ದುಬೈ : ಈ ಬಾರಿಯ ಐಪಿಎಲ್ ಎಲ್ಲಾ ಆವೃತ್ತಿಗಿಂತ ಭಿನ್ನವಾಗಿದೆ. ಯಾಕೆಂದರೆ, ಮೊದಲಾರ್ಧ ಭಾರತದಲ್ಲಿ ದ್ವಿತೀಯಾರ್ಧ ಯುಎಇಯಲ್ಲಿ ನಡೆಯುತ್ತಿದೆ. ಆದರೆ, ಮೊದಲಾರ್ಧದ ವೇಳೆ ಕೆಲವು ಆಟಗಾರರು ಮತ್ತು ಸಿಬ್ಬಂದಿಗೆ ಕೋವಿಡ್ ಕಾಣಿಸಿದ ಹಿನ್ನೆಲೆ ಅರ್ಧದಲ್ಲೇ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು.
ಮೇ 2ನೇ ದಿನಾಂಕದಂದು ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯಿಂದ ಸ್ಕ್ಯಾನಿಂಗ್ಗೆ ತೆರಳಿದ್ದ ವೇಳೆ ಕೋವಿಡ್ ಸೋಂಕು ಹರಡಿತ್ತು. ನಂತರ ಕೆಕೆಆರ್ ಮತ್ತು ಹೈದರಾಬಾದ್ ತಂಡದ ಕೆಲವು ಆಟಗಾರರಿಗೆ ಸೋಂಕು ದೃಢಪಡುತ್ತಿದ್ದಂತೆ ಐಪಿಎಲ್ ಅನ್ನು ಅನಿರ್ಧಾಷ್ಠವಧಿಗೆ ಮುಂದೂಡಲಾಗಿತ್ತು.
ಐಪಿಎಲ್ನಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಕ್ರಿಕೆಟ್ ತಜ್ಞರಿಂದ ಹಾಗೂ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ವರುಣ್, ಕೋವಿಡ್ ಪಾಸಿಟಿವ್ ಕಾಣಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿನಗೆ ಕೋವಿಡ್ ಬರುವ ಬದಲು ಸಾಯಬೇಕಿತ್ತು ಎಂದು ತಮ್ಮನ್ನು ನಿಂದಿಸಿದ್ದರೆಂದು ಕೆಕೆಆರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
-
In a world where you can be anything, be kind 💜
— KolkataKnightRiders (@KKRiders) October 10, 2021 " class="align-text-top noRightClick twitterSection" data="
This #WorldMentalHeathDay, let's pledge to refrain from social media trolling as you never know the damage it may cause.#KKRFilms x Payments on @amazonIN #PayAmazonSe #KKR #IPL2021 pic.twitter.com/EQO3ZvTOn5
">In a world where you can be anything, be kind 💜
— KolkataKnightRiders (@KKRiders) October 10, 2021
This #WorldMentalHeathDay, let's pledge to refrain from social media trolling as you never know the damage it may cause.#KKRFilms x Payments on @amazonIN #PayAmazonSe #KKR #IPL2021 pic.twitter.com/EQO3ZvTOn5In a world where you can be anything, be kind 💜
— KolkataKnightRiders (@KKRiders) October 10, 2021
This #WorldMentalHeathDay, let's pledge to refrain from social media trolling as you never know the damage it may cause.#KKRFilms x Payments on @amazonIN #PayAmazonSe #KKR #IPL2021 pic.twitter.com/EQO3ZvTOn5
ಆ ಸಂದರ್ಭದಲ್ಲಿ ಡಾಕ್ಟರ್ ಶ್ರೀಕಾಂತ್ ನನಗೆ ಕರೆ ಮಾಡಿ ಹೇಳಿದ ಮಾತುಗಳು ನನಗೆ ಇನ್ನೂ ನೆನಪಿವೆ. ಅವರು ವರುಣ್ ದುರದೃಷ್ಟವಶಾತ್, ನಿಮಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಹೇಳಿದರು. ಆ ವೇಳೆ ಆ ಮಾತು ಎಲ್ಲವನ್ನೂ ಛಿದ್ರಗೊಳಿಸಿತು. ಅದು ತುಂಬಾ ದೊಡ್ಡ ಹೊಡೆತವಾಗುತ್ತದೆ ಎಂದು ನನಗೆ ನಿಜವಾಗಿಯೂ ತಿಳಿದಿರಲಿಲ್ಲ.
ಇನ್‌ಸ್ಟಾಗ್ರಾಮ್ ಮತ್ತು ಇಮೇಲ್‌ಗಳಲ್ಲಿ 'ನಿಮಗೆ ಕೋವಿಡ್ ಬರುವ ಬದಲು ನೀವು ಸಾಯಬೇಕಿತ್ತು' ಎಂದು ಸಾಕಷ್ಟು ಜನರು ಸಂದೇಶ ಕಳುಹಿಸಿದ್ದರು ಎಂದು ಮಾನಸಿಕ ಆರೋಗ್ಯ ದಿನವಾದ ಇಂದು ಕೆಕೆಆರ್ ಹಂಚಿಕೊಂಡ ವಿಡಿಯೋದಲ್ಲಿ ಚಕ್ರವರ್ತಿ ತಿಳಿಸಿದ್ದಾರೆ.
ಜನರು ಈ ರೀತಿ ವರುಣ್ಗೆ ಸಂದೇಶ ಕಳುಹಿಸಿದ್ದರ ಕುರಿತು ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಬೇಸರ ವ್ಯಕ್ತಪಡಿಸಿದ್ದಾರೆ. " ವರುಣ್ ಅಂತಹ ವ್ಯಕ್ತಿಯನ್ನ ಯಾರಾದರೂ ದೂಷಿಸುತ್ತಾರೆ ಎಂದು ನನಗೆ ಇದು ಹಾಸ್ಯಾಸ್ಪದ ಎಂದು ಭಾವಿಸುತ್ತೇನೆ.
ಯಾಕೆಂದರೆ, ಆತ ಜೀವನದಲ್ಲಿ ಎಲ್ಲ ವಿಷಯಗಳನ್ನು ತೀವ್ರವಾಗಿ ಮತ್ತು ಗಂಭೀರ ಪರಿಗಣಿಸುತ್ತಾನೆ. ಆತನಿಗೆ ಸ್ವಲ್ಪ ಸಹಾನುಭೂತಿ ತೋರಬೇಕಿತ್ತು ಎಂದು ನಾನು ಭಾವಿಸುತ್ತೇನೆ. ಅವರನ್ನು ಆ ಸಂದರ್ಭದಲ್ಲಿ ತಪ್ಪಾಗಿ ಭಾವಿಸಿ ನಿಂದಿಸಲಾಗಿತ್ತು ಎಂದು ನಾಯರ್ ಹೇಳಿದ್ದಾರೆ.
ಮಾಜಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಮಾತನಾಡಿ, ಅಂತಹ ಕಠಿಣ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವುದು, ನಿಂದಿಸುವುದು ಆಟಗಾರರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸಾಮಾಜಿಕ ಮಾಧ್ಯಮ ಒಂದು ಒಳ್ಳೆಯ ಚಿಂತನೆಯ ಸ್ಥಳವಾಗಿರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ:ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ ₹12 ಕೋಟಿ.. ಸೆಮಿಫೈನಲ್ಸ್ ತಂಡಗಳಿಗೂ ಬಂಪರ್..