ವಿದ್ವಥ್ ಕಾವೇರಪ್ಪ, ವಾಸುಕಿ ಕೌಶಿಕ್ರ ಬಿಗು ಬೌಲಿಂಗ್ ದಾಳಿ, ರವಿಕುಮಾರ್ ಸಮರ್ಥ್ರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ತಂಡವನ್ನು ಸೋಲಿಸಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿತು. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪಂಜಾಬ್ ನೀಡಿದ 235 ರನ್ಗಳ ಸಾಧಾರಣ ಮೊತ್ತವನ್ನು ಕರ್ನಾಟಕ 49.2 ಓವರ್ಗಳಲ್ಲಿ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಖಾತೆ ತೆರೆಯುವ ಮುನ್ನವೇ ಆರಂಭಿಕ ಪ್ರಭಸಿಮ್ರನ್ ವಿಕೆಟ್ ಕಳೆದುಕೊಂಡಿತು. ಇದರ ಬೆನಲ್ಲೇ ಅನ್ಮೋಲ್ ಪ್ರೀತ್ ಸಿಂಗ್(4), ನಾಯಕ ಮನ್ದೀಪ್ ಸಿಂಗ್(6) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ತಂಡದ ರನ್ ಗಳಿಸುವ ಹೊಣೆ ಹೊತ್ತ ಇನ್ನೊಬ್ಬ ಆರಂಭಿಕ ಅಭಿಷೇಕ್ ಶರ್ಮಾ ಭರ್ಜರಿ ಶತಕ ಸಾಧನೆ ಮಾಡಿದರು. 123 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಮೇತವಾಗಿ 109 ರನ್ಗಳ ತಾಳ್ಮೆಯ ಇನಿಂಗ್ಸ್ ಕಟ್ಟಿದರು. ಅಭಿಷೇಕ್ಗೆ ಅನ್ಮೋಲ್ಮಲ್ಹೋತ್ರಾ 29, ಸನ್ವೀರ್ ಸಿಂಗ್ 39, ರಮಣ್ದೀಪ್ ಸಿಂಗ್ 17 ಸಾಥ್ ನೀಡಿದರು. ಬಳಿಕ ಕುಸಿತ ಕಂಡು ತಂಡ 50 ಓವರ್ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 235 ರನ್ ಮಾಡಿತು.
-
A look at the fixtures of the semi-finals of the @mastercardindia #VijayHazareTrophy 2022 👌👌 pic.twitter.com/glPJEjUBYz
— BCCI Domestic (@BCCIdomestic) November 28, 2022 " class="align-text-top noRightClick twitterSection" data="
">A look at the fixtures of the semi-finals of the @mastercardindia #VijayHazareTrophy 2022 👌👌 pic.twitter.com/glPJEjUBYz
— BCCI Domestic (@BCCIdomestic) November 28, 2022A look at the fixtures of the semi-finals of the @mastercardindia #VijayHazareTrophy 2022 👌👌 pic.twitter.com/glPJEjUBYz
— BCCI Domestic (@BCCIdomestic) November 28, 2022
ಕರ್ನಾಟಕ ಬಿಗಿ ಬೌಲಿಂಗ್ ದಾಳಿ: ಪಂದ್ಯದಲ್ಲಿ ಕರ್ನಾಟಕ ಬೌಲರ್ಗಳು ಬಿಗಿ ಬೌಲಿಂಗ್ ದಾಳಿ ಮಾಡಿದರು. ವಿದ್ವಥ್ ಕಾವೇರಪ್ಪ ಪ್ರಮುಖ 4 ವಿಕೆಟ್ ಉರುಳಿಸಿದರೆ, ವಾಸುಕಿ ಕೌಶಿಕ್ 3 ಮೇಡನ್ ಸಮೇತ 10 ಓವರ್ಗಳಲ್ಲಿ ಕೇವಲ 25 ರನ್ ಮಾತ್ರ ಬಿಟ್ಟುಕೊಟ್ಟು 1, ರೋನಿತ್ ಮೋರೆ 2 ವಿಕೆಟ್ ಪಡೆದರು.
ತೆವಳುತ್ತ ಗೆದ್ದ ರಾಜ್ಯ ತಂಡ: 235 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಕೂಡ ರನ್ ಗಳಿಸಲು ಪರದಾಡಿತು. ಆರಂಭಿಕ ರವಿಕುಮಾರ್ ಸಮರ್ಥ್ 106 ಎಸೆತಗಳಲ್ಲಿ 71 ರನ್ ಗಳಿಸಿದರೆ, ನಾಯಕ ಮಯಾಂಕ್ ಅಗರ್ವಾಲ್ ಒಂದೇ ರನ್ಗೆ ಕೈಕೊಟ್ಟರು. ನಿಕಿನ್ ಜೋಸ್ 29, ಮನೀಶ್ ಪಾಂಡೆ 35, ಶ್ರೇಯಸ್ ಗೋಪಾಲ್ 42, ಮನೋಜ್ ಬಾಂಗ್ಡೆ 25 ರನ್ ಗಳಿಸಿದರು. ಕೊನೆಯಲ್ಲಿ ಕೃಷ್ಣಪ್ಪ ಗೌತಮ್ ಸಿಕ್ಸರ್ ಸಿಡಿಸಿ ತಂಡ ಗೆಲ್ಲುವಂತೆ ನೋಡಿಕೊಂಡರು. ಪಂಜಾಬ್ ಪರವಾಗಿ ಸನ್ವೀರ್ ಸಿಂಗ್ 2 ವಿಕೆಟ್ ಪಡೆದರು.
ಸೆಮಿಫೈನಲ್ ಲೆಕ್ಕಾಚಾರ: ತಮಿಳುನಾಡು ವಿರುದ್ಧ ಗೆದ್ದ ಸೌರಾಷ್ಟ್ರ ತಂಡ ಸೆಮಿಫೈನಲ್ನಲ್ಲಿ ಕರ್ನಾಟಕದ ವಿರುದ್ಧ ಸೆಣಸಾಡಲಿದೆ. ಜಮ್ಮು ಕಾಶ್ಮೀರ ವಿರುದ್ಧ ಗೆದ್ದ ಅಸ್ಸೋಂ ಮತ್ತು ಉತ್ತರಪ್ರದೇಶವನ್ನು ಮಣಿಸಿದ ಮಹಾರಾಷ್ಟ್ರ ಇನ್ನೊಂದು ಸೆಮಿಫೈನಲ್ನಲ್ಲಿ ಎದುರಾಗಲಿವೆ.
ಓದಿ: ಕ್ರಿಕೆಟ್ ಸರಣಿ ಮಧ್ಯೆಯೇ ಮೂವರು ಶ್ರೀಲಂಕಾ ಆಟಗಾರರ ವಿವಾಹ ಸಂಭ್ರಮ