ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ದ್ವಿತೀಯಾರ್ಧದ ಪಂದ್ಯಗಳು ಯುಎಇನಲ್ಲಿ ಆರಂಭಗೊಂಡಿದೆ. ಕ್ರೀಡಾಭಿಮಾನಿಗಳು ಮೈದಾನಕ್ಕೆ ತೆರಳಿ ಪಂದ್ಯ ವೀಕ್ಷಣೆ ಮಾಡಲು ಸೀಮಿತ ಅವಕಾಶ ನೀಡಲಾಗಿದೆ. ಇದರ ಮಧ್ಯೆ IPLಗೆ ಮತ್ತಷ್ಟು ತಾರಾ ಮೆರುಗು ನೀಡುವ ಉದ್ದೇಶಿದಿಂದ ವಿವಿಧ ಬಾಲಿವುಡ್ ಮಹಿಳಾ ತಾರೆಯರು ಹಾಗೂ ಕ್ರಿಕೆಟರ್‌ವೊಬ್ಬರ ಪತ್ನಿಗೂ ನಿರೂಪಣೆ ಮಾಡುವ ಚಾನ್ಸ್ ಸಿಕ್ಕಿದೆ.
ಪ್ರತಿವರ್ಷ ಐಪಿಎಲ್ ಆರಂಭಗೊಳ್ತಿದ್ದಂತೆ ಗ್ಲ್ಯಾಮರ್ಗೋಸ್ಕರ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗುತ್ತದೆ. ಚಿಯರ್ ಗರ್ಲ್ಸ್ ಜೊತೆಗೆ ವಿವಿಧ ಚಿತ್ರರಂಗದ ನಟಿಮಣಿಯರು ಹಾಗೂ ಸ್ಟಾರ್ ಆ್ಯಂಕರ್ಸ್ಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತದೆ. ಆದರೆ ಕೊರೊನಾ ವೈರಸ್ನಿಂದಾಗಿ ಕಳೆದೆರಡು ಸೀಸನ್ನಲ್ಲಿ ಈ ಬಗ್ಗೆ ಹೆಚ್ಚಿನ ಗಮನಹರಿಸಿರಲಿಲ್ಲ. ಇದೀಗ ದುಬೈನಲ್ಲಿ ಪುನಾರಂಭಗೊಂಡಿರುವ ಐಪಿಎಲ್ನಲ್ಲಿ ಸುರಸುಂದರಿಯರ ತಳಕು ಬಳುಕಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ.
ಇವರಿಗೆಲ್ಲಾ ಚುಟುಕು ಕ್ರಿಕೆಟ್‌ನಲ್ಲಿ ಮಿಂಚುವ ಅವಕಾಶ:

- ತಾನ್ಯಾ ಪುರೋಹಿತ್
ತಾನ್ಯಾ ಪುರೋಹಿತ್ ಬಾಲಿವುಡ್ ಸ್ಟಾರ್ ನಟಿ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ನಟನೆಯ NH10 ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ ದುಬೈನಲ್ಲಿ ಆಯೋಜನೆಗೊಂಡಿರುವ ಐಪಿಎಲ್ನಲ್ಲಿ ಹಿಂದಿ ಆ್ಯಂಕರ್ ಆಗಿ ಕೆಲಸ ಮಾಡ್ತಿದ್ದಾರೆ.

- ಕೀರಾ ನಾರಾಯಣ್
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಕ್ರಿಕೆಟ್ ಲೈವ್ ಆಂಕರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೀರಾ ನಾರಾಯಣ್ ಅವರಿಗೆ IPLನಲ್ಲಿ ಛಾನ್ಸ್ ಸಿಕ್ಕಿದೆ. ಹಿಂದಿ ಚಿತ್ರವೊಂದರಲ್ಲಿ ನಟಿಸಿರುವ ಕೀರಾ, ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್‌ನಲ್ಲಿ ಆ್ಯಂಕರ್ ಆಗಿದ್ದಾರೆ.

- ಮಧು ಮಲಂಕೋಡಿ
ಮಧು ಮಲಂಕೋಡಿ ಕೂಡ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ನಿರೂಪಕಿ. ಮೂಲತಃ ತಮಿಳುನಾಡಿನವರಾದ ಇವರು, ಇತ್ತೀಚೆಗೆ ಕಾಲಿವುಡ್ನ ಬ್ಲಾಕ್ಬಸ್ಟರ್ 'ಮೂಕುತಿ ಅಮ್ಮನ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

- ರೀನಾ ಡಿ ಸೋಜಾ
ರೀನಾ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ನಿರೂಪಕಿ. 2016ರಲ್ಲಿ Mrs. Earth ಆಗಿ ಹೊರಹೊಮ್ಮಿರುವ ಅವರು ಯೂಟ್ಯೂಬರ್ ಆಗಿ ಕೆಲಸ ಮಾಡ್ತಿದ್ದು, ದುಬೈನಲ್ಲಿನ ಐಪಿಎಲ್ನಲ್ಲಿ ಆ್ಯಂಕರ್ ಆಗಿದ್ದಾರೆ.

- ಸಂಜನಾ ಗಣೇಶನ್
ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿಯಾಗಿರುವ ಸಂಜನಾ, ಈ ಹಿಂದಿನಿಂದಲೂ ಐಪಿಎಲ್, ಕ್ರಿಕೆಟ್ ಪಂದ್ಯಗಳ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯಲ್ಲೂ ಇವರು ಆ್ಯಂಕರಿಂಗ್ ಮಾಡ್ತಾರೆ.