ಕೋಲ್ಕತ್ತಾ: ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಪ್ರವಾಸಿ ವೆಸ್ಟ್ ಇಂಡೀಸ್ಗೆ 185 ರನ್ಗಳ ಗುರಿ ನೀಡಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತ ತಂಡ ಆರಂಭಿಕ ಆಘಾತದ ನಡುವೆಯೂ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 1 ಬೌಂಡರಿ ಮತ್ತು 7 ಸಿಕ್ಸರ್ಗಳ ಸಹಿತ 65 ರನ್ಗಳಿಸಿದರೆ, ಇವರಿಗೆ ಸಾಥ್ ನೀಡಿದ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 35 ರನ್ಗಳಿಸಿದರು. 13.5 ಓವರ್ಗಳಲ್ಲಿ 93ಕ್ಕೆ4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಈ ಜೋಡಿ 37 ಎಸೆತಗಳಲ್ಲಿ 91ರನ್ ಸೂರೆಗೈದು ಬೃಹತ್ ಮೊತ್ತಕ್ಕೆ ಕಾರಣರಾದರು.
-
Innings Break!
— BCCI (@BCCI) February 20, 2022 " class="align-text-top noRightClick twitterSection" data="
A 37-ball 91-run stand between @surya_14kumar (65) and Venkatesh Iyer 35* powers #TeamIndia to 184/5. 💪 💪
Over to our bowlers now. 👍 👍 #INDvWI | @Paytm Scorecard ▶️ https://t.co/2nbPwMZwOW pic.twitter.com/1QbTNAk0V5
">Innings Break!
— BCCI (@BCCI) February 20, 2022
A 37-ball 91-run stand between @surya_14kumar (65) and Venkatesh Iyer 35* powers #TeamIndia to 184/5. 💪 💪
Over to our bowlers now. 👍 👍 #INDvWI | @Paytm Scorecard ▶️ https://t.co/2nbPwMZwOW pic.twitter.com/1QbTNAk0V5Innings Break!
— BCCI (@BCCI) February 20, 2022
A 37-ball 91-run stand between @surya_14kumar (65) and Venkatesh Iyer 35* powers #TeamIndia to 184/5. 💪 💪
Over to our bowlers now. 👍 👍 #INDvWI | @Paytm Scorecard ▶️ https://t.co/2nbPwMZwOW pic.twitter.com/1QbTNAk0V5
ಸರಣಿಯಲ್ಲಿ 3ನೇ ಬಾರಿ ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ 31 ಎಸೆತಗಳಲ್ಲಿ 34 ರನ್ ಮತ್ತು ಸರಣಿಯಲ್ಲಿ ಮೊದಲ ಅವಕಾಶ ಪಡೆದಿದ್ದ ರುತುರಾಜ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿ ವೈಫಲ್ಯ ಅನುಭವಿಸಿದರು.
3ನೇ ಕ್ರಮಾಂಕಕ್ಕೆ ಬಡ್ತಿಪಡೆದು ಬಂದ ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 25, 4ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದ ರೋಹಿತ್ ಶರ್ಮಾ 15 ಎಸೆತಗಳಲ್ಲಿ 7 ರನ್ಗಳಿಸಿ ಔಟಾದರು.
ವಿಂಡೀಸ್ ಪರ ಜೇಸನ್ ಹೋಲ್ಡರ್, ರಾಸ್ಟನ್ ಚೇಸ್, ಡೊಮೆನಿಕ್ ಡ್ರೇಕ್ಸ್ ಹೇಡನ್ ವಾಲ್ಶ್ ಮತ್ತು ರೊಮಾರಿಯೋ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಭಾರತ ತಂಡದಿಂದ ಕೈಬಿಟ್ಟ ಮಾರನೇ ದಿನವೇ 83 ಎಸೆತಗಳಲ್ಲಿ 91 ರನ್ ಸಿಡಿಸಿದ ಪೂಜಾರ