ETV Bharat / sports

ಕೊಹ್ಲಿಪಡೆ ಖಂಡಿತ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ

ಕಿವೀಸ್ ವಿರುದ್ಧದ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಬಿಸಿಸಿಐ ಈಗಾಗಲೇ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.

India  vs New Zealand
ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್
author img

By

Published : May 11, 2021, 9:01 PM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಅಮಾನತಾಗುತ್ತಿದ್ದಂತೆ ಎಲ್ಲರ ಗಮನ ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವ ಟೆಸ್ಟ್​ಚಾಂಪಿಯನ್​ಶಿಪ್​ನತ್ತಾ ಮುಖಮಾಡಿದೆ. ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಸೇರಿದಂತೆ ಹಲವಾರು ಕ್ರಿಕೆಟ್ ದಿಗ್ಗಜರು ಕೊಹ್ಲಿ ಬಳಗ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ ಎನ್ನುತ್ತಿದ್ದಾರೆ.

ಕಿವೀಸ್ ವಿರುದ್ಧದ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಬಿಸಿಸಿಐ ಈಗಾಗಲೇ 20 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಸ್ಟಾರ್​ಸ್ಪೋರ್ಟ್ಸ್​ನಲ್ಲಿ ಈ ತಂಡದ ವಿಶ್ಲೇಷಣೆ ಮಾಡಿರುವ ಪಾರ್ಥೀವ್ ಪಟೇಲ್ " ಇದು ನಿಜವಾಗಿಯೂ ನೋಡಲು ಪ್ರಬಲ ತಂಡವಾಗಿ ಕಾಣುತ್ತಿದೆ ಎಂದು ನಾನು ಭಾವಿಸುತ್ತೇನೆ. ನೀವು ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡವನ್ನು ಹೋಲಿಸಲು ಬಯಸಿದರೆ, ನಾವು ಎಲ್ಲ ಆಯಾಮಗಳನ್ನು ಒಳಗೊಂಡಿದ್ದೇವೆ. ನೀವು ವೇಗದ ಬೌಲರ್​ಗಳ ಬಗ್ಗೆ ಮಾತನಾಡಿದರೆ, ಬುಮ್ರಾ, ಇಶಾಂತ್ ಶರ್ಮಾ,ಶಮಿಯವರನ್ನು ಹೊಂದಿದ್ದೇವೆ. ಒಂದು ವೇಳೆ ಅವರಲ್ಲಿ ಯಾರಾದರೂ ಸರಿಹೊಂದುವುದಿಲ್ಲ ಎನಿಸಿದರೆ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್​ ಇದ್ದಾರೆ. ಇದು ತಂಡದ ಆಳವನ್ನು ಸೂಚಿಸುತ್ತದೆ" ಎಂದಿದ್ದಾರೆ.​

ಬ್ಯಾಟ್ಸ್​ಮನ್​ಗಳ ಬಗ್ಗೆ ಮಾತನಾಡುವುದಾರೆ, ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರಾ, ರಿಷಭ್ ಪಂತ್​ರಂತಹ ಇಂಗ್ಲೆಂಡ್​ನಲ್ಲಿ ಸಮರ್ಥವಾಗಿ ಬ್ಯಾಟಿಂಗ್ ಮಾಡಬಲ್ಲ ಪರಿಣಿತ ಬ್ಯಾಟ್ಸ್​ಮನ್​ಗಳಿದ್ದಾರೆ. ಅಲ್ಲಿ ಎಲ್ಲರಿಗೂ ರನ್​ಸಿಕ್ಕಿದೆ. ಅಲ್ಲದೇ ಕೆಎಲ್ ರಾಹುಲ್​ರಂತಹ ಹೆಚ್ಚುವರಿ ಬ್ಯಾಟ್ಸ್​ಮನ್ ಇದ್ದಾರೆ, ರಾಹುಲ್​ ಅಂತಹ ಬ್ಯಾಟ್ಸ್​ಮನ್ ಈ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯುತ್ತಿಲ್ಲ ಎಂದರೆ, ಈ ತಂಡ ಎಷ್ಟು ಬಲಿಷ್ಠವಾಗಿದೆ ಎಂದು ನೀವೇ ಊಹಿಸಿಕೊಳ್ಳಿ ಎಂದು ಪಟೇಲ್ ಹೇಳಿದ್ದಾರೆ.

ಗಾಯದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಬದಲಿಗೆ ತಂಡ ಸೇರಿದ್ದ ಅಕ್ಷರ್ ಪಟೇಲ್ ಆಡಿದ್ದರು. ಆದರೆ, ಈ ಸರಣಿಯಲ್ಲಿ ಜಡೇಜಾ ಆಡುವುದಿಲ್ಲ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಖಂಡಿತ ಜಡೇಜಾ ಕಮ್​ಬ್ಯಾಕ್ ಮಾಡಲಿದ್ದಾರೆ. ಅಶ್ವಿನ್ ಕೂಡ ಆಡಲಿದ್ದಾರೆ. ಹಾಗಾಗಿ ಈ ತಂಡ ಖಂಡಿತ ಬಲಿಷ್ಠವಾಗಿರಲಿದೆ ಎಂದು ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಅದು ಯಾರೇ ಆಗಲಿ, ಕೊರೊನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಪ್ರವಾಸದಿಂದ ಗೇಟ್​ ಪಾಸ್: ಬಿಸಿಸಿಐ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.