ಮುಂಬೈ: ಐಪಿಎಲ್ ಪಂದ್ಯಾವಳಿಗಳಿಗೆ ಗಾಯದ ಸಮಸ್ಯೆ ಕಾಡುತ್ತಿದೆ. ಇದು, ಫ್ರಾಂಚೈಸಿಗಳಿಗೆ ತಲೆನೋವಾಗಿ ಕಾಡುತ್ತಿದೆ. ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ 16ನೇ ಆವೃತ್ತಿಯ ಐಪಿಎಲ್ನಿಂದ ಬಹುತೇಕ ದೂರ ಉಳಿಯುವ ಸಾಧ್ಯತೆ ಇದೆ. ಹೀಗಾಗಿ ಅವರ ಬದಲಿ ತಂಡ ಯಾರನ್ನು ಆಯ್ಕೆ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ಗೆ ತಂಡ ಸೇರಿದ್ದರು. ಆದರೆ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನ ಬೆಳಗ್ಗೆ ಬಿಸಿಸಿಐ ಅಯ್ಯರ್ಗೆ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿರುವ ಕಾರಣ ಸ್ಕ್ಯಾನಿಂಗ್ಗೆ ಕಳಿಸಿರುವುದಾಗಿ ತಿಳಿಸಿತ್ತು. ಆದರೆ ನಂತರ ಬ್ಯಾಟಿಂಗ್ ಅಯ್ಯರ್ ಬರಲೇ ಇಲ್ಲ. ಇದಾದ ನಂತರ ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯದ ಸರಣಿಯಲ್ಲಿ ಅಯ್ಯರ್ ಹೆಸರಿತ್ತಾದರೂ, ಅವರ ಬದಲಿ ಆಟಗಾರರನ್ನು ತಂಡ ಘೋಷಿಸಿರಲಿಲ್ಲ.
ಕೆಕೆಆರ್ ನಾಯಕತ್ವ ಯಾರಿಗೆ?: ಐಪಿಎಲ್ನ 2023ರ ಆವೃತ್ತಿಯ ಕೋಲ್ಕತ್ತಾ ನೈಟ್ ರೈಡರ್ಸ್‌ನ ನಾಯಕತ್ವ ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಭರ್ಜರಿ ಚರ್ಚೆಯಾಗುತ್ತಿದೆ. ಪತ್ರಿಕೆವೊಂದರ ವರದಿಯಂತೆ ನರೈನ್ ಮತ್ತು ಶಾರ್ದೂಲ್ ನಡುವೆ ಒಬ್ಬರಿಗೆ ನಾಯಕತ್ವ ನೀಡುವ ಸಾಧ್ಯತೆ ಇದೆ. ಯಾರು ಕೆಕೆಆರ್ ತಂಡವನ್ನು ಮುನ್ನಡೆಸುತ್ತಾರೆ ಎಂಬುದು ಮುಂದಿನ ಎರಡು ದಿನದಲ್ಲಿ ತಿಳಿಯಲಿದೆ. ಈ ಬಗ್ಗೆ ಪತ್ರಿಕೆಗೆ ಮೂಲಗಳು ತಿಳಿಸಿವೆ ಎಂದು ವರದಿ ಮಾಡಿದೆ.
ಕ್ಯಾಪ್ಟನ್ ರೇಸ್ನಲ್ಲಿ ಯಾರೆಲ್ಲಾ ಇದ್ದಾರೆ?: ಅಯ್ಯರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲು ತಂಡದಲ್ಲಿ ಅನುಭವಿಗಳಾದ ಆಂಡ್ರೆ ರಸೆಲ್, ಸುನಿಲ್ ನರೈನ್, ಶಕೀಬ್ ಅಲ್ ಹಸನ್ ಇದ್ದಾರೆ. ಅವರಲ್ಲದೇ ಈಗ ಶಾರ್ದೂಲ್ ಠಾಕೂರ್ ಹೆಸರು ಕೇಳಿಬರುತ್ತಿದೆ. 2012ರಲ್ಲ ಕೆಕೆಆರ್ಗೆ ಸೇರಿದಾಗಿನಿಂದ ಆಲ್ರೌಂಡರ್ ಸ್ಥಾನ ವಹಿಸಿಕೊಂಡು ಬ್ಯಾಟಿಂಗ್ ಮತ್ತು ಬೌಲಿಂಗ್ನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಇವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಮಾರ್ಚ್ 30ರಂದು ಅಹಮದಾಬಾದ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ತಂಡದ ನಾಯಕರು ಪಾಲ್ಗೊಳ್ಳಬೇಕಾದ್ದರಿಂದ ಅದಕ್ಕೂ ಮೊದಲು ಕ್ಯಾಪ್ಟನ್ ಯಾರೆಂದು ಘೋಷಿಸಬೇಕಾಗುತ್ತದೆ. ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ಏಪ್ರಿಲ್ 1 ರಂದು ಆಡಲಿದೆ.
ಇತ್ತೀಚೆಗೆ ಯುಎಐನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20ಯ ಉದ್ಘಾಟನಾ ಆವೃತ್ತಿಯ ಅಬುಧಾಬಿ ನೈಟ್ ರೈಡರ್ಸ್‌ನ ನಾಯಕತ್ವವನ್ನು ಸುನಿಲ್ ನರೈನ್ಗೆ ನೀಡಲಾಗಿತ್ತು. ಆದರೆ ಈ ಲೀಗ್ನ ಪಂದ್ಯಾವಳಿಯಲ್ಲಿ ಅಬುಧಾಬಿ ನೈಟ್ ರೈಡರ್ಸ್ ಒಂದು ಗೆಲುವು ಮಾತ್ರ ಕಂಡಿತು. ಅಲ್ಲಿ ತಂಡದ ನಾಯಕತ್ವ ನರೈನ್ಗೆ ನೀಡಲಾಗಿತ್ತು. ಅಲ್ಲಿ ಕಳಪೆಯಾಗಿ ತಂಡ ಮುನ್ನಡೆಸಿದ್ದರಿಂದ ಇಲ್ಲಿ, ಅವರಿಗೆ ನಾಯಕತ್ವ ನೀಡಲು ಋಣಾತ್ಮಕ ಅಂಕ ಬರುವ ಸಾಧ್ಯತೆ ಇದೆ.
ಕೆಕೆಆರ್ ತಂಡ: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕ್ ರೋಡೆ ನಾ, ಅನುಕ್ ರೋಡೆ ನಾ, ವೈಭವ್ ಅರೋರಾ, ಸುಯಾಶ್ ಶರ್ಮಾ, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಮನ್ದೀಪ್ ಸಿಂಗ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್.
ಇದನ್ನೂ ಓದಿ: IPL 2023: ನೂತನ ಜೆರ್ಸಿಯಲ್ಲಿ ಮಿಂಚಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು