ಅಫ್ಘಾನಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ನಡುವೆಯೇ ಶ್ರೀಲಂಕಾದ ಮೂವರು ಆಟಗಾರರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. 2 ಮತ್ತು 3 ನೇ ಏಕದಿನ ಪಂದ್ಯದ ಮಧ್ಯೆ 3 ದಿನ ಬಿಡುವು ನೀಡಲಾಗಿದೆ. ಈ ಸಮಯದಲ್ಲಿಯೇ ಲಂಕಾ ಆಟಗಾರರು ತಮ್ಮ ಬಾಳಸಂಗಾತಿಯ ಕೈ ಹಿಡಿದಿದ್ದಾರೆ.
-
Congratulations to Charith Asalanka, Pathum Nissanka and Kasun Rajitha! 💍🎉 pic.twitter.com/qlUZKtOMVG
— Sri Lanka Cricket 🇱🇰 (@OfficialSLC) November 28, 2022 " class="align-text-top noRightClick twitterSection" data="
">Congratulations to Charith Asalanka, Pathum Nissanka and Kasun Rajitha! 💍🎉 pic.twitter.com/qlUZKtOMVG
— Sri Lanka Cricket 🇱🇰 (@OfficialSLC) November 28, 2022Congratulations to Charith Asalanka, Pathum Nissanka and Kasun Rajitha! 💍🎉 pic.twitter.com/qlUZKtOMVG
— Sri Lanka Cricket 🇱🇰 (@OfficialSLC) November 28, 2022
ಆಲ್ರೌಂಡರ್ ಕಸುನ್ ರಜಿಥಾ, ಬ್ಯಾಟರ್ ಚರಿಥಾ ಅಸಲಂಕಾ, ಫಥುಮಾ ನಿಸ್ಸಂಕಾ ಇಂದು ಹಸೆಮಣೆ ಏರಿದ್ದಾರೆ. ಮೂವರು ಆಟಗಾರರ ವಿವಾಹದ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶುಭಾಶಯ ತಿಳಿಸಿದೆ. ಕ್ರಿಕೆಟಿಗರ ವಿವಾಹಕ್ಕೆ ಮಾಜಿ ಆಟಗಾರರು, ಅಭಿಮಾನಗಳು ಕೂಡ ಶುಭಾಶಯ ಕೋರಿದ್ದಾರೆ. ಕ್ರಿಕೆಟ್ ಜೀವನದ ಜೊತೆಗೆ ವೈಯಕ್ತಿಕ ಜೀವನವೂ ಉತ್ತಮವಾಗಿರಲಿ ಎಂದು ಹರಸಿದ್ದಾರೆ.
ಇನ್ನು ಮೂವರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ಮೊದಲ ಪಂದ್ಯವನ್ನು 60 ರನ್ಗಳಿಂದ ಅಫ್ಘನ್ ಮುಂದೆ ಶರಣಾಗಿತ್ತು. ಬಳಿಕ ಭಾನುವಾರ ನಡೆದ 2ನೇ ಪಂದ್ಯ ಮಳೆಗೆ ಆಹುತಿಯಾಗಿತ್ತು. ಮೂರನೇ ಪಂದ್ಯ ನವೆಂಬರ್ 30 ರಂದು ನಡೆಯಲಿದೆ.
ಇದನ್ನೂ ಓದಿ: 2 ಡಬ್ಲ್ಯೂಬಿಸಿ ಪ್ರಶಸ್ತಿಗೆ ಪಂಚ್ ಮಾಡಿದ ಭಾರತದ ಬಾಕ್ಸರ್ ಊರ್ವಶಿ ಸಿಂಗ್