ನವದೆಹಲಿ: ಮೊಣಕಾಲಿನ ಗಾಯಕ್ಕೀಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬರುವ ಬಾಂಗ್ಲಾದೇಶದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಜಡೇಜಾ ಸಂಪೂರ್ಣ ಫಿಟ್ ಆಗದೇ ಇದ್ದಲ್ಲಿ ಟಿ20 ನಂ.1 ದಾಂಡಿಗ ಸೂರ್ಯಕುಮಾರ್ ಯಾದವ್ ಸ್ಥಾನ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.
ರವೀಂದ್ರ ಜಡೇಜಾ ಬಾಂಗ್ಲಾ ಟೆಸ್ಟ್ ಸರಣಿಗೂ ಮೊದಲು ಬೆಂಗಳೂರಿನ ಎನ್ಸಿಎ ಶಿಬಿರದಲ್ಲಿ ಭಾಗಿಯಾಗಿ ಫಿಟ್ನೆಸ್ ಸಾಬೀತು ಮಾಡಬೇಕು. ಒಂದು ವೇಳೆ ನಪಾಸಾದಲ್ಲಿ ಸರಣಿಯಿಂದ ಹೊರಗುಳಿಯಲಿದ್ದು, ಅವರ ಜಾಗಕ್ಕೆ ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.
4ನೇ ಸ್ಪಿನ್ನರ್ಗೆ ಸಿಗುತ್ತಾ ಅವಕಾಶ: ಸ್ಪಿನ್ ಆಲ್ರೌಂಡರ್ ಜಡೇಜಾ ಸ್ಥಾನದಲ್ಲಿ ಮತ್ತೊಬ್ಬ ಸ್ಪಿನ್ನರ್ ಕಣಕ್ಕಿಳಿಸಿದಲ್ಲಿ ಭಾರತ - ಎ- ತಂಡದ ಮಾಂತ್ರಿಕ ಸೌರಭ್ ಕುಮಾರ್ ಅವಕಾಶ ಪಡೆಯಬಹುದು. ಸೌರಭ್ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.
ತಂಡದಲ್ಲಿ ಈಗಾಗಲೇ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಂತಹ ಸ್ಪಿನ್ನರ್‌ಗಳಿದ್ದಾರೆ. ನಾಲ್ಕನೇ ಸ್ಪಿನ್ನರ್ ಆಗಿ ಸೌರಭ್ ಕುಮಾರ್ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಡಿಸೆಂಬರ್ 14 ರಿಂದ 18 ರವರೆಗೆ ಚಿತ್ತಗಾಂಗ್‌ನಲ್ಲಿ ಏಕೈಕ ಟೆಸ್ಟ್ ನಡೆಯಲಿದ್ದು, ಬಳಿಕ 22 ರಿಂದ 26 ರ ನಡುವೆ ಮೀರ್‌ಪುರ ಮೈದಾನದಲ್ಲಿ ಏಕದಿನ ಸರಣಿ ನಡೆಯಲಿದೆ.
ಓದಿ: ಟಿ20 ರ‍್ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಟಾಪ್.. ಏಕದಿನ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿಗೆ ಆರನೇ ಸ್ಥಾನ