ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ಆಟಗಾರರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಲಂಡನ್ನ 10 ಡೌನಿಂಗ್ ಸ್ಟ್ರೀಟ್ನಲ್ಲಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಕೆಲಕಾಲ ಪ್ರಧಾನಿ ಹಾಗೂ ಆಟಗಾರರು ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಎಡಗೈ ಆಲ್ರೌಂಡರ್ ಸ್ಯಾಮ್ ಕರನ್ ಬೌಲಿಂಗ್ ಎದುರಿಸಿದ ಸುನಕ್ ಉತ್ತಮ ಬ್ಯಾಟಿಂಗ್ ಕೌಶಲ್ಯ ತೋರಿದರು. ವೇಗಿ ಕ್ರಿಸ್ ಜೋರ್ಡನ್ ಕೂಡ ಬೌಲಿಂಗ್ ಮಾಡಿದ್ದು, ಈ ವೇಳೆ ಸುನಕ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ದೇಶದ ಪ್ರಧಾನಿಯನ್ನು ಔಟ್ ಮಾಡಿದ ಜೋರ್ಡನ್ ಸಂಭ್ರಮಪಟ್ಟರು.
-
Never in doubt ☝@CJordan nicks off the PM with a beauty after a working over from @CurranSM's left arm spin 🔥
— Surrey Cricket (@surreycricket) March 23, 2023 " class="align-text-top noRightClick twitterSection" data="
Big send off as well 👀pic.twitter.com/JGTEwQiLx5
">Never in doubt ☝@CJordan nicks off the PM with a beauty after a working over from @CurranSM's left arm spin 🔥
— Surrey Cricket (@surreycricket) March 23, 2023
Big send off as well 👀pic.twitter.com/JGTEwQiLx5Never in doubt ☝@CJordan nicks off the PM with a beauty after a working over from @CurranSM's left arm spin 🔥
— Surrey Cricket (@surreycricket) March 23, 2023
Big send off as well 👀pic.twitter.com/JGTEwQiLx5
ಜೋರ್ಡನ್ ಖುಷಿಯಲ್ಲಿ ಜಿಗಿದಾಡಿದರೆ, ಪ್ರಧಾನಿ ಸುನಕ್ ಕೂಡ ನಕ್ಕು ನಲಿದರು. ಪ್ರಧಾನಿ ಹಾಗೂ ಕ್ರಿಕೆಟಿಗರ ಕೆಲಸಮಯದ ಮೋಜಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವೇಳೆ ಇಂಗ್ಲೆಂಡ್ ಟಿ20 ವಿಜೇತ ನಾಯಕ ಜೋಸ್ ಬಟ್ಲರ್, ಪಂದ್ಯಾವಳಿಯಲ್ಲಿ ಭಾಗಿಯಾದ ಆಟಗಾರರಾದ ಸ್ಯಾಮ್ ಕರನ್, ವೇಗಿ ಕ್ರಿಸ್ ಜೋರ್ಡನ್ ಜೊತೆಗೆ ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಫಿಲ್ ಸಾಲ್ಟ್, ಕ್ರಿಸ್ ವೋಕ್ಸ್, ರಿಚರ್ಡ್ ಗ್ಲೀಸನ್ ಮತ್ತು ಟೈಮಲ್ ಮಿಲ್ಸ್ ಇದ್ದರು.
ಪ್ರಧಾನಿ ಭೇಟಿ ಬಗ್ಗೆ ಜೋಶ್ ಬಟ್ಲರ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಟಿ20 ವಿಶ್ವಕಪ್ ಟ್ರೋಫಿಯನ್ನು ಕೆಲ ಸಹ ಆಟಗಾರರೊಂದಿಗೆ 10 ಡೌನಿಂಗ್ ಸ್ಟ್ರೀಟ್‌ಗೆ ತೆಗೆದುಕೊಂಡು ಹೋಗಿದ್ದು ಬಹಳ ವಿಶೇಷವಾಗಿತ್ತು!" ಎಂದು ಬಟ್ಲರ್ ಶೀರ್ಷಿಕೆ ನೀಡಿದ್ದಾರೆ. ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಪ್ರಧಾನಿ ರಿಷಿ ಸುನಕ್ ಜೊತೆ ಆಟವಾಡಿದ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಅಲ್ಲದೆ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ರಿಷಿ ಸುನಕ್, '10 ಡೌನಿಂಗ್ ಸ್ಟ್ರೀಟ್‌ನ ಉದ್ಯಾನದಲ್ಲಿ ಜೋಸ್ ಬಟ್ಲರ್ ಮತ್ತು ಇಂಗ್ಲೆಂಡ್ ತಂಡದೊಂದಿಗೆ ಕೆಲವು ಚೆಂಡುಗಳನ್ನು ಬಾರಿಸಿದ್ದು ನಿಜಕ್ಕೂ ರೋಮಾಂಚನವಾಗಿತ್ತು. ಕಳೆದ ಬೇಸಿಗೆಯಲ್ಲಿನ ಟಿ20 ವಿಶ್ವಕಪ್ ಗೆಲುವಿಗಾಗಿ ನಾನು ತಂಡವನ್ನು ಅಭಿನಂದಿಸಿದ್ದೇನೆ. ಜೊತೆಗೆ ace.programmeನ ಆಟಗಾರರ ಜೊತೆ ನಾವು ಮೈದಾನದಲ್ಲಿ ಆಡಿದ್ದೇವೆ. ಈ ಚಾರಿಟಿಯು ಹೆಚ್ಚಿನ ಕಪ್ಪು ಆಟಗಾರರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವತ್ತ ಕೆಲಸ ಮಾಡುತ್ತಿದೆ' ಎಂದಿದ್ದಾರೆ.
ಇದನ್ನೂ ಓದಿ: Ipl ಹೊಸ ನಿಯಮ: ಟಾಸ್ ಬಳಿಕವೂ ಆಟಗಾರರ ಬದಲಾವಣೆಗೆ ಅವಕಾಶ
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ವೆಸ್ಟ್ ಇಂಡೀಸ್ ಬಳಿಕ ಎರಡನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡವಾಗಿ ಜೋಶ್ ಬಟ್ಲರ್ ಪಡೆ ಸಂಭ್ರಮಿಸಿತ್ತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಪಾಕ್ ತಂಡವನ್ನು ಇಂಗ್ಲೆಂಡ್ 5 ವಿಕೆಟ್‌ಗಳಿಂದ ಸೋಲಿಸಿತ್ತು. ಕರನ್ ಬೌಲಿಂಗ್ನಲ್ಲಿ ಮಿಂಚಿದರೆ, ಹಾಲಿ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅರ್ಧಶತಕ ಬಾರಿಸಿ ತಂಡವನ್ನು ಗೆಲ್ಲಿಸಿದ್ದರು.
- " class="align-text-top noRightClick twitterSection" data="
">
ಆದರೆ, ಕೆಲ ಆಟಗಾರರಿಗೆ ಗಾಯದ ಸಮಸ್ಯೆ ಮತ್ತು ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಪರದಾಡಿದ ಇಂಗ್ಲೆಂಡ್ ತಂಡ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ 3-0 ಅಂತರದಲ್ಲಿ ಟಿ20 ಸರಣಿ ಸೋತಿದೆ. ಸದ್ಯ ಮುಂಬರುವ ಟಿ20 ಚುಟುಕು ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಗಾಗಿ ಇಂಗ್ಲಿಷ್ ಆಟಗಾರರು ಭಾರತಕ್ಕೆ ಆಗಮಿಸಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಬುರ್ಖಾ ಧರಿಸಿರುವ ಫೋಟೋ ಹಂಚಿಕೊಂಡ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ