ನವದೆಹಲಿ: ಇಂದಿಗೆ 38 ವರ್ಷಗಳ ಹಿಂದೆ, 1983 ಜೂನ್ 25ರಂದು ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ಸೃಷ್ಟಿಸಿತ್ತು. ಮೊದಲೆರಡು ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲೇ ಮುಗ್ಗರಿಸಿದ್ದ ಭಾರತ ತಂಡ 2 ಬಾರಿ ಚಾಂಪಿಯನ್ ಆಗಿದ್ದ ದೈತ್ಯ ವಿಂಡೀಸರ ವಿರುದ್ಧ ಮೂರನೇ ವಿಶ್ವಕಪ್ ಫೈನಲ್ನಲ್ಲಿ 43 ರನ್ಳಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು.
ಕಪಿಲ್ ದೇವ್ ನಾಯಕತ್ವದಲ್ಲಿ ಮೂರನೇ ವಿಶ್ವಕಪ್ಗೆ ಭಾಗವಹಿಸಿದ್ದ ಭಾರತ ತಂಡ , ಈ ಹಿಂದಿನ 2 ವಿಶ್ವಕಪ್ನಲ್ಲಿ ಗೆದ್ದಿದ್ದು ಕೇವಲ ಒಂದೇ ಪಂದ್ಯ. ಆದರೆ, ಮೂರನೇ ವಿಶ್ವಕಪ್ನಲ್ಲಿ ಮಾತ್ರ ಬಲಿಷ್ಠ ವಿಂಡೀಸ್ ತಂಡದೆದರು ಭರ್ಜರಿ ಪ್ರದರ್ಶನ ತೋರಿ ವಿಶ್ವಕಪ್ ಎತ್ತಿ ಹಿಡಿಯಿತು.
1983ರ ವಿಶ್ವಕಪ್ ಲೀಗ್ನಲ್ಲಿ ಭಾರತ ಪ್ರದರ್ಶನ
8 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ಭಾರತ, ವೆಸ್ಟ್ ಇಂಡೀಸ್,ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳೊಂದಿಗೆ ಸ್ಥಾನ ಪಡೆದುಕೊಂಡಿತ್ತು. ಲೀಗ್ನಲ್ಲಿ ಮೂರು ತಂಡದ ವಿರುದ್ಧ 2 ಪಂದ್ಯಗಳನ್ನಾಡಿತ್ತು. ವಿಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಒಂದು ಗೆಲುವು ಒಂದು ಸೋಲು ಕಂಡಿದ್ದ ಕಪಿಲ್ ಪಡೆ ಜಿಂಬಾಬ್ವೆ ವಿರುದ್ಧ 2 ಪಂದ್ಯಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ 4 ಗೆಲುವು ಪಡೆದು ಎ ಗುಂಪಿನಲ್ಲಿ ವಿಂಡೀಸ್ ಜೊತೆ ಸೆಮಿ ಫೈನಲ್ ಪ್ರವೇಶಿಸಿತು
ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ಮಣಿಸಿ ಪೈನಲ್ಗೆ ಎಂಟ್ರಿ...
ಮೊದಲೆರಡು ವಿಶ್ವಕಪ್ನಲ್ಲಿ ಲೀಗ್ನಲ್ಲೇ ಹೊರಬಿದ್ದಿದ್ದ ಭಾರತ ಸೆಮಿಫೈನಲ್ ಪ್ರವೇಶಿಸಿರುವುದೆ ದೊಡ್ಡ ಸಾಧನೆ, ಇಂಗ್ಲೆಂಡ್ ವಿರುದ್ಧ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಬಿಂಬಿತವಾಗಿತ್ತು. ಆದರೆ, ಅಂದು ನಡೆದದ್ದೇ ಬೇರೆ, ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 213 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಕಪಿಲ್ ದೇವ್ 35ಕ್ಕೆ3, ಅಮರ್ನಾಥ್ 27ಕ್ಕೆ2, ಹಾಗೂ ರೋಜರ್ ಬಿನ್ನಿ 43 ಕ್ಕೆ 2 ವಿಕೆಟ್ ಪಡೆದಿದ್ದರು.
214 ರನ್ಗಳ ಗುರಿ ಬೆನ್ನೆತ್ತಿದ ಭಾರತಕ್ಕೆ ಯಶ್ಪಾಲ್ ಶರ್ಮಾ 61, ಸಂದೀಪ್ ಪಾಟೀಲ್ 51 ಮೋಹಿಂದರ್ ಅಮರ್ನಾಥ 46 ರನ್ಗಳಿಸಿ ಭಾರತವನ್ನು ಫೈನಲ್ಗೇರುವಂತೆ ಮಾಡಿದರು.
2 ಬಾರಿಯ ಚಾಂಪಿಯನ್ನರಿಗೆ ಶಾಕ್...
ಭಾರತಕ್ಕ ಚೊಚ್ಚಲ ವಿಶ್ವಕಪ್36 ವರ್ಷಗಳ ಹಿಂದೆ ನಡೆದಿದ್ದ ಫೈನಲ್ನಲ್ಲಿ ಪಂದ್ಯಕ್ಕೂ ಮುನ್ನ ವಿಂಡೀಸ್ಗೆ ಹ್ಯಾಟ್ರಿಕ್ ಪ್ರಶಸ್ತಿ ಪಕ್ಕಾ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಅಂದು ಭಾರತ ನೀಡಿದ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತು ತಲೆಬಾಗಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ವಿಂಡೀಸ್ ಬೌಲಿಂಗ್ ದಿಗ್ಗಜರಾದ ಮಾರ್ಷಲ್(3). ಆ್ಯಂಡಿ ಗಾರ್ನರ್ (2), ಜಾಯೊಲ್ ಗಾರ್ನರ್(1) ಮೈಕಲ್ ಹೋಲ್ಡಿಂಗ್ (2) ಬೌಲಿಂಗ್ ದಾಳಿಗೆ ತತ್ತರಿಸಿ 183 ರನ್ಗಳಿಗೆ ಸರ್ವಪತನಗೊಂಡಿತ್ತು. ಭಾರತದ ಪರ ಕೆ.ಶ್ರೀಕಾಂತ್ 38, ಅಮರ್ನಾಥ್ 26 ರನ್ಳಿಸಿದ್ದೇ ಗರಿಷ್ಠ ಮೊತ್ತವಾಗಿತ್ತು.
ಕೇವಲ 183 ರನ್ಗಳನ್ನ ವಿಂಡೀಸ್ ಸುಲಭವಾಗಿ ಚೇಸ್ ಮಾಡಿ ಹ್ಯಾಟ್ರಿಕ್ ಪ್ರಶಸ್ತಿ ಪಡೆಯಬಹುದೆಂದು ಭಾವಿಸಲಾಗಿತ್ತು. ಆದರೆ, ಸುಲಭಗುರಿ ಪಡೆದ ಗುಂಗಿನಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಂಡೀನ್ ಬಲಿಷ್ಠ ಬ್ಯಾಟ್ಸ್ಮನ್ಗಳಾದ ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಡ್ಜ್, ಡೆಸ್ಮನ್ ಹೇನಸ್ ಭಾರತದ ಬೌಲರ್ಗಳ ದಾಳಿಗೆ ಉತ್ತರಿಸಲಾಗದೇ ವಿಕೆಟ್ ಕೈಚೆಲ್ಲಿದ್ದರು.
ದಿಗ್ಗಜ ವಿವಿಯನ್ ರಿಚರ್ಡ್ಸ್ ನೀಡಿದ ಅದ್ಭುತ ಕ್ಯಾಚ್ ಪಡೆದ ಕಪಿಲ್ ಭಾರತಕ್ಕೆ ಗೆಲುವು ಖಚಿತಗೊಳಿಸಿದರು. ರಿಚರ್ಡ್ಸ್ ಔಟಾಗುತ್ತಿದ್ದಂತೆ ವಿಂಡೀಸ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೊನೆಗೆ 183 ರನ್ಗಳನ್ನು ಚೇಸ್ ಮಾಡಲಾಗದೇ 140 ರನ್ಗಳಿಗೆ ಅಲೌಟ್ ಆಗಿ 43 ರನ್ಗಳ ರೋಚಕ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕಪಿಲ್ ದೇವ್ ಪಡೆ ಕ್ರಿಕೆಟ್ ಜಗತ್ತಿಗೆ ಭಾರತದ ಶಕ್ತಿಯನ್ನ ತೋರಿಸಿದ್ದರು.
ಸತತ 2 ಬಾರಿ ಚಾಂಪಿಯನ್ ಆಗಿದ್ದ ವಿಂಡೀಸ್ಗೆ ಭಾರತ ನೀಡಿದ ಹೊಡೆತ ಹೇಗಿತ್ತೆಂದರೆ ವಿಂಡೀಸ್ 38 ವರ್ಷವಾದರೂ ಇಂದಿಗೂ ಒಮ್ಮಯೂ ಫೈನಲ್ ಕೂಡ ತಲುಪಿಲ್ಲ. ಚಾಂಪಿಯನ್ ನಂತರದ ಭಾರತ ತಂಡದ ಸಾಧನೆ ನಂತರದ 1989ರ ವಿಶ್ವಕಪ್ನಲ್ಲಿ ಸೆಮಿಫೈನಲ್, 1992 ರಲ್ಲಿ 7 ನೇಸ್ಥಾನ, 1996ರಲ್ಲಿ ಸೆಮಿಫೈನಲ್, 1999ರಲ್ಲಿ 6 ನೇ ಸ್ಥಾನ ತಲುಪಿತ್ತು.
ಆದರೆ 2003 ರಲ್ಲಿ ಗಂಗೂಲಿ ನೇತೃತ್ವದಲ್ಲಿ ಪೈನಲ್ ತಲುಪಿತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ ರನ್ನರ್ ಅಪ್ ಆಯಿತು. 2007ರಲ್ಲಿ ಲೀಗ್ನಲ್ಲಿ ಹೀನಾಯ ಸೋಲು ಕಂಡಿತ್ತು. 2007 ಸೋಲಿನಿಂದ ಕಂಗೆಟ್ಟ ಬಿಸಿಸಿಐ ಧೋನಿ ನಾಯಕತ್ವದಲ್ಲಿ ಮತ್ತೆ 4 ವರ್ಷಗಳ ಕಾಲ ಬಲಿಷ್ಠ ತಂಡ ಕಟ್ಟುವ ಮೂಲಕ 2011ರಲ್ಲಿ 28 ವರ್ಷಗಳ ನಂತರ ವಿಶ್ವಕಪ್ ಎತ್ತಿ ಹಿಡಿದಿತ್ತು. 2015ರಲ್ಲಿ ಸೆಮಿಫೈನಲ್ನಲ್ಲಿ ಆಸೀಸ್ ವಿರುದ್ಧ ಸೋಲನುಭವಿಸಿ ನಿರಾಸೆಯನುಭವಿಸಿತ್ತು.