸ್ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅವರ ಮಂಡಿರಜ್ಜು ಸ್ನಾಯುಗಳನ್ನು ಬಲಪಡಿಸಲು ತರಬೇತುದಾರರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಲೆಗ್ ವರ್ಕೌಟ್‌ಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ಕೊಹ್ಲಿ ಒತ್ತಿ ಹೇಳಿದ್ದಾರೆ.

ಎಂಟು ವರ್ಷಗಳಿಂದ ಜಿಮ್ ದಿನಚರಿಗೆ ಬದ್ಧನಾಗಿರುತ್ತೇನೆ, ಇದು ಅವರ ಒಟ್ಟಾರೆ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರಮುಖ ಗುಟ್ಟು ಎಂದು ಹಂಚಿಕೊಂಡಿದ್ದಾರೆ. ಅವರು ಇನ್​ಸ್ಟಾ ಮತ್ತು ಟ್ವಿಟರ್​ನಲ್ಲಿ ಫೊಟೋ ಹಂಚಿಕೊಂಡು "ಪ್ರತಿದಿನವೂ ಲೆಗ್ ಡೇ ಆಗಿರಬೇಕು, ಸತತ 8 ವರ್ಷಗಳಿಂದ, ಮುಂದುವರೆಯುತ್ತದೆ" ಎಂದು ಪೋಸ್ಟ್​​ಗೆ ಶೀರ್ಷಿಕೆ ನೀಡಿದ್ದಾರೆ.

34 ವರ್ಷದ ಕಿಂಗ್​​ ಕೊಹ್ಲಿ ಫೀಲ್ಡ್​ನಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿರುವ ಆಟಗಾರ. ಅಷ್ಟು ಚುರುಕಾಗಿರಲು ಅವರ ದಿನಚರಿಯೇ ಕಾರಣ. ಭಾರತ ತಂಡದಲ್ಲಿ ಅತೀ ವೇಗವಾಗಿ ರನ್​ ಮಾಡುವ ಬ್ಯಾಟರ್​ ಇದ್ದರೆ ಅದು ವಿರಾಟ್​ ಕೊಹ್ಲಿ. ಎರಡು ಕ್ರೀಸ್​ನ ನಡುವೆ ಚುರುಕಾಗಿ ರನ್​ ತೆಗೆದುಕೊಳ್ಳುತ್ತಾರೆ. ಅವರ ಓಟ ಯುವ ಬ್ಯಾಟರ್​​ಗಳನ್ನು ನಾಚಿಸುವಂತಿರುತ್ತದೆ. ಮೈದಾನದಲ್ಲಿ ಫೀಲ್ಡಿಂಗ್​, ಕ್ಯಾಚ್​ ಮುಂತಾದವುಗಳಲ್ಲಿ ವಿರಾಟ್​ ಅವರಷ್ಟು ಕ್ವಿಕ್​ ಯಾರೂ ಕಾಣಸಿಗುವುದಿಲ್ಲ.

ವೆಸ್ಟ್​​ ಇಂಡೀಸ್​ ಪ್ರವಾಸದಲ್ಲಿ ಕಿಂಗ್​ ಕೊಹ್ಲಿ: ಕೆರಿಬಿಯನ್ನರ ವಿರುದ್ಧ ನಡೆಯಲಿರುವ ಎರಡು ಟೆಸ್ಟ್​ ಮತ್ತು ಮೂರು ಏಕದಿನ ಪಂದ್ಯಗಳನ್ನು ವಿರಾಟ್​ ಕಣಕ್ಕಿಳಿಯಲಿದ್ದು ಭರ್ಜರಿ ಸಿದ್ಧತೆಯಲ್ಲಿದ್ದಾರೆ. ಭಾರತ ತಂಡ ಈಗಾಗಲೇ ವೆಸ್ಟ್​ ಇಂಡೀಸ್​ನಲ್ಲಿದ್ದು, ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಜುಲೈ ಮತ್ತು ಅಗಸ್ಟ್​ನಲ್ಲಿ ಪಂದ್ಯಗಳು ನಡೆಯಲಿದೆ. ಇದೇ 12 ರಿಂದ ಮೊದಲ ಟೆಸ್ಟ್​​ ಪ್ರಾರಂಭವಾಗಲಿದೆ.

ಕೆರಿಬಿಯನ್​ ನಾಡಿನಲ್ಲಿ ವಿರಾಟ್​ ಉತ್ತಮ ಪ್ರದರ್ಶನವನ್ನು ಈವರೆಗೆ ಅಂಕಿ ಅಂಶದ ಪ್ರಕಾರ ನೀಡಿಲ್ಲ. ಒಂಬತ್ತು ಪಂದ್ಯಗಳಲ್ಲಿ ಕೇವಲ 35.62 ಸರಾಸರಿಯೊಂದಿಗೆ 463 ರನ್ ಗಳಿಸಿದೆ. ತಮ್ಮ ವೃತ್ತಿ ಜೀವನದಲ್ಲಿ ಕೊಹ್ಲಿ 109 ಟೆಸ್ಟ್​​ ಪಂದ್ಯಗಳನ್ನು ಆಡಿದ್ದು 48.73 ಸರಾಸರಿಯಲ್ಲಿ 28 ಶತಕ ಸೇರಿದಂತೆ 8,479 ರನ್ ಗಳಿಸಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ 5 ಟಿ20 ಪಂದ್ಯಕ್ಕೆ ವಿರಾಟ್​ ಮತ್ತು ರೋಹಿತ್​ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿಲ್ಲ. ಈ ಬಗ್ಗೆ ಆಯ್ಕೆ ಸಮಿತಿ ಯಾವುದೇ ಕಾರಣಗಳನ್ನು ನೀಡಿಲ್ಲ. ಹಿರಿಯ ಆಟಗಾರರನ್ನು ಬಿಟ್ಟು ಇಂಡಿಯನ್​ ಪ್ರೀಮಿಯರ್​​ ಲೀಗ್​ ಮತ್ತು ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಮಣೆಹಾಕಲಾಗಿದೆ.

ಇದನ್ನೂ ಓದಿ: Maharaja Trophy: ಮಹಾರಾಜ ಟ್ರೋಫಿಗೆ ಸೇರಿದ ಶಿವಮೊಗ್ಗ, ಮಂಗಳೂರು ತಂಡ.. ಆಗಸ್ಟ್​ನಲ್ಲಿ ಎರಡನೇ ಆವೃತ್ತಿ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.