ETV Bharat / sports

ಟಿ20 ವಿಶ್ವಕಪ್: ಹೇಜಲ್‌ವುಡ್‌, ವಾರ್ನರ್‌ ದಾಳಿಗೆ ತತ್ತರಿಸಿದ ವಿಂಡೀಸ್‌ - ಶೇಖ್ ಜಾಯೇದ್ ಮೈದಾನ

ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್ ಅಂತರದಲ್ಲಿ ಜಯಗಳಿಸಿದ್ದು, ಸೆಮಿಫೈನಲ್ ಹಾದಿ ಸುಗಮವಾಗಿದೆ.

T20 world cup: ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

author img

By

Published : Nov 6, 2021, 7:44 PM IST

ಅಬುಧಾಬಿ: ಟಿ20 ವಿಶ್ವಕಪ್​ನ ಸೂಪರ್ 12ರ ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್ ಅಂತರದಲ್ಲಿ ಜಯಗಳಿಸಿದೆ.

ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 22 ಎಸೆತಗಳು ಬಾಕಿ ಇರುವಂತೆಯೇ ವಿಂಡೀಸ್ ನೀಡಿದ ಗುರಿ ತಲುಪಿ, ಗೆಲುವಿನ ನಗೆ ಬೀರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ ಪರ ಎಲ್ವಿನ್ ಲೆವಿಸ್ 29, ಕೀರನ್ ಪೊಲಾರ್ಡ್ 44, ಶಿಮ್ರೋನ್ ಹೆಟ್ಮೇಯರ್ 27, ಆ್ಯಂಡ್ರ್ಯೂ ರಸೆಲ್ 18, ಕ್ರಿಸ್ ಗೇಲ್ 15 ರನ್​ಗಳ ಕೊಡುಗೆ ನೀಡಿದ್ದಾರೆ.

ಅಬ್ಬರಿಸಿದ ವಾರ್ನರ್, ಮಾರ್ಷ್​​:

ವೆಸ್ಟ್ ಇಂಡೀಸ್ ನೀಡಿದ್ದ ರನ್​ಗಳನ್ನು ಬೆನ್ನತ್ತಿದ ಆ್ಯರನ್ ಪಿಂಚ್ ಪಡೆ ಕೇವಲ ಎರಡು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ಡೇವಿಡ್ ವಾರ್ನರ್ 56 ಎಸೆತಗಳಲ್ಲಿ 89 ರನ್​ ಗಳಿಸಿ ವೆಸ್ಟ್ ಇಂಡೀಸ್ ಬೌಲರ್​ಗಳ ನಿದ್ದೆಗೆಡಿಸಿದರೆ, ಮೆಚೆಲ್ ಮಾರ್ಷ್ ಕೂಡಾ 53 ರನ್ ಗಳಿಸಿ ಆಸೀಸ್ ತಂಡ ಗೆಲುವಿಗೆ ಕೊಡುಗೆ ನೀಡಿದ್ದಾರೆ.

ಹೇಜಲ್​ವುಡ್​ಗೆ 4 ವಿಕೆಟ್: ವೆಸ್ಟ್ ಇಂಡೀಸ್ ಕೇವಲ 2 ವಿಕೆಟ್ ಗಳಿಸಲು ಮಾತ್ರ ಸಾಧ್ಯವಾಗಿದ್ದು, ಅಕೀಲ್ ಹೊಸೈನ್ ಮತ್ತು ಕ್ರಿಸ್ ಗೇಲ್ ತಲಾ ಒಂದೊಂದು ವಿಕೆಟ್ ಮಾತ್ರ ಪಡೆದರು. ಆಸ್ಟ್ರೇಲಿಯಾ ಪರ ಜೋಷ್ ಹೇಜಲ್​ವುಡ್ 4 ವಿಕೆಟ್ ಪಡೆದಿದ್ದು, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮೀಸ್, ಆ್ಯಂಡಂ ಜಂಪಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.