ಲಂಡನ್: ಇಲ್ಲಿನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಸ್ಟೀವ್ ಸ್ಮಿತ್ ಭರ್ಜರಿ ಶತಕ ಸಿಡಿಸಿದರು. ಇದು ಡ್ಯಾಶಿಂಗ್ ಬ್ಯಾಟರ್ ಸ್ಮಿತ್ 32ನೇ ಟೆಸ್ಟ್ ಶತಕವಾಗಿದ್ದು, ಇದರೊಂದಿಗೆ ಹಲವು ದಾಖಲೆಗಳನ್ನೂ ಅವರು ನಿರ್ಮಿಸಿದ್ದಾರೆ.
-
History - Steve Smith is the fastest to complete 32 Hundreds in Test cricket in terms of innings. pic.twitter.com/z5qMNszSD6
— Johns. (@CricCrazyJohns) June 29, 2023 " class="align-text-top noRightClick twitterSection" data="
">History - Steve Smith is the fastest to complete 32 Hundreds in Test cricket in terms of innings. pic.twitter.com/z5qMNszSD6
— Johns. (@CricCrazyJohns) June 29, 2023History - Steve Smith is the fastest to complete 32 Hundreds in Test cricket in terms of innings. pic.twitter.com/z5qMNszSD6
— Johns. (@CricCrazyJohns) June 29, 2023
ಎರಡನೇ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೆ 85 ರನ್ ಗಳಿಸಿದ್ದ ಸ್ಮಿತ್, ಇಂದು 169 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ 32ನೇ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ 32 ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಟೆಸ್ಟ್ ಸ್ಪೆಷಲಿಸ್ಟ್ ಪಾತ್ರರಾದರು. ತಮ್ಮ ಕ್ರಿಕೆಟ್ ವೃತ್ತಿಬದುಕಿನ 99ನೇ ಟೆಸ್ಟ್‌ನ 174ನೇ ಇನ್ನಿಂಗ್ಸ್‌ನಲ್ಲಿ ಸ್ಮಿತ್ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಪರ 32 ಟೆಸ್ಟ್ ಶತಕಗಳನ್ನು ಬಾರಿಸಿದ ಸ್ಟೀವ್ ವಾ ಅವರ ದಾಖಲೆಯನ್ನೂ ಸ್ಮಿತ್ ಸರಿಗಟ್ಟಿದ್ದಾರೆ. ಮಾಜಿ ನಾಯಕ ರಿಕಿ ಪಾಂಟಿಂಗ್ ಟೆಸ್ಟ್ನಲ್ಲಿ 41 ಶತಕಗಳನ್ನು ಸಿಡಿಸಿದ ಆಸೀಸ್ ತಂಡದ ಸರ್ವಶ್ರೇಷ್ಠ ಆಟಗಾರರಾಗಿದ್ದಾರೆ.
-
Most international hundreds among active players:
— Johns. (@CricCrazyJohns) June 29, 2023 " class="align-text-top noRightClick twitterSection" data="
Virat Kohli - 75
Joe Root - 46
David Warner - 45
Steven Smith - 44*
Rohit Sharma - 43 pic.twitter.com/55lD36yzy2
">Most international hundreds among active players:
— Johns. (@CricCrazyJohns) June 29, 2023
Virat Kohli - 75
Joe Root - 46
David Warner - 45
Steven Smith - 44*
Rohit Sharma - 43 pic.twitter.com/55lD36yzy2Most international hundreds among active players:
— Johns. (@CricCrazyJohns) June 29, 2023
Virat Kohli - 75
Joe Root - 46
David Warner - 45
Steven Smith - 44*
Rohit Sharma - 43 pic.twitter.com/55lD36yzy2
ಆ್ಯಶಸ್ ಸರಣಿಯಲ್ಲಿ 12ನೇ ಸೆಂಚುರಿ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆ್ಯಶಸ್ನಲ್ಲಿ ಸ್ಮಿತ್ 12ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ನ ಜ್ಯಾಕ್ ಹಾಬ್ಸ್ ದಾಖಲೆ ಸರಿಗಟ್ಟಿದ್ದಾರೆ. ದಿಗ್ಗಜ ಆಟಗಾರ ಡಾನ್ ಬ್ರಾಡ್ಮನ್ ಆ್ಯಶಸ್ ಸರಣಿಯಲ್ಲಿ 19 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಜ್ಯಾಕ್ ಹಾಬ್ಸ್ ಹಾಗೂ ಸ್ಮಿತ್ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.
ಲಾರ್ಡ್ಸ್ ಟೆಸ್ಟ್- ಸ್ಮಿತ್ ಶತಕ ವೈಭವ: ಹತ್ತು ವರ್ಷಗಳ ಹಿಂದೆ ಅಂದರೆ 2013ರಲ್ಲಿ ಲಾರ್ಡ್ಸ್ನಲ್ಲಿ ಸ್ಮಿತ್ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಈಗ ಇದೇ ಮೈದಾನದಲ್ಲಿ 32ನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ಪರ ಒಂದಕ್ಕಿಂತ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ವಾರೆನ್ ಬಾರ್ಡ್ಸ್ಲೇ (1912, 1926), ಸರ್ ಡಾನ್ ಬ್ರಾಡ್ಮನ್ (1930, 1938) ಮತ್ತು ಬಿಲ್ ಬ್ರೌನ್ (1934, 1938) ಲಾಡ್ಸ್ನಲ್ಲಿ ಬಹು ಸೆಂಚುರಿ ಸಿಡಿಸಿದ ದಾಖಲೆ ಹೊಂದಿದ್ದಾರೆ.
-
Most Test hundreds in Fab 4:
— Johns. (@CricCrazyJohns) June 29, 2023 " class="align-text-top noRightClick twitterSection" data="
Smith - 32* (99 matches)
Root - 30 (132 matches)
Williamson - 28 (94 matches)
Kohli - 28 (109 matches)
THE GOAT - STEVE SMITH. pic.twitter.com/9vixkHJ0WT
">Most Test hundreds in Fab 4:
— Johns. (@CricCrazyJohns) June 29, 2023
Smith - 32* (99 matches)
Root - 30 (132 matches)
Williamson - 28 (94 matches)
Kohli - 28 (109 matches)
THE GOAT - STEVE SMITH. pic.twitter.com/9vixkHJ0WTMost Test hundreds in Fab 4:
— Johns. (@CricCrazyJohns) June 29, 2023
Smith - 32* (99 matches)
Root - 30 (132 matches)
Williamson - 28 (94 matches)
Kohli - 28 (109 matches)
THE GOAT - STEVE SMITH. pic.twitter.com/9vixkHJ0WT
ಶತಕದಲ್ಲಿ ರೋಹಿತ್ ಹಿಂದಿಕ್ಕಿದ ಸ್ಮಿತ್: ಅಲ್ಲದೇ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಆಸೀಸ್ ಸ್ಟಾರ್ ಬ್ಯಾಟರ್ ಸ್ಮಿತ್ ಹಿಂದಿಕ್ಕಿದ್ದಾರೆ. ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ ಒಟ್ಟಾರೆ ರೋಹಿತ್ ಶರ್ಮಾ 43 ಶತಕಗಳನ್ನು ಬಾರಿಸಿದ್ದಾರೆ. ಸ್ಮಿತ್ಗಿದು ಒಟ್ಟಾರೆ 44ನೇ ಶತಕವಾಗಿದೆ. ಈ ಮೂಲಕ ಹಾಲಿ ಕ್ರಿಕೆಟಿಗರಲ್ಲಿ ಅತಿಹೆಚ್ಚು ಶತಕ ಸಿಡಿಸಿದ ನಾಲ್ಕನೇ ಬ್ಯಾಟರ್ ಆಗಿದ್ದಾರೆ. 75 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ನಂತರದಲ್ಲಿ 46 ಶತಕಗಳೊಂದಿಗೆ ಜೋ ರೂಟ್, 45 ಸೆಂಚುರಿಗಳೊಂದಿಗೆ ಡೇವಿಡ್ ವಾರ್ನರ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ.
-
In 2010 - Steve Smith made his Test debut at Lord's & batted at 8.
— Johns. (@CricCrazyJohns) June 29, 2023 " class="align-text-top noRightClick twitterSection" data="
In 2023 - Steve Smith completed his 32nd Test hundred at Lord's.
One of the Greatest turn-arounds in cricket history. pic.twitter.com/UjjS9cc9Oy
">In 2010 - Steve Smith made his Test debut at Lord's & batted at 8.
— Johns. (@CricCrazyJohns) June 29, 2023
In 2023 - Steve Smith completed his 32nd Test hundred at Lord's.
One of the Greatest turn-arounds in cricket history. pic.twitter.com/UjjS9cc9OyIn 2010 - Steve Smith made his Test debut at Lord's & batted at 8.
— Johns. (@CricCrazyJohns) June 29, 2023
In 2023 - Steve Smith completed his 32nd Test hundred at Lord's.
One of the Greatest turn-arounds in cricket history. pic.twitter.com/UjjS9cc9Oy
ಫ್ಯಾಬ್ 4ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ: ಪ್ರಸ್ತುತ ಕಾಲದ ನಾಲ್ವರು ಅತ್ಯುತ್ತಮ ಟೆಸ್ಟ್ ಆಟಗಾರರಾದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರನ್ನು ಫ್ಯಾಬ್-4 ಎಂದು ಕರೆಯಲಾಗುತ್ತದೆ. ಈ ಫ್ಯಾಬ್-4ರಲ್ಲಿ ಸ್ಟೀವ್ ಸ್ಮಿತ್ ಗರಿಷ್ಠ 32 ಟೆಸ್ಟ್ ಶತಕಗಳನ್ನು ಗಳಿಸಿದ ಬ್ಯಾಟರ್ ಆಗಿದ್ದಾರೆ. ಇದಾದ ಬಳಿಕ 30 ಟೆಸ್ಟ್ ಶತಕ ಸಿಡಿಸಿದ ಜೋ ರೂಟ್ ಇದ್ದಾರೆ. ಕೇನ್ ವಿಲಿಯಮ್ಸನ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ತಮ್ಮ ಹೆಸರಿನಲ್ಲಿ ತಲಾ 28 ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: Ashes 2023: ಸತತ 100 ಟೆಸ್ಟ್ ಪಂದ್ಯ ಆಡಿದ ನಾಥನ್ ಲಿಯಾನ್; ಈ ಸಾಧನೆ ಮಾಡಿದ ಭಾರತೀಯ ಆಟಗಾರರು ಯಾರು ಗೊತ್ತೇ?