ETV Bharat / sports

ಮಹಿಳಾ ಟೆಸ್ಟ್​ನಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು: ಆಂಗ್ಲರ​ ವಿರುದ್ಧ ಕೌರ್​ ಪಡೆಗೆ 347 ರನ್​ ಜಯ

ಇಂಗ್ಲೆಂಡ್​​ ವಿರುದ್ಧದ ಏಕೈಕ​ ಟೆಸ್ಟ್​ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ದಾಖಲೆಯ ಗೆಲುವು ಸಾಧಿಸಿದೆ.

Etv Bharat
ಇಂಗ್ಲೆಂಡ್​ ವಿರುದ್ದ ಭಾರತಕ್ಕೆ
author img

By ETV Bharat Karnataka Team

Published : Dec 16, 2023, 1:04 PM IST

Updated : Dec 16, 2023, 2:01 PM IST

ಮುಂಬೈ: ಮಹಿಳಾ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತದ ವನಿತೆಯರು 347 ರನ್​ಗಳ ಬೃಹತ್​ ಅಂತರದ ಗೆಲುವು ದಾಖಲಿಸಿದ್ದಾರೆ. ಇಲ್ಲಿಯ ಡಿವೈ ಪಾಟೀಲ್​ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭಾರತದ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ಮೂಲಕ ​ಮಹಿಳಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ರನ್​ಗಳ ಗೆಲುವು ಎಂಬ ದಾಖಲೆಯನ್ನು ಭಾರತದ ವನಿತೆಯರು ಬರೆದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್​ ಇಂಡಿಯಾ ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್​ನ ಬ್ಯಾಟಿಂಗ್​ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ 47 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಆಸರೆಯಾದರು.

ಮಧ್ಯಮ ಕ್ರಮಾಂಕದಲ್ಲಿ ಶುಭಾ ಸತೀಶ್ (69) ಮತ್ತು ಜೆಮಿಮಾ ರಾಡ್ರಿಗಸ್ (68) ಅರ್ಧಶತಕ ಬಾರಿಸುವ ಮೂಲಕ ತಂಡದ ಸ್ಕೋರ್​ ಹೆಚ್ಚಿಸಲು ಸಹಾಯ ಮಾಡಿದರು. ನಂತರ ಯಾಸ್ತಿಕಾ ಭಾಟಿಯಾ (66) ಮತ್ತು ದೀಪ್ತಿ ಶರ್ಮಾ (67) ಅರ್ಧ ಶತಕಗಳೊಂದಿಗೆ ಮಿಂಚಿದರು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 104.3 ಓವರ್​ಗೆ 428 ರನ್‌ ಕಲೆಹಾಕಿ ಆಲೌಟ್​ ಆಗಿತ್ತು.

ಎರಡನೇ ಇನ್ನಿಂಗ್ಸ್​: ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ ತಂಡ ಭಾರತದ ಬೌಲರ್​ಗಳ ದಾಳಿಗೆ ಮುಗ್ಗರಿಸಿತ್ತು. ಕೇವಲ 136 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದು ಕೊಂಡು ಮೊದಲ ಇನ್ನಿಂಗ್ಸ್​ ಮುಕ್ತಾಯಗೊಳಿಸಿತು. ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ದೀಪ್ತಿ ಶರ್ಮಾ 5 ವಿಕೆಟ್ ಪಡೆದರೆ, ಸ್ನೇಹಾ ರಾಣಾ 2, ರೇಣುಕಾ ಸಿಂಗ್​, ಪೂಜಾ ವಸ್ತ್ರಕರ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

292ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಶಫಾಲಿ ವರ್ಮಾ (33), ಸ್ಮೃತಿ ಮಂಧಾನ (26), ರಾಡ್ರಿಗಸ್​ (27), ನಾಯಕಿ ಹರ್ಮನ್‌ಪ್ರೀತ್ ಕೌರ್ (44 ಅಜೇಯ) ಬ್ಯಾಟಿಂಗ್​ ನೆರವಿನಿಂದ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 186 ರನ್​ಗಳಿಸಿತು. ಮೂರನೇ ದಿನ ಆಟ ಆರಂಭಕ್ಕೂ ಮುನ್ನ ಭಾರತ ಡಿಕ್ಲೇರ್ ಘೋಷಿಸಿ ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್​ ಬ್ಯಾಟಿಂಗ್​ಗೆ ಆಹ್ವಾನಿಸಿತು.

479ರನ್​​ಗಳ ಗುರಿಯನ್ನು ಬೆನ್ನತ್ತಿದ ​ಇಂಗ್ಲೆಂಡ್ ತಂಡಕ್ಕೆ ಟೀಮ್​ ಇಂಡಿಯಾದ ಬೌಲರ್​ಗಳು ಮತ್ತೊಮ್ಮೆ ಆಘಾತ ನೀಡಿದರು. ಕೇವಲ 131 ರನ್​ಗಳಿಗೆ ಇಂಗ್ಲೆಂಡ್​ನ ಎಲ್ಲ ವಿಕೆಟ್​ಗಳನ್ನು ಉರುಳಿಸಿದ ಭಾರತದ ವನಿತೆಯರು 347 ರನ್​ಗಳ ದಾಖಲೆಯ ಗೆಲುವು ಸಾಧಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಪರ ದೀಪ್ತಿ ಶರ್ಮಾ 4 ವಿಕೆಟ್​, ಪೂಜಾ ವಸ್ತ್ರಾಕರ್​ 3, ರಾಜೇಶ್ವರಿ 2, ರೇಣುಕಾ ಸಿಂಗ್​ ಒಂದು ವಿಕೆಟ್​ ಪಡೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದ ದೀಪ್ತಿ ಶರ್ಮಾ ಎರಡನೇ ಇನ್ನಿಂಗ್ಸ್‌ನಲ್ಲೂ ನಾಲ್ಕು ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯವೊಂದರಲ್ಲಿ 9 ವಿಕೆಟ್​ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪಾಕಿಸ್ತಾನ ದಾಖಲೆ ಹಿಂದಿಕ್ಕಿದ ಭಾರತ: ಮಹಿಳಾ ಟೆಸ್ಟ್ ಇತಿಹಾಸದಲ್ಲೇ ಭಾರತ ಭಾರಿ ಅಂತರದಿಂದ ಗೆದ್ದ ತಂಡ ಎಂಬ ದಾಖಲೆ ನಿರ್ಮಿಸಿದೆ. 1998ರಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 309 ರನ್‌ಗಳ ಜಯ ಸಾಧಿಸಿದ್ದು, ಈವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಭಾರತ ಹಿಂದಿಕ್ಕಿದೆ.

ಇದನ್ನೂ ಓದಿ: ರಾಷ್ಟ್ರೀಯ ರೋಲರ್ ಹಾಕಿ ಸ್ಪರ್ಧೆ: ಕಿರಿಯರ ವಿಭಾಗದಲ್ಲಿ 1 ಬೆಳ್ಳಿ, 2 ಕಂಚಿನ ಪದಕ ಗೆದ್ದ ಕರ್ನಾಟಕ ತಂಡ

Last Updated : Dec 16, 2023, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.