ETV Bharat / sports

ಗೆಲುವಿನಲ್ಲೂ ಲೋಪಗಳಿರುತ್ತವೆ, ಅವುಗಳನ್ನು ಅರಿತರೆ ಯಶಸ್ಸಿಗೆ ದಾರಿ ಆಗುತ್ತದೆ: ಸೂರ್ಯಕುಮಾರ್​ - ETV Bharath Kannada news

ಪಂದ್ಯದ ಗೆಲುವಿನ ನಂತರ ಮಾತನಾಡಿದ ನಾಯಕ ಸೂರ್ಯಕುಮಾರ್​ ಯಾದವ್​ ಸ್ಪಿನ್ನರ್​ಗಳ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Suryakumar Yadav
Suryakumar Yadav
author img

By ETV Bharat Karnataka Team

Published : Dec 4, 2023, 6:24 PM IST

ಬೆಂಗಳೂರು: ಟಿ20ಯನ್ನು ಬ್ಯಾಟರ್​​ಗಳ ಗೇಮ್​ ಎಂದು ಕರೆಯುತ್ತಾರೆ. ಆದರೆ ನಾನು ಟಿ20ಯಲ್ಲಿ ಸರಣಿ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವವರು ಬೌಲರ್​ಗಳು ಎನ್ನುತ್ತೇನೆ. ಬ್ಯಾಟರ್​​ ಒಂದು ಪಂದ್ಯವನ್ನು ಗೆಲ್ಲಿಸಬಲ್ಲ ಅಷ್ಟೇ. ಆದರೆ ಬೌಲರ್​ ಸರಣಿ ಶ್ರೇಷ್ಠ ಆಗುತ್ತಾನೆ ಎಂದು ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯವನ್ನು ಗೆದ್ದ ನಂತರ ಬಿಸಿಸಿಐ ಟಿವಿಯಲ್ಲಿ ಮಾತನಾಡಿದ ಅವರು, "ತಂಡ ಗೆದ್ದಾಗ ಸಂಭ್ರಮಿಸುತ್ತೇವೆ, ಆದರೆ ಗೆಲುವಿನ ಒಳಗೂ ಕೆಲವು ಲೋಪಗಳಿರುತ್ತವೆ. ಅವನ್ನು ಗಮನಿಸಿ ಮುಂದಿನ ಪಂದ್ಯಕ್ಕೆ ತಿದ್ದಿಕೊಳ್ಳುವ ಅಗತ್ಯ ಇದೆ" ಎಂದಿದ್ದಾರೆ.

ಜೀವನಕ್ಕೆ ಹೊಸ ಆಯಾಮ: "ಸರಣಿ ಗೆದ್ದಿರುವುದು ಸಂತಸ ತಂದಿದೆ. ಇದರಿಂದ ನನಗೆ ಹೊಸ ಪಟ್ಟ ಸಿಕ್ಕಿರುವುದು ಸಹ ಸಂತೋಷಕ್ಕೆ ಕಾರಣವಾಗಿದೆ. ನಾಯಕತ್ವದಿಂದ ಜೀವನದಲ್ಲಿ ಹೊಸ ಆಯಾಮ ಸಿಕ್ಕಿದಂತಾಗಿದೆ" ಎಂದು ಸೂರ್ಯ ನಗುತ್ತಾ ಹೇಳಿದ್ದಾರೆ.

"ಅರ್ಶದೀಪ್​ ಸಿಂಗ್​ ಅವರು ಲೀಗ್​ ಕ್ರಿಕೆಟ್​ನಲ್ಲಿ ಕಡೆಯ ಓವರ್​ಗಳನ್ನು ಮಾಡಿರುವುದನ್ನು ಗಮನಿಸಿದ್ದೆ, ಅದಕ್ಕಾಗಿಯೇ ಅವರಿಗೆ ಕೊನೆಯ ಓವರ್​ ಮೀಸಲಿಟ್ಟಿದ್ದೆ. ಕೊನೆಯ ಓವರ್​ನಲ್ಲಿ ಕಡಿಮೆ ರನ್​ಗಳು ಇದ್ದರೆ ಬೌಲಿಂಗ್​ ಮಾಡಬೇಕಾಗಬಹುದು ಎಂದು ಮೊದಲೇ ಹೇಳಿದ್ದೆ. ಕೇವಲ 3 ರನ್​ ಕೊಟ್ಟು ಅರ್ಶದೀಪ್​ ಜಯಕ್ಕೆ ಕಾರಣರಾದರು. ಸ್ಪಿನ್ನರ್​ಗಳಾದ ಅಕ್ಷರ್​ ಮತ್ತು ರವಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಕ್ಷರ್​​ ಪಟೇಲ್​ ಮೊದಲೆರಡು ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ರವಿ ಮೊದಲ ಪಂದ್ಯದಲ್ಲಿ ದುಬಾರಿ ಆದರೂ ನಂತರ ಕಮ್​ಬ್ಯಾಕ್​ ಮಾಡಿದರು".

"ಟಿ20ಯನ್ನು ಬ್ಯಾಟರ್​ಗಳ ಆಟ ಎಂದು ಕರೆಯುತ್ತಾರೆ, ಆದರೆ ಬ್ಯಾಟರ್​​ಗಳಿಗೆ ಒಂದು ಪಂದ್ಯವನ್ನು ಗೆಲ್ಲಿಸಲು ಮಾತ್ರ ಸಾಧ್ಯವಾಗುತ್ತದೆ. ಬೌಲರ್​ಗಳು ಸರಣಿಯನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ರವಿ ಬಿಷ್ಣೋಯ್​ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವುದನ್ನು ಉಲ್ಲೇಖಿಸಿ ಹೇಳಿದರು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಭಾರತ 6 ರನ್​ಗಳಿಂದ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಸರಣಿಯನ್ನು 4-1 ರಿಂದ ವಶಪಡಿಸಿಕೊಂಡಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​​ ಮಾಡಿದ ಭಾರತ ತಂಡ ಶ್ರೇಯಸ್​ ಅಯ್ಯರ್​​ ಅವರ ಅರ್ಧಶತಕದ ಬಲದಿಂದ 161 ರನ್​ಗಳ ಗುರಿ ನೀಡಿತ್ತು. ಇದನ್ನು ಬೆನ್ನತ್ತಿದ ಆಸೀಸ್​ ತಂಡದಲ್ಲಿ ಬೆನ್ ಮೆಕ್‌ಡರ್ಮಾಟ್ (54) ಅರ್ಧಶತಕ ಗಳಿಸಿದರೂ 20 ಓವರ್​​ ಅಂತ್ಯಕ್ಕೆ 8 ವಿಕೆಟ್​ ನಷ್ಟಕ್ಕೆ 154 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಭಾರತ ಪಂದ್ಯವನ್ನು 6 ರನ್​ಗಳಿಂದ ಜಯಿಸಿತು.

ಇದನ್ನೂ ಓದಿ: ಆಸೀಸ್​ ಸರಣಿಯಲ್ಲಿ ಟಿ20 ವಿಶ್ವಕಪ್​ ಕದತಟ್ಟಿದ ಮೂವರು ಆಟಗಾರರಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.