ವೇಗ, ಆವೇಗ, ನಿಖರತೆ.. ಇದು ಭಾರತದ ಯುವ ವೇಗಿ ಉಮ್ರಾನ್ ಮಲಿಕ್ ಅವರ ಬೌಲಿಂಗ್‌ನಲ್ಲಿ ಕಂಡುಬಂದ ಸಂಗತಿಗಳು. ಇದಕ್ಕೆ ಇಂದಿನ ಭಾರತ-ಬಾಂಗ್ಲಾದೇಶ ನಡುವಣ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಸಾಕ್ಷಿಯಾಯಿತು. 151 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಎಸೆತ ಎದುರಾಳಿಯನ್ನು ತರಗಲೆಯಂತೆ ಧೂಳೀಪಟ ಮಾಡಿದರು. ಈ ದೃಶ್ಯ ನೋಡಿ.
-
THAT'S RAW PACE FOR YOU. FUCKING 151 KMPH. Umran Malik you beauty. ❤️ pic.twitter.com/TW0X4hdagf
— ” (@Sobuujj) December 7, 2022 " class="align-text-top noRightClick twitterSection" data="
">THAT'S RAW PACE FOR YOU. FUCKING 151 KMPH. Umran Malik you beauty. ❤️ pic.twitter.com/TW0X4hdagf
— ” (@Sobuujj) December 7, 2022THAT'S RAW PACE FOR YOU. FUCKING 151 KMPH. Umran Malik you beauty. ❤️ pic.twitter.com/TW0X4hdagf
— ” (@Sobuujj) December 7, 2022
ಉಮ್ರಾನ್ ಅವರ ಬಿರುಗಾಳಿಯ ಬೌಲಿಂಗ್‌ಗೆ ನಜ್ಮುಲ್ ಹೊಸೈನ್ ಶಾಂಟೊ ವಿಕೆಟ್ ಉರುಳಿತು. ಇದು ಉಮ್ರಾನ್ ಎರಡನೇ ಓವರ್ನ ಮೊದಲ ಎಸೆತವಾಗಿತ್ತು. ಕ್ರೀಸ್ ಕಚ್ಚಿ ಆಡಲು ಮುಂದಾಗಿದ್ದ ಮತ್ತು ಉತ್ತಮ ಲಯದಲ್ಲಿರುವ ನಜ್ಮುಲ್ ಅವರನ್ನು ಭಾರತದ ವೇಗಿ ಕರಾರುವಾಕ್ ದಾಳಿ ಪೆವಿಲಿಯನ್ ಸೇರಿಸಿದರು.
ಪ್ರತಿಭಾವಂತ ವೇಗಿ ಉಮ್ರಾನ್ ಮಲಿಕ್ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಪ್ರಮುಖ ಅಸ್ರ್ತವಾಗಿದ್ದು, ಭುಜದ ಗಾಯದಿಂದ ಹೊರಗುಳಿದ ಮೊಹಮ್ಮದ್ ಶಮಿಗೆ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂದಿನ ಪಂದ್ಯದಲ್ಲಿ ಮತ್ತೊಬ್ಬ ಯುವ ಬೌಲರ್ ಕುಲದೀಪ್ ಸೇನ್ ಅವರನ್ನು ಕೈಬಿಡಲಾಗಿದೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ಮೊಹಮ್ಮದ್ ಶಮಿ ಔಟ್, ಉಮ್ರಾನ್ ಮಲಿಕ್ಗೆ ಅವಕಾಶ