ಅಹಮದಾಬಾದ್ (ಗುಜರಾತ್): ಭಾರತ ವಿರುದ್ಧದ ಅಂತಿಮ ಬಾರ್ಡರ್ ಗವಾಸ್ಕರ್ ಟೆಸ್ಟ್‌ಗೆ ಸ್ಟ್ಯಾಂಡ್ - ಇನ್ ನಾಯಕ ಸ್ಟೀವ್ ಸ್ಮಿತ್ ತಂಡದ ನಾಯಕತ್ವವನ್ನು ಮುಂದುವರೆಸುತ್ತಾರೆ ಎಂದು ಆಸ್ಟ್ರೇಲಿಯಾ ದೃಢಪಡಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇದೇ 9 ರಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್ನಲ್ಲಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೆ ಏರಿದೆ. ನಾಲ್ಕನೇ ಪಂದ್ಯದಲ್ಲಿ ಭಾರತ ಗೆದ್ದಲ್ಲಿ ಭಾರತದ ಪ್ರವೇಶವೂ ದೃಢವಾಗಲಿದೆ.
-
Steve Smith is set to continue as captain for the final #INDvAUS Test in the absence of Pat Cummins 👇#WTC23
— ICC (@ICC) March 6, 2023 " class="align-text-top noRightClick twitterSection" data="
">Steve Smith is set to continue as captain for the final #INDvAUS Test in the absence of Pat Cummins 👇#WTC23
— ICC (@ICC) March 6, 2023Steve Smith is set to continue as captain for the final #INDvAUS Test in the absence of Pat Cummins 👇#WTC23
— ICC (@ICC) March 6, 2023
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಂತರ ಪ್ಯಾಟ್ ಕಮಿನ್ಸ್ ಸ್ವದೇಶಕ್ಕೆ ಹಿಂದಿರುಗಿದ ನಂತರ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ನಾಯಕರಾಗಿ ನಿಯುಕ್ತರಾದರು. ಸ್ತನ ಕ್ಯಾನ್ಸರ್‌ನಿಂದಾಗಿ ಬಳಲುತ್ತಿರುವ ತಾಯಿ ಆರೈಕೆ ಸಂಬಂಧ ನಾಯಕ ಪ್ಯಾಟ್ ಕಮಿನ್ಸ್ ಸಿಡ್ನಿಯಲ್ಲಿರುವ ಮನೆಗೆ ತೆರಳಿದ್ದರು. ಮೂರನೆ ಟೆಸ್ಟ್ ಆರಂಭಕ್ಕೆ 9 ದಿನಗಳ ಅಂತರ ಇದ್ದ ಕಾರಣ ಮರಳಿ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಸಂಕಷ್ಟದ ಸಮಯದಲ್ಲಿ ಕುಟುಂಬದೊಂದಿಗೆ ಕಳೆಯುವುದಾಗಿ ಹೇಳಿ ಕಮಿನ್ಸ್ ತಂಡ ಸೇರದೇ ಹೊರಗುಳಿದರು. ನಾಲ್ಕನೇ ಪಂದ್ಯಕ್ಕೂ ಭಾರತ್ಕಕೆ ಹಿಂತಿರುಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ನ ನಾಯಕತ್ವವನ್ನು ಸ್ಮಿತ್ ವಹಿಸಿದ್ದರು. ಭಾರತ ಪ್ರವಾಸದಲ್ಲಿರುವ ಭಾರತ ಮೂರನೇ ಟೆಸ್ಟ್ನಲ್ಲಿ 9 ವಿಕೆಟ್ಗಳ ಜಯ ಸಾಧಿಸಿತ್ತು. ನಾಥನ್ ಲಿಯಾನ್ ಎರಡು ಇನ್ನಿಂಗ್ಸ್ನಿಂದ 10 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ಈ ಪಂದ್ಯದ ಗೆಲುವು ಆಸಿಸ್ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆರಿಸಿತು.
ಆಸ್ಟ್ರೇಲಿಯಾವು ಜೂನ್ 7 ರಂದು ಓವಲ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021-23ಕ್ಕೆ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಫೈನಲ್ ತಲುಪಲು ಭಾರತ ಮತ್ತು ಶ್ರೀಲಂಕಾ ನಡುವೆ ಸ್ಪರ್ಧೆ ಇದೆ. ನಾಲ್ಕನೇ ಟೆಸ್ಟ್ನಲ್ಲಿ ಭಾರತ ಗೆಲುವು ಸಾಧಿಸಿದರೆ ಫೈನಲ್ ಪಕ್ಕಾ ಆಗಲಿದೆ. ಇಲ್ಲದಿದ್ದಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ನಡುವಣ ಎರಡು ಟೆಸ್ಟ್ ಪಂದ್ಯದ ಫಲಿತಾಂಶಕ್ಕಾಗಿ ಭಾರತ ಕಾಯಬೇಕಿದೆ. ಶ್ರೀಲಂಕಾ ಕಿವೀಸ್ ಪಡೆಯನ್ನು 2-0 ಯಿಂದ ಕ್ಲೀನ್ ಸ್ವೀಪ್ ಮಾಡಿದರೆ ಸಿಂಹಳೀಯರು ಅಂತಿಮ ಹಣಾಹಣಿಯಲ್ಲಿ ಆಡಲಿದೆ.
ಏಕದಿನ ಸರಣಿಗೂ ಕಮಿನ್ಸ್ ಆಗಮನ ಡೌಟ್: ಆಸ್ಟ್ರೇಲಿಯಾದ ಎದುರು ಭಾರತಕ್ಕೆ ಮಾರ್ಚ್ 17, 19 ಮತ್ತು 22ಕ್ಕೆ ಮೂರು ಏಕದಿನ ಪಂದ್ಯದ ಸರಣಿ ಇದ್ದು, ಇದಕ್ಕೆ ಸಹ ಕಮಿನ್ಸ್ ಬರುವುದು ಅನುಮಾನ ಇದೆ. ಆದರೆ, ಈ ಬಗ್ಗ ಕ್ರಿಕೆಟ್ ಆಸ್ಟ್ರೇಲಿಯಾ ಯಾವುದೇ ಮಾಹಿತಿ ನೀಡಿಲ್ಲವಾದರೂ ತಾಯಿಯ ಅನಾರೋಗ್ಯದ ಹಿನ್ನೆಲೆ ಅವರು ಉಪಸ್ಥಿತಿ ಕುಟುಂಬದೊಂದಿಗೆ ಹೆಚ್ಚು ಅಗತ್ಯ ಇದೆ. ಆ್ಯರನ್ ಪಿಂಚ್ ಅವರು ರಾಜೀನಾಮೆ ನೀಡಿದ ನಂತರ ಏಕದಿನಕ್ಕೆ ಕಮಿನ್ಸ್ ಅವರಿಗೆ ನಾಯಕತ್ವವನ್ನು ನೀಡಲಾಗಿತ್ತು.
ಏಕದಿನ ತಂಡದಲ್ಲಿ ಆಸಿಸ್ ಒಂದು ಬದಲಾವಣೆ ಮಾಡಿದ್ದು, ಗಾಯಗೊಂಡಿರುವ ಝೈ ರಿಚರ್ಡ್‌ಸನ್ ಬದಲಿಯಾಗಿ ನಾಥನ್ ಎಲ್ಲಿಸ್ ಬಂದಿದ್ದಾರೆ. ರಿಚರ್ಡ್ಸನ್ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಆಡುವಾಗ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಅವರ ಚೇತರಿಕೆಗೆ ಸಮಯ ಬೇಕಾಗಿದ್ದರಿಂದ ಬದಲಿ ಆಟಗಾರನನ್ನು ಘೋಷಿಸಿದ್ದಾರೆ. ರಿಚರ್ಡ್ಸನ್ ಮಂಡಿ ನೋವಿನ ಕಾರಣ ಬಿಗ್ ಬ್ಯಾಷ್ ಲೀಗ್ನ ಅರ್ಧದಿಂದ ಹೊರಗುಳಿದಿದ್ದರು.
ಭಾರತ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ , ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.
ಇದನ್ನೂ ಓದಿ: ಶೇಷ ಭಾರತಕ್ಕೆ ಇರಾನಿ ಕಪ್: ಪದಾರ್ಪಣೆ ಪಂದ್ಯದಲ್ಲೇ "ಜಯ"ಸ್ವಾಲ್ ಸಾಧನೆ