ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಮೊದಲ ಪಂದ್ಯದಲ್ಲಿ ರಿಲೆ ರುಸ್ಸೋ ಅಬ್ಬರದ ಶತಕ ಹಾಗೂ ಕ್ವಿಂಟನ್ ಡಿ ಕಾಕ್ ಅವರ ಆಕರ್ಷಕ ಅರ್ಧಶತಕ ಹಾಗೂ ಹರಿಣಗಳ ಮಾರಕ ದಾಳಿಗೆ ಸಿಲುಕಿದ ಬಾಂಗ್ಲಾದೇಶ 104 ರನ್ಗಳ ಹೀನಾಯ ಸೋಲುಂಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್ 12 ಹಂತದ ಗ್ರೂಪ್ 2 ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ನಡೆಸಿ ಬಾಂಗ್ಲಾಕ್ಕೆ 206 ರನ್ಗಳ ಗೆಲುವಿನ ಗುರಿ ನೀಡಿತ್ತು. ಇನ್ನಿಂಗ್ಸ್ ಆರಂಭಿಸಿದ ನಾಯಕ ತೆಂಬಾ ಬವುಮಾ 2 ರನ್ಗೆ ವಿಕೆಟ್ ಒಪ್ಪಿಸಿದರೂ ಕೂಡ, ಬಳಿಕ ರುಸ್ಸೋ ಹಾಗೂ ಡಿ ಕಾಕ್ ಅಬ್ಬರದ ಜೊತೆಯಾಟವಾಡಿ ಬಾಂಗ್ಲಾ ಬೌಲರ್ಗಳ ಬೆವರಿಳಿಸಿದರು.
ಇಬ್ಬರೂ ಎಡಗೈ ಬ್ಯಾಟರ್ಗಳು 2ನೇ ವಿಕೆಟ್ಗೆ 168 ರನ್ಗಳ ಅಮೋಘ ಜೊತೆಯಾಟವಾಡಿದರು. ಬಾಂಗ್ಲಾದೇಶದ ಬೌಲರ್ಗಳ ಮೇಲೆ ದಂಡೆತ್ತಿ ಹೋದ ರುಸ್ಸೋ 56 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 109 ರನ್ ಬಾರಿಸಿದರೆ, ಡಿ ಕಾಕ್ 38 ಬಾಲ್ಗಳಲ್ಲಿ 63 ರನ್ ಚಚ್ಚಿದರು. ಇನ್ನುಳಿದ ಬ್ಯಾಟರ್ಗಳು ನಿರೀಕ್ಷಿತ ಆಟ ಪ್ರದರ್ಶಿಸದಿದ್ದರೂ ಸಹ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಬಾಂಗ್ಲಾ ಪರ ನಾಯಕ ಶಕೀಬ್ 2 ವಿಕೆಟ್ ಪಡೆದರು.
-
South Africa register a thumping win over Bangladesh, clinching two crucial points.#T20WorldCup | #SAvBAN | 📝: https://t.co/OQ0nVRlBpk pic.twitter.com/RMyE3Ca60x
— T20 World Cup (@T20WorldCup) October 27, 2022 " class="align-text-top noRightClick twitterSection" data="
">South Africa register a thumping win over Bangladesh, clinching two crucial points.#T20WorldCup | #SAvBAN | 📝: https://t.co/OQ0nVRlBpk pic.twitter.com/RMyE3Ca60x
— T20 World Cup (@T20WorldCup) October 27, 2022South Africa register a thumping win over Bangladesh, clinching two crucial points.#T20WorldCup | #SAvBAN | 📝: https://t.co/OQ0nVRlBpk pic.twitter.com/RMyE3Ca60x
— T20 World Cup (@T20WorldCup) October 27, 2022
206 ರನ್ ಬೆನ್ನಟ್ಟಿದ್ದ ಬಾಂಗ್ಲಾ ಟೈಗರ್ಸ್ ಹರಿಣಗಳ ದಾಳಿಗೆ ಸಿಲುಕಿ 16.3 ಓವರ್ಗಳಲ್ಲೇ 101 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಸೌಮ್ಯ ಸರ್ಕಾರ್ 15, ಲಿಟನ್ ದಾಸ್ 34 , ಮೆಹದಿ ಹಸನ್ 11 ಹಾಗೂ ತಸ್ಕಿನ್ ಅಹಮದ್ 10 ರನ್ ಹೊರತುಪಡಿಸಿ ಉಳಿದವರು ಎರಡಂಕಿ ಮೊತ್ತವನ್ನೂ ಕೂಡ ತಲುಪಲಿಲ್ಲ. ದಕ್ಷಿಣ ಆಫ್ರಿಕಾ ಪರ ನೋಕಿಯಾ 10 ರನ್ಗೆ 4 ಹಾಗೂ ಸ್ಪಿನ್ನರ್ ಶಮ್ಸಿ 20ಕ್ಕೆ 3 ವಿಕೆಟ್ ಕಬಳಿಸಿ ಬಾಂಗ್ಲಾ ತಂಡದ ಸೋಲಿಗೆ ಕಾರಣರಾದರು.
ಈ ಮೂಲಕ ದಕ್ಷಿಣ ಆಫ್ರಿಕಾ ತಂಡವು ಗೆಲುವಿನ ಖಾತೆ ತೆರೆದಿದೆ. ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಮೊದಲ ಪಂದ್ಯವು ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಗೆ ಇಂದು ಗೆಲುವು ಅನಿವಾರ್ಯವಾಗಿತ್ತು. ಇನ್ನೊಂದೆಡೆ ಪ್ರಥಮ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಮಣಿಸಿದ್ದ ಬಾಂಗ್ಲಾದೇಶ ಈ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ರುಸ್ಸೋ ಅಬ್ಬರದ ಶತಕ, ಡಿ ಕಾಕ್ ಆರ್ಭಟ: ಬಾಂಗ್ಲಾಕ್ಕೆ 206 ರನ್ ಗೆಲುವಿನ ಗುರಿ