ETV Bharat / sports

ಟಿ-20ಯಲ್ಲಿ 12 ರನ್​ಗಳಿಗೆ ಆಲೌಟ್ ಆದ ಅರ್ಜೆಂಟೀನಾ ತಂಡ!

ಗುರುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅರ್ಜೆಂಟೀನಾ ತಂಡ 11.2 ಓವರ್​ಗಳಲ್ಲಿ ಕೇವಲ 12 ರನ್​ಗಳಿಗೆ ಆಲೌಟ್ ಆಗಿದೆ. ಅರ್ಜೆಂಟೀನಾ ತಂಡದ ಪರ ಯಾವೊಬ್ಬ ಬ್ಯಾಟರ್​ ಎರಡಂಕಿಯ ಮೊತ್ತ ದಾಟಲಿಲ್ಲ. ಮೂವರು ತಲಾ 2 ರನ್​ಗಳಿಸಿದರೆ, ಮೂವರು ತಲಾ 1ರನ್​ ಹಾಗೂ 4 ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಉಳಿದ 3 ರನ್​ಗಳು ಇತರ ರೂಪದಲ್ಲಿ ಬಂದವು.

T20I: Argentina women's all out 12 runs against brazil
ಟಿ20ಯಲ್ಲಿ 12 ರನ್​ಗಳಿಗೆ ಆಲೌಟ್ ಆದ ಅರ್ಜೆಂಟೀನಾ ತಂಡ
author img

By

Published : Oct 21, 2021, 5:26 PM IST

Updated : Oct 21, 2021, 5:38 PM IST

ನಾಕಲ್ಪನ್(ಮೆಕ್ಸಿಕೋ): ಐಸಿಸಿ ಮಹಿಳಾ ಟಿ-20 ವಿಶ್ವಕಪ್​ ಅಮೆರಿಕ​ ರೀಜನ್ ಕ್ವಾಲಿಫೈಯರ್​ನಲ್ಲಿ ಅರ್ಜೆಂಟೀನಾ ಮಹಿಳಾ ತಂಡ ಬ್ರೆಜಿಲ್​ ವಿರುದ್ಧ ಕೇವಲ 12 ಓವರ್​ಗಳಿಗೆ ಆಲೌಟ್​ ಆಗಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅರ್ಜೆಂಟೀನಾ ತಂಡ 11.2 ಓವರ್​ಗಳಲ್ಲಿ ಕೇವಲ 12 ರನ್​ಗಳಿಗೆ ಆಲೌಟ್ ಆಗಿದೆ. ಅರ್ಜೆಂಟೀನಾ ತಂಡದ ಪರ ಯಾವೊಬ್ಬ ಬ್ಯಾಟರ್​ ಎರಡಂಕಿ ಮೊತ್ತ ದಾಟಲಿಲ್ಲ. ಮೂವರು ತಲಾ 2 ರನ್​ಗಳಿಸಿದರೆ, ಮೂವರು ತಲಾ 1ರನ್​ ಹಾಗೂ 4 ಬ್ಯಾಟರ್​ಗಳು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಉಳಿದ 3 ರನ್​ಗಳು ಇತರ ರೂಪದಲ್ಲಿ ಬಂದವು.

13 ರನ್​ಗಳ ಗುರಿಯನ್ನು ಬ್ರೆಜಿಲ್ ತಂಡ 2 ವಿಕೆಟ್ ಕಳೆದುಕೊಂಡು 3.3 ಓವರ್​ಗಳಲ್ಲಿ ತಲುಪಿತು. 5 ರನ್​ಗಳನ್ನು ಬ್ಯಾಟರ್​ಗಳು ಗಳಿಸಿದರೆ, ಉಳಿದ 7 ರನ್​ಗಳು ಇತರ ರೂಪದಲ್ಲಿ ಬ್ರೆಜಿಲ್​ಗೆ ಸಂದಿತು.

ಅರ್ಜೆಂಟೀನಾ 12 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲಿ 6ನೇ ಕನಿಷ್ಠ ಮೊತ್ತ ದಾಖಲಿಸಿದೆ. ಮಾಲ್ಡೀವ್ಸ್ 6 ಮತ್ತು 8ಕ್ಕೆ ಮತ್ತು ಮಲಿ ತಂಡ 6, 10, 11 ರನ್​ಗಳಿಗೆ ಈ ಹಿಂದೆ ಆಲೌಟ್ ಆಗಿದ್ದವು.

ಇದನ್ನು ಓದಿ:ವಿಶ್ವಕಪ್​ ಗೆಲ್ಲಲು ಭಾರತವೇ ಫೆವರೀಟ್​ ತಂಡ​, UAE ಕಂಡೀಷನ್ ಅವರಿಗೆ ಸೂಕ್ತವಾಗಿದೆ: ಇಂಜಮಾಮ್

Last Updated : Oct 21, 2021, 5:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.