ಮುಂಬೈ: ಇದೇ ವರ್ಷ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ಗಾಗಿ ಬಿಸಿಸಿಐ 9 ಸ್ಥಳಗಳನ್ನು ಪಟ್ಟಿ ಮಾಡಿ ಐಸಿಸಿ ಮುಂದಿಟ್ಟಿದ್ದು, ಶೀಘ್ರದಲ್ಲೇ ವಿಶ್ವ ಬೋರ್ಡ್ ಅಂತಿಮಗೊಳಿಸಲಿದೆ.
ಬಿಸಿಸಿಐ ಚುಟುಕು ವಿಶ್ವಕಪ್ಗಾಗಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಲಕ್ನೋ, ಕೋಲ್ಕತ್ತಾ ಮತ್ತು ಮುಂಬೈ ನಗರಗಳನ್ನು ಫೈನಲ್ ಮಾಡಿದೆ. ಆದರೆ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿರುವುದರಿಂದ ಟೂರ್ನಿಯ ಅಂತಿಮ ಸ್ಥಳಗಳ ಆಯ್ಕೆಯ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಇಎಸ್ಪಿಎನ್ ವರದಿಯ ಪ್ರಕಾರ ಐಸಿಸಿ ಮತ್ತು ಬಿಸಿಸಿಐ ಈ ಇವೆಂಟ್ ನಡೆಸುವ ಸಂದರ್ಭದ ವಿಭಿನ್ನ ಯೋಜನೆಗಳ ಕುರಿತು ಚರ್ಚಿಸಿವೆ. ಈಗಾಗಲೇ ದೇಶದಲ್ಲಿ ನಡೆಯುತ್ತಿರುವ ಐಪಿಎಲ್ಅನ್ನು ವಿಶ್ವ ಬೋರ್ಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿ ಹೇಳಿದೆ. ಇಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಐಸಿಸಿ ತಂಡ ಏಪ್ರಿಲ್ 26ರಂದು ಭಾರತಕ್ಕೆ ಪ್ರಯಾಣಿಸಲಿದೆ ಎಂದು ತಿಳಿದು ಬಂದಿದೆ.
ಅಕ್ಟೋಬರ್-ನವೆಂಬರ್ನಲ್ಲಿ ನಡೆಯುವ ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ನವೆಂಬರ್ 13ರಂದು ಫೈನಲ್ ಪಂದ್ಯ ನಡೆಯಲಿದೆ. ವರದಿಯ ಪ್ರಕಾರ ಐಸಿಸಿ ಕೆಲವು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ನಾಯಕತ್ವದ ರಣತಂತ್ರಗಳನ್ನು ಒಬ್ಬರನ್ನೊಬ್ಬರು ಕಾಪಿ ಮಾಡಿದ ರೋಹಿತ್-ಕೊಹ್ಲಿ!