ಮುಂಬೈ: ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯಬೇಕೆ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡಬೇಕೆ ಎನ್ನವುದನ್ನು ತಂಡ ನಿರ್ಧರಿಸುವ ಅಗತ್ಯವಿದೆ ಎಂದು ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡದ ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಏಕದಿನ ಸರಣಿಯನ್ನಾಡಲಿದೆ. ನಂತರ ಕೋಲ್ಕತ್ತಾದಲ್ಲಿ ಫೆಬ್ರವರಿ 16ರಿಂದ ಟಿ20 ಸರಣಿಯನ್ನಾಡಲಿದೆ. ಏಕದಿನ ಸರಣಿಯಾರಂಭಕ್ಕೆ ಕೇವಲ 5 ದಿನಗಳ ಕಾಲಾವಕಾಶವಿದ್ದು, ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಬೇಕೆಂದು ಅಜಿತ್ ಅಗರ್ಕರ್ ಹೇಳಿದ್ದಾರೆ.
ಕೆಎಲ್ ರಾಹುಲ್ ಆರಂಭಿಕನ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟರ್ ಎಂಬುದನ್ನು ಟೀಮ್ ಮ್ಯಾನೇಜ್ಮೆಂಟ್ ನಿರ್ಧಾರ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ದಕ್ಷಿಣ ಆಫ್ರಿಕಾದಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು. ಇದು ನನಗೆ ನಿರಾಶೆ ತಂದಿತ್ತು. ಏಕೆಂದರೆ ಅವರು 4 ಅಥವಾ 5ನೇ ಕ್ರಮಾಂಕದಲ್ಲಿ ತುಂಬಾ ಯಶಸ್ಸು ಸಾಧಿಸಿದ್ದರು ಎಂದು ಸ್ಟಾರ್ ಸ್ಫೋರ್ಟ್ಸ್ ಗೇಮ್ ಶೋ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ವಿಶ್ವದಾದ್ಯಂತ ಲೀಗ್ ಆಡಿದ್ದೇನೆ, ಆದ್ರೆ ಐಪಿಎಲ್ ಲೆವೆಲ್ಗೆ ಯಾವುದು ಇಲ್ಲ: ತಿಸಾರ ಪೆರೆರಾ
ಒಂದು ವೇಳೆ ಅವರನ್ನು ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಆಡಿಸದಿದ್ದರೆ ಮತ್ತೊಮ್ಮೆ ಮ್ಯಾನೇಜ್ಮೆಂಟ್ ಅವರನ್ನು ಓಪನರ್ ಆಗಿಯೇ ನಿರ್ಧರಿಸುವ ವಿಷಯಕ್ಕೆ ಅಂಟಿಕೊಳ್ಳಬೇಕು. ಮತ್ತು ವಿಂಡೀಸ್ ವಿರುದ್ಧ ಮುಂಬರುವ ಸರಣಿಯಲ್ಲಿ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಅವಕಾಶ ನೀಡಬೇಕು. ಆದರೆ ಆಸಕ್ತಿದಾಯಕ ವಿಷಯವೆಂದರೆ ಶಿಖರ್ ಧವನ್ ಕೂಡ ಅಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾದಲ್ಲಿ ಉತ್ತಮವಾಗಿ ಆಡಿ ರನ್ ಗಳಿಸಿದ್ದಾರೆ, ಆದರೂ ಮುಂದಿನ ಒಂದು ಅಥವಾ ಒಂದುವರೆ ವರ್ಷಗಳಲ್ಲಿ ಅವರು ಎಲ್ಲಿರಲಿದ್ದಾರೆ ಎಂಬುದರ ಖಾತ್ರಿಯಿಲ್ಲದಿರುವುದರಿಂದ ರಾಹುಲ್ ಬಗ್ಗೆ ಯೋಚನೆ ಮಾಡಬೇಕು ಎಂದು ಮಾಜಿ ವೇಗಿ ತಿಳಿಸಿದ್ದಾರೆ.
ಪಂತ್ ಅಥವಾ ಇಶಾನ್ ಕಿಶನ್ಗೆ ಅವಕಾಶ ನೀಡಬಹುದು:
ಒಂದು ವೇಳೆ ಆರಂಭಿನಾಗಿ ಕೆಎಲ್ ರಾಹುಲ್ ಭವಿಷ್ಯದಲ್ಲಿ ಆರಂಭಿಕನಾಗಿ ಯಶಸ್ವಿಯಾಗಲಾರ ಎನ್ನುವುದಾದರೆ, ಸ್ಫೋಟಕ ಬ್ಯಾಟರ್ಗಳಾದ ಇಶಾನ್ ಕಿಶನ್ ಅಥವಾ ರಿಷಭ್ ಪಂತ್ ಅವರನ್ನು ಟಾಪ್ ಆರ್ಡರ್ನಲ್ಲಿ ಒಂದು ಅವಕಾಶ ನೀಡಬಹುದು. ಯಾರಿಗೆ ಗೊತ್ತು, ಅವರು ಯಶಸ್ವಿಯಾದರೂ ಆಗಬಹುದು ಎಂದು ಅಗರ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ