ಕೋಲ್ಕತ್ತಾ : ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ವೈಟ್ ವಾಷ್ ಮಾಡಿರುವ ರೋಹಿತ್ ಬಳಗ ಟಿ20 ಸರಣಿಗಾಗಿ ಸೋಮವಾರ ಕೋಲ್ಕತ್ತಾಗೆ ಬಂದಿಳಿದಿದೆ.
ಕುತೂಹಲ ಕೆರಳಿಸಿದ್ದ ಐಪಿಎಲ್ ಮೆಗಾ ಹರಾಜು ಮುಗಿದಿದೆ. ತಂಡದಲ್ಲಿರುವ ಎಲ್ಲಾ ಆಟಗಾರರು ಹರಾಜಿನಲ್ಲಿ ಒಳ್ಳೆಯ ಮೊತ್ತವನ್ನೇ ಪಡೆದಿದ್ದಾರೆ. ಹೀಗಾಗಿ, ಇದೇ ಖುಷಿಯಲ್ಲಿ ವಿಂಡೀಸ್ ದೈತ್ಯರನ್ನು ಮಣಿಸಿ ತಮ್ಮ ಆತ್ಮವಿಶ್ವಾಸವನ್ನು ಮತ್ತು ಐಪಿಎಲ್ನಲ್ಲಿ ತಮ್ಮನ್ನ ಖರೀದಿಸಿರುವ ತಂಡಗಳ ಮಾಲೀಕರಿಗೂ ಖುಷಿ ತರುವ ಹುಮ್ಮಸ್ಸಿನಲ್ಲಿದ್ದಾರೆ.
-
Thank you, Ahmedabad! 👍 👏
— BCCI (@BCCI) February 14, 2022 " class="align-text-top noRightClick twitterSection" data="
Hello, Kolkata! 👋 👋#TeamIndia | #INDvWI | @Paytm pic.twitter.com/A2Me4sfiiz
">Thank you, Ahmedabad! 👍 👏
— BCCI (@BCCI) February 14, 2022
Hello, Kolkata! 👋 👋#TeamIndia | #INDvWI | @Paytm pic.twitter.com/A2Me4sfiizThank you, Ahmedabad! 👍 👏
— BCCI (@BCCI) February 14, 2022
Hello, Kolkata! 👋 👋#TeamIndia | #INDvWI | @Paytm pic.twitter.com/A2Me4sfiiz
ಭಾರತ ತಂಡ ಕೋಲ್ಕತ್ತಾಗೆ ತಲುಪಿದ ವಿಡಿಯೋವೊಂದನ್ನು ಬಿಸಿಸಿಐ ಪೋಸ್ಟ್ ಮಾಡಿದೆ. ಅಹ್ಮದಾಬಾದ್ನ ಬಯೋಬಬಲ್ನಲ್ಲಿದ್ದ ಆಟಗಾರರು ಇದೀಗ ಕೋಲ್ಕತ್ತಾಗೆ ತೆರಳಿದ್ದು, ಇಂದು ಕೋವಿಡ್-19 ಟೆಸ್ಟ್‌ಗೆ ಒಳಗಾಗುವ ಸಾಧ್ಯತೆಯಿದೆ.
ಏಕದಿನ ಸರಣಿಗೆ ಕೋವಿಡ್-19 ಕಾರಣ ಪ್ರೇಕ್ಷಕರಿಗೆ ಅವಕಾಶ ಇರಲಿಲ್ಲ. ಆದರೆ, ಕ್ರಿಕೆಟ್ ಬೆಂಗಾಲ್ ಪ್ರೇಕ್ಷಕರಿಗೆ ಅನುಮತಿ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದೆ. ಆದರೆ, ಬಿಸಿಸಿಐ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲದಿರುವುದರಿಂದ, ಬಹುತೇಕ ಮುಚ್ಚಿದ ಕ್ರೀಡಾಂಗಣದಲ್ಲೇ ನಡೆಯುವ ಸಾಧ್ಯತೆಯಿದೆ. ಟಿ20 ಸರಣಿಯ ಪಂದ್ಯಗಳು ಫೆಬ್ರವರಿ 16,18 ಮತ್ತು 20ರಂದು ನಡೆಯಲಿವೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಸಿಂಗಾಪುರದ ದೈತ್ಯನನ್ನ 8.25 ಕೋಟಿಗೆ ಖರೀದಿಸಿದ ಮುಂಬೈ ಇಂಡಿಯನ್ಸ್