ನವದೆಹಲಿ: ದೇಶದ ಪ್ರಮುಖ ವ್ಯಕ್ತಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಅಧಿಕೃತವಾಗಿ ಬಳಕೆ ಮಾಡುವ ಟ್ವಿಟರ್ ಖಾತೆಯ ಹೆಸರಿನ ಮುಂದೆ ಬ್ಲೂ ಬ್ಯಾಡ್ಜ್(blue tick) ಅಥವಾ ಟಿಕ್ ಮಾರ್ಕ್ ಇರುತ್ತದೆ.
ಈ ಮಾರ್ಕ್ ಇದ್ದರೆ ಅದು ಅಧಿಕೃತ ಟ್ವಟಿರ್ ಖಾತೆ ಎಂದರ್ಥ. ಆದರೆ, ಟ್ವಿಟರ್ ಸಂಸ್ಥೆ ಇದೀಗ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ವೈಯಕ್ತಿಕ ಟ್ವಿಟರ್ ಖಾತೆಯ ಹೆಸರಿನ ಮುಂದೆ ಇದ್ದ ಬ್ಲೂ ಟಿಕ್ ಮಾರ್ಕ್ ತೆಗೆದು ಹಾಕಿದೆ. ಇದಾದ ಇದರ ಬೆನ್ನಲ್ಲೇ ಟ್ವಟರ್ ಇಂಡಿಯಾ ಕೆಲ ನಿಮಿಷಗಳ ನಂತರ ಮಾರ್ಕ್ ನೀಡಿದೆ.
ಕಳೆದ ಕೆಲ ತಿಂಗಳಿಂದ ಇನ್ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಮಹೇಂದ್ರ ಸಿಂಗ್ ಧೋನಿ ಟ್ಟಿಟರ್ನಲ್ಲಿ ಯಾವುದೇ ರೀತಿಯ ಮಾಹಿತಿ ಅಥವಾ ಪೋಟೋ ಹಂಚಿಕೊಂಡಿಲ್ಲ. ಕಳೆದ ಜನವರಿ ತಿಂಗಳಲ್ಲಿ ಅವರು ಕೊನೆಯದಾಗಿ ಟ್ವೀಟ್ ಮಾಡಿದ್ದರು. ಅವರಿಗೆ 8.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿರಿ: ಹೊಸ ಲುಕ್ನಲ್ಲಿ ಮಿಂಚಿದ ಧೋನಿ; ವಿಭಿನ್ನ ಕೇಶ ವಿನ್ಯಾಸಕ್ಕೆ ಮನಸೋತ ಫ್ಯಾನ್ಸ್
"ಬ್ಲೂ ಟಿಕ್" ಮಾರ್ಕ್ ತೆಗೆದು ಹಾಕುವುದು ಏಕೆ?
ಖಾತೆಯು ನಿಷ್ಕ್ರಿಯ ಅಥವಾ ಅಪೂರ್ಣವಾಗಿದ್ದರೆ ಇಲ್ಲವೇ ಖಾತೆಯ ಮಾಲೀಕರು ಟ್ವಿಟರ್ನಲ್ಲಿ ಸಕ್ರಿಯವಾಗಿಲ್ಲದಿದ್ದರೆ ಯಾವುದೇ ಸಂದರ್ಭದಲ್ಲಿ ಸೂಚನೆ ನೀಡದೇ ಟ್ವಿಟರ್ ಖಾತೆಯ ನೀಲಿ ಪರಿಶೀಲಿಸಿದ ಬ್ಯಾಡ್ಜ್ ತೆಗೆದುಹಾಕಬಹುದು ಎಂದು ಟ್ವಿಟರ್ ಇಂಡಿಯಾ ಹೇಳಿದೆ. ಈ ಹಿಂದೆ ಕೂಡ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಮಾರ್ಕ್ ತೆಗೆದು ಹಾಕಲಾಗಿತ್ತು.
ಆಗಸ್ಟ್ 15,2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಮಹೇಂದ್ರ ಸಿಂಗ್ ಧೋನಿ, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಾತ್ರ ಭಾಗಿಯಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವಿಭಿನ್ನ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಕೊಂಡಿದ್ದ ಮಾಹಿ ಕೆಲವೊಂದು ಫೋಟೋಗಳನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.