ದುಬೈ: ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಹೀನಾಯ ಸೋಲು ಕಾಣುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಸೆಮಿಫೈನಲ್ ಕನಸು ಬಹುತೇಕ ಕಮರಿದೆ.
ತಾವಾಡಿದ ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ಸೋಲು ಕಂಡಿದ್ದರಿಂದ ಈ ಪಂದ್ಯವನ್ನು ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲಾಗಿತ್ತು. ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ನಿರೀಕ್ಷೆಯಂತೆ ಬೌಲಿಂಗ್ ಮಾಡಲು ನಿರ್ಧರಿಸಿತು.
ನಾಯಕ ಕೇನ್ ವಿಲಿಯಮ್ಸನ್ ಆಯ್ಕೆಯನ್ನ ಸಮರ್ಥಿಸಿಕೊಂಡ ಟ್ರೆಂಟ್ ಬೌಲ್ಟ್ ಇನ್ನಿಂಗ್ಸ್ನ 3ನೇ ಓವರ್ನಲ್ಲಿ 4 ರನ್ ಗಳಿಸಿದ್ದ ಇಶಾನ್ ಕಿಶನ್ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೊದಲ ಪೆಟ್ಟು ನೀಡಿದರು. ನಂತರ 16 ಎಸೆತಗಳಲ್ಲಿ 3 ಬೌಂಡರಿ ಸಹಿತ 18 ರನ್ಗಳಿಸಿದ್ದ ರಾಹುಲ್ ದೊಡ್ಡ ಹೊಡೆತಕ್ಕೆ ಮುಂದಾಗಿ ಸೌಥಿಗೆ ವಿಕೆಟ್ ಒಪ್ಪಿಸಿದರು.
-
A sparkling performance from New Zealand ✨#T20WorldCup | #INDvNZ | https://t.co/dJpWyk0E0j pic.twitter.com/OO7D1fSreV
— T20 World Cup (@T20WorldCup) October 31, 2021 " class="align-text-top noRightClick twitterSection" data="
">A sparkling performance from New Zealand ✨#T20WorldCup | #INDvNZ | https://t.co/dJpWyk0E0j pic.twitter.com/OO7D1fSreV
— T20 World Cup (@T20WorldCup) October 31, 2021A sparkling performance from New Zealand ✨#T20WorldCup | #INDvNZ | https://t.co/dJpWyk0E0j pic.twitter.com/OO7D1fSreV
— T20 World Cup (@T20WorldCup) October 31, 2021
ರಾಹುಲ್ ವಿಕೆಟ್ ಬೀಳುತ್ತಿದ್ದಂತೆ ಭಾರತ ತಂಡ ಚೇತರಿಕೆಯನ್ನೇ ಕಾಣಲಾಗಲಿಲ್ಲ. ರೋಹಿತ್ (14), ವಿರಾಟ್ ಕೊಹ್ಲಿ (4), ರಿಷಭ್ ಪಂತ್(12), ಹಾರ್ದಿಕ್ ಪಾಂಡ್ಯ (23), ಶಾರ್ದೂಲ್ ಠಾಕೂರ್ (0) ರನ್ ಗಳಿಸಲು ಪರದಾಡಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 26 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಭಾರತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 110 ರನ್ಗಳಿಸಲಷ್ಟೇ ಶಕ್ತವಾಯಿತು.
ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 4 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಸೋಧಿ 4 ಓವರ್ಗಳಲ್ಲಿ 17 ರನ್ಗೆ 2 ಹಾಗೂ ಸೌಥಿ ಮತ್ತು ಆ್ಯಡಂ ಮಿಲ್ನೆ ತಲಾ ಒಂದು ವಿಕೆಟ್ ಪಡೆದರು.
111 ರನ್ಗಳ ಅಲ್ಪ ಮೊತ್ತದ ಗುರಿ ಪಡೆದ ನ್ಯೂಜಿಲ್ಯಾಂಡ್ ತಂಡ 14.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
-
Things are getting pretty interesting 🤩
— T20 World Cup (@T20WorldCup) October 31, 2021 " class="align-text-top noRightClick twitterSection" data="
Which two sides will qualify from Group 2? 🤔#T20WorldCup pic.twitter.com/2NSTjsYjoZ
">Things are getting pretty interesting 🤩
— T20 World Cup (@T20WorldCup) October 31, 2021
Which two sides will qualify from Group 2? 🤔#T20WorldCup pic.twitter.com/2NSTjsYjoZThings are getting pretty interesting 🤩
— T20 World Cup (@T20WorldCup) October 31, 2021
Which two sides will qualify from Group 2? 🤔#T20WorldCup pic.twitter.com/2NSTjsYjoZ
ಮಾರ್ಟಿನ್ ಗಪ್ಟಿಲ್ 17 ಎಸೆತಗಳಲ್ಲಿ 20, ಡೇರಿಲ್ ಮಿಚೆಲ್ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 49 ರನ್ ಗಳಿಸಿ ಔಟಾದರೆ, ಕೇನ್ ವಿಲಿಯಮ್ಸನ್ 31 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 33 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೂಪರ್-12ನಲ್ಲಿ 1ನೇ ಗುಂಪಿನಲ್ಲಿ ಆಡಿರುವ ಎಲ್ಲಾ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡದ ಸೆಮಿಫೈನಲ್ಸ್ ಪ್ರವೇಶ ಬಹುತೇಕ ಖಚಿತವಾಗಿದೆ. ಇನ್ನು ಅಫ್ಘಾನಿಸ್ತಾನ 3 ಪಂದ್ಯಗಳಲ್ಲಿ 2 ಜಯ ಸಾಧಿಸಿ 2ನೇ ಸ್ಥಾನದಲ್ಲಿದೆ.
ಆದರೆ, ಇನ್ನೂ ಅಫ್ಘಾನಿಸ್ತಾನವು ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ 2 ಪಂದ್ಯಗಳನ್ನಾಡಬೇಕಿದೆ. ನ್ಯೂಜಿಲ್ಯಾಂಡ್ ಇನ್ನೂ 3ನೇ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಎದುರು ಸೂಪರ್ 12ನಲ್ಲಿ ಆಡಲಿದೆ. ಭಾರತ ಆಡಿರುವ 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿರುವುದರಿಂದ ಸೆಮಿಫೈನಲ್ ಆಸೆ ಬಹುತೇಕ ಕಮರಿದಂತಾಗಿದೆ.
ಇದನ್ನು ಓದಿ: T20 World Cup 2021: ನಮೀಬಿಯಾ ವಿರುದ್ಧ 62 ರನ್ಗಳ ಬೃಹತ್ ಜಯ ಸಾಧಿಸಿದ ಅಫ್ಘಾನಿಸ್ತಾನ