ಅಹ್ಮದಾಬಾದ್: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 44 ರನ್ಗಳಿಂದ ಗೆಲ್ಲುವ ಮೂಲಕ ಒಂದು ಪಂದ್ಯ ಉಳಿದಿರುವಂತೆ 2-0ಯಲ್ಲಿ ಸರಣಿ ಜಯಿಸಿದೆ. ರೋಹಿತ್ ಶರ್ಮಾ ಅಧಿಕೃತ ನಾಯಕನಾಗಿ ಗೆದ್ದ ಮೊದಲ ಏಕದಿನ ಸರಣಿ ಇದಾಗಿದೆ.
-
#TeamIndia win the second @Paytm #INDvWI ODI & take an unassailable lead in the series. 👏 👏
— BCCI (@BCCI) February 9, 2022 " class="align-text-top noRightClick twitterSection" data="
4⃣ wickets for @prasidh43
2⃣ wickets for @imShard
1⃣ wicket each for @mdsirajofficial, @yuzi_chahal, @Sundarwashi5 & @HoodaOnFire
Scorecard ▶️ https://t.co/yqSjTw302p pic.twitter.com/bPb1ca9H7P
">#TeamIndia win the second @Paytm #INDvWI ODI & take an unassailable lead in the series. 👏 👏
— BCCI (@BCCI) February 9, 2022
4⃣ wickets for @prasidh43
2⃣ wickets for @imShard
1⃣ wicket each for @mdsirajofficial, @yuzi_chahal, @Sundarwashi5 & @HoodaOnFire
Scorecard ▶️ https://t.co/yqSjTw302p pic.twitter.com/bPb1ca9H7P#TeamIndia win the second @Paytm #INDvWI ODI & take an unassailable lead in the series. 👏 👏
— BCCI (@BCCI) February 9, 2022
4⃣ wickets for @prasidh43
2⃣ wickets for @imShard
1⃣ wicket each for @mdsirajofficial, @yuzi_chahal, @Sundarwashi5 & @HoodaOnFire
Scorecard ▶️ https://t.co/yqSjTw302p pic.twitter.com/bPb1ca9H7P
ಸೂರ್ಯಕುಮಾರ್ ಯಾದವ್(64) ಅರ್ಧಶತಕ ಮತ್ತು ಕೆಎಲ್ ರಾಹುಲ್ ಅವರ 49 ರನ್ಗಳ ನೆರವಿನಿಂದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 9 ವಿಕೆಟ್ ಕಳೆದುಕೊಂಡು 237 ರನ್ಗಳಿಸಿತ್ತು.
238 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅನಾನುಭವಿ ವಿಂಡೀಸ್ ತಂಡ 46 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 193ರನ್ಗಳಿಗೆ ಆಲೌಟ್ ಆಗಿ ಸರಣಿ ಕೈಚೆಲ್ಲಿದೆ. ವೆಸ್ಟ್ ಇಂಡೀಸ್ ಮೊದಲ ವಿಕೆಟ್ಗೆ 30 ರನ್ಗಳ ಜೊತೆಯಾಟ ನೀಡಿದರೂ ನಂತರ ದಿಢೀರ್ ಕುಸಿತಕ್ಕೆ ಒಳಗಾಯಿತು. 32ಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದ ಕೆರಿಬಿಯನ್ನರು 76 ರನ್ಗಳಾಗುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು.
ಕನ್ನಡಿಗ ಪ್ರಸಿಧ್, ಬ್ರೆಂಡನ್ ಕಿಂಗ್(18), ಡರೇನ್ ಬ್ರಾವೋ(1) ನಿಕೋಲಸ್ ಪೂರನ್(9) ವಿಕೆಟ್ ಪಡೆದರು. 27 ರನ್ಗಳಿಸಿದ್ದ ಹೋಪ್ರನ್ನು ಚಹಲ್ ಕಳೆದ ಪಂದ್ಯದ ಅರ್ಧಶತಕ ವೀರ ಜೇಸನ್ ಹೋಲ್ಡರ್ರನ್ನು ಶಾರ್ದೂಲ್ ಠಾಕೂರ್ ಪೆವಿಲಿಯನ್ಗಟ್ಟಿದರು.
ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ವಿಂಡೀಸ್ಗೆ ಅಕೀಲ್ ಹೊಸೇನ್(34), ಅಲೆನ್(11) ಒಡಿಯನ್ ಸ್ಮಿತ್(24) ಸ್ವಲ್ಪ ಹೊತ್ತು ಭಾರತದ ಗೆಲುವಿಗೆ ಅಡ್ಡಿಯಾದರು. ಆದರೆ, ಠಾಕೂರ್ ಹೊಸೇನ್ ವಿಕೆಟ್ ಪಡೆದು ಬ್ರೇಕ್ ನೀಡಿದರೆ, ಅಪಾಯಕಾರಿ ಸ್ಮಿತ್ ವಿಕೆಟ್ ಪಡೆದು ಸುಂದರ್ ಭಾರತಕ್ಕೆ ಗೆಲುವು ಖಚಿಪಡಿಸಿದರು.
ವಿಂಡೀಸ್ ಬ್ಯಾಟರ್ಗಳ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಪ್ರಸಿಧ್ ಕೃಷ್ಣ 9 ಓವರ್ಗಳಲ್ಲಿ 12 ರನ್ ನೀಡಿ 4 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 41ಕ್ಕೆ 2, ಸಿರಾಜ್ 38ಕ್ಕೆ1, ಚಹಲ್ 45ಕ್ಕೆ1, ವಾಷಿಂಗ್ಟನ್ ಸುಂದರ್ 28ಕ್ಕೆ1, ದೀಪಕ್ ಹೂಡ 24ಕ್ಕೆ1 ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತ ತಂಡ ಕೇವಲ 43 ರನ್ಗಳಿಸುವಷ್ಟರಲ್ಲಿ ನಾಯಕ ರೋಹಿತ್ ಶರ್ಮಾ(5), ರಿಷಭ್ಪಂತ್ (18) ಮತ್ತು ವಿರಾಟ್ ಕೊಹ್ಲಿ(18) ರನ್ಗಳಿಸಿ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು.
ಆದರೆ, ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದಾದ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 4ನೇ ವಿಕೆಟ್ ಜೊತೆಯಾಟದಲ್ಲಿ 91 ರನ್ಗಳ ಜೊತೆಯಾಟ ನೀಡಿದರು. 48 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 49 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಹುಲ್ 2 ರನ್ ಕದಿಯುವ ಯತ್ನದಲ್ಲಿ ರನ್ಔಟ್ ಆದರು.
ರಾಹುಲ್ ವಿಕೆಟ್ ಪತನದೊಂದಿಗೆ ಭಾರತದ ಬೃಹತ್ ಮೊತ್ತದ ಕನಸು ಕೂಡ ನುಚ್ಚುನೂರಾಯಿತು. ಸೂರ್ಯಕುಮಾರ್ ಯಾದವ್ 83 ಎಸೆತಗಳಲ್ಲಿ 5 ಬೌಂಡರಿ ಸಹಿತ 64, ವಾಷಿಂಗ್ಟನ್ ಸುಂದರ್ 41 ಎಸೆತಗಳಲ್ಲಿ 24 , ದೀಪಕ್ ಹೂಡ 25 ಎಸೆತಗಳಲ್ಲಿ 29, ಚಹಲ್ ಅಜೇಯ 11 ರನ್ಗಳಿಸಿದರು.
ವಿಂಡೀಸ್ ಪರ ಅಲ್ಜಾರಿ ಜೋಶಫ್ 36ಕ್ಕೆ2, ಒಡೆನ್ ಸ್ಮಿತ್ 29ಕ್ಕೆ 2, ಕೆಮರ್ ರೋಚ್, ಅಲೆನ್, ಹೋಲ್ಡರ್ ಮತ್ತು ಹೊಸೇನ್ ತಲಾ ಒಂದು ವಿಕೆಟ್ ಪಡೆದು ಭಾರತವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು.
ಇದನ್ನೂ ಓದಿ:ಭಾರತ ತಂಡದಲ್ಲಿ ಅವಕಾಶವಿಲ್ಲ ಎನ್ನುವುದು ಖಚಿತ, ರಣಜಿಯಿಂದ ಒಬ್ಬಬ್ಬರಾಗಿ ಹೊರ ಬರುತ್ತಿರುವ ಸ್ಟಾರ್ ಕ್ರಿಕೆಟಿಗರು!